ಅರಸೀಕೆರೆ: ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿವಮೊಗ್ಗದಿಂದ ಬೆಂಗಳೂರಿಗೆ ಕಡೆಗೆ ಸಾಗುತ್ತಿದ್ದ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನ ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ನಗರದಲ್ಲಿ ಸ್ವಾಗತಿಸಿ ಬೀಳ್ಕೊಟ್ಟರು.
ಅರಸೀಕೆರೆ ಮಾರ್ಗವಾಗಿ ಆಗಮಿಸುವ ಮಾಹಿತಿ ತಿಳಿದ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ಜೆಡಿಎಸ್ ಮುಖಂಡರಾದ ಬಿಜಿ ನಿರಂಜನ್, ರಮೇಶ್ ಗಣೇಶ್ ಸೇರಿದಂತೆ ಎನ್ ಡಿಎ ಮುಖಂಡರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಾರ ಹಾಕುವ ಮೂಲಕ ಬರಮಾಡಿಕೊಂಡರು.
ತಮ್ಮನ್ನು ಸ್ವಾಗತಿಸಿದ ಜೆಡಿಎಸ್ ಬಿಜೆಪಿ ಎರಡು ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳ ಕುಶಲೋಪರಿ ವಿಚಾರಿಸಿದ ಕೇಂದ್ರ ಸಚಿವರು ಸಧ್ಯದಲ್ಲೇ ಅರಸೀಕೆರೆಗೆ ಭೇಟಿ ನೀಡಿ ಜೆಡಿಎಸ್ ಬಿಜೆಪಿ ಎರಡು ಪಕ್ಷದ ಕಾರ್ಯಕರ್ತರು ಮುಖಂಡರ ಸಭೆ ನಡೆಸುತ್ತೇನೆ ಎಂದು ಹೇಳಿ ನಿರ್ಗಮಿಸಿದರು.