ಇಲ್ಲಿ ಕಳೆದ 17 ವರ್ಷಗಳಿಂದ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಿಲ್ಪಿ ಹಾರನಹಳ್ಳಿ ಮಹದೇವ್ ಹಾಗೂ ಇತರರು ಒಂದೇ ಶೈಲಿ ಮೂರ್ತಿ ತಯಾರಿಸುತ್ತಾರೆ. ಅದಕ್ಕಾಗಿ ಮೂರ್ತಿ ವಿಶೇಷವಾಗಿರಬೇಕು ಎಂಬ ವಿಚಾರದಿಂದ ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣವಾದ ₹ 60 ಸಾವಿರ ವೆಚ್ಚದ ಗಣಪತಿ ಮೂರ್ತಿ ಕೂರಿಸಿದ್ದು ನೋಡಲು ಸುಂದರ ಹಾಗೂ ವಿಶೇಷವಾಗಿದೆ.