ಹಿರೀಸಾವೆ: ದೇಸಿ ತಳಿಯ ಜಾನುವಾರುಗಳ ಅಭಿವೃದ್ಧಿಗೆ ರೈತರು ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಹೋಬಳಿಯ ಬೂಕನಬೆಟ್ಟದ ರಂಗನಾಥ ಸ್ವಾಮಿ ಬೆಟ್ಟದ ಮುಂಭಾಗ ಗುರುವಾರ ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಸಿ ತಳಿಯ ಹಸುಗಳ ಹಾಲು, ಮೊಸರು, ಮಜ್ಜಿಗೆ, ತುಪ್ಪ ನಮ್ಮ ಆರೋಗ್ಯಕ್ಕೆ ತುಂಬ ಒಳ್ಳೆಯದು. ಔಷಧೀಯ ಗುಣಗಳನ್ನು ಹೊಂದಿದೆ. ಕೃಷಿಗೆ ಉತ್ತಮವಾದ ಗೊಬ್ಬರ, ನಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತದೆ ಎಂದರು.

ಈ ಜಾತ್ರೆಯ ತುಂಬ ಸಾವಿರಾರು ಹಳ್ಳಿಕಾರ್ ತಳಿಯ ಎತ್ತು, ಹೋರಿಗಳು ಬಂದಿರುವುದು ರೈತರಲ್ಲಿ ಹರ್ಷ ಮೂಡಿಸಿದೆ. ಉತ್ತಮ ವ್ಯಾಪಾರ ನಡೆಯುತ್ತದೆ. ಜಾತ್ರೆಯಲ್ಲಿ ಜಾನುವಾರುಗಳಿಗೆ ಮತ್ತು ಜನರಿಗೆ ಬೇಕಾದ ನೀರು, ಬೆಳಕು ಸೇರಿದಂತೆ ಮೂಲಸೌಲಭ್ಯಗಳನ್ನು ಹಾಸನ ಹಾಲು ಒಕ್ಕೂಟ, ಸ್ಥಳೀಯ ದಾನಿಗಳು ಮತ್ತು ಮತಿಘಟ್ಟ, ಬೆಳಗೀಹಳ್ಳಿ ಪಂಚಾಯಿತಿಗಳ ಸಹಕಾರದಿಂದ ಒದಗಿಸಲಾಗಿದೆ. ಜ.19 ರಂದು ಜರುಗುವ ರಥೋತ್ಸವಕ್ಕೆ ತಾಲ್ಲೂಕು ಆಡಳಿತದ ವತಿಯಿಂದ ಸಕಲ ಸಿದ್ದತೆ ಮಾಡುತ್ತಿದ್ದಾರೆ. ಜಾತ್ರೆ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಉಪ ತಹಶೀಲ್ದಾರ್ ಬಿ.ಎಸ್. ರವಿ, ಕಂದಾಯ ನಿರೀಕ್ಷಕ ಎಸ್.ಎಲ್. ಯೋಗೀಶ್, ಮುಖಂಡರಾದ ಎಚ್.ಜಿ. ರಾಮಕೃಷ್ಣ, ಎಚ್.ಎಸ್. ರವಿಕುಮಾರ್, ಎಚ್.ಜೆ. ದಿನೇಶ್, ಸರ್ವೆರ್ ಬಾಬು, ಹೊನ್ನೇನಹಳ್ಳಿ ಜಯಣ್ಣ, ಬೂಕದ ಗುರು, ಪೂಮಾಡಿಹಳ್ಳಿ ನಿಖಿಲ್ ಗೌಡ, ಜಗದೀಶ್, ರಾಜು, ಪಾರುಪತ್ತೇದಾರ ರಂಗರಾಜು, ಕಂದಾಯ ಮತ್ತು ಪಶುಪಾಲನಾ ಇಲಾಖೆಯ ಸಿಬ್ಬಂದಿ ಇದ್ದರು.

ಕೃಷಿ ಮೇಳ ಇಂದಿನಿಂದ

ಪೂರ್ವಭಾವಿ ಸಭೆಯಲ್ಲಿ ಕೃಷಿ ಮೇಳವನ್ನು ಶನಿವಾರ ಭಾನುವಾರಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಜಾತ್ರೆಗೆ ಈಗಾಗಲೇ ಹೆಚ್ಚು ರೈತರು ಬಂದಿರುವುದರಿಂದ ಶುಕ್ರವಾರದಿಂದ ಕೃಷಿ ಮೇಳ ಏರ್ಪಡಿಸಲಾಗಿದೆ. ಜಾತ್ರೆಯಲ್ಲಿನ ಉತ್ತಮವಾದ 18 ಜೊತೆ ಎತ್ತುಗಳಿಗೆ ಚಿನ್ನದ ಬಹುಮಾನ ನೀಡುವುದಾಗಿ ಶಾಸಕ ಬಾಲಕೃಷ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.