ಅರಸೀಕೆರೆ: ‘ಪತ್ರಿಕಾ ವಿತರಕರು ದಿನ ಪತ್ರಿಕೆಗಳ ಬೆನ್ನಲುಬಾಗಿ ಕೆಲಸ ಮಾಡುತ್ತಿದ್ದು, ನಸುಕಿನಲ್ಲಿ ಪತ್ರಿಕೆ ವಿತರಿಸುವ ಮೂಲಕ ಪ್ರಚಲಿತ ಘಟನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ಅವರ ಭವಿಷ್ಯ ಸುಧಾರಣೆಯಾಗಲಿ’ ಎಂದು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಭಿಪ್ರಾಯಟಪಟ್ಟರು.

ತಾಲ್ಲೂಕಿನ ಹಾರನಹಳ್ಳಿಯ ಕೋಡಿಮಠದಲ್ಲಿ ಗುರುವಾರ ನಡೆದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ವಿತರಕರಿಗೆ ಟೀ ಶರ್ಟ್ ನೀಡಿ ಅವರು ಮಾತನಾಡಿದರು.

‘ಕೊರೆಯುವ ಚಳಿಯಿರಲಿ, ಸುರಿಯುವ ಮಳೆ ಇರಲಿ, ಮನೆಯಲ್ಲಿ ಕಹಿ-ಸಿಹಿ ಘಟನೆ ಇರಲಿ ಇವರ ಕಾಯಕ ಮಾತ್ರ ನಿರಂತರವಾಗಿರುತ್ತದೆ. ವಿತರಕರ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ವಿತರಕರು ಹಾಗೂ ಪತ್ರಕರ್ತರು ಸಂಘಟಿತರಾಗಬೇಕು. ಪತ್ರಿಕೆ ಹಂಚುವ ಹುಡುಗರಿಗೂ ಒಂದು ದಿನ ಆಚರಣೆಲ್ಲಿರುವುದು ಸಂತಸದ ವಿಚಾರವಾಗಿದ್ದು, ಇದರ ಜತೆಯಲ್ಲಿ ವಿದ್ಯೆಗೂ ಒತ್ತು ನೀಡಿ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಿ’ ಎಂದು ಆಶಿಸಿದರು.

ವಿಶೇಷ ಪ್ಯಾಕೇಜ್ಗೆ ಆಗ್ರಹ:

ಉದ್ಯಮಿ ರಾಘು ಮಾತನಾಡಿ, ‘ಮುಂಜಾನೆ ಎದ್ದು ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಬಹುತೇಕ ಹುಡುಗರು ಬಡ, ಶ್ರಮಿಕ ವರ್ಗಕ್ಕೆ ಸೇರಿದವರು. ಕೆಲವರು ಶಿಕ್ಷಣ ಪಡೆಯುತ್ತಲೇ ನಿತ್ಯದ ಖರ್ಚುಗಳನ್ನು ನಿಭಾಯಿಸಲು ವಿತರಣೆಯಲ್ಲಿ ತೊಡಗಿದ್ದಾರೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಅವರಿಗೆ ಗುರುತಿಸಿ ವಿಶೇಷ ಪ್ಯಾಕೆಜ್ ನೀಡಿ ಶೈಕ್ಷಣಿಕ ಬದುಕಿಗೆ ಆಸರೆ ಆಗಬೇಕು’ ಎಂದು ಹೇಳಿದರು.

ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಪರಮೇಶ್ ಹಾಗೂ ತಾಲ್ಲೂಕು ವಿತರಕ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿದರು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ವಿತರಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.