ಸೋಮವಾರ, ಆಗಸ್ಟ್ 8, 2022
21 °C

ಹೊಳೆನರಸೀಪುರ: ಕೋವಿಡ್‌ ಕೇಂದ್ರದಲ್ಲಿ ಅಸಮರ್ಪಕ ಚಿಕಿತ್ಸೆ, ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ‘ತಾಲ್ಲೂಕಿನ ಎಸ್.ಅಂಕನಹಳ್ಳಿಯ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಸಮರ್ಪಕವಾಗಿ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದಾಗಿ ನನ್ನ ತಂದೆ ಮೃತಪಟ್ಟಿದ್ದಾರೆ’ ಎಂದು ಪಟ್ಟಣದ ಮಂಜು ದೂರಿದ್ದಾರೆ.

‘ಸೆ.3ರಂದು ತಂದೆಗೆ ಉಸಿರಾಟದ ತೊಂದರೆ ಉಂಟಾಗಿತ್ತು. ಕೋವಿಡ್‌ ದೃಢ ಪಟ್ಟ ಬಳಿಕ ಅಂಕನಹಳ್ಳಿ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಲಾಗಿತ್ತು. ತಂದೆಗೆ ಉಸಿರಾಟದ ತೊಂದರೆ ಇದ್ದರೂ ವೆಂಟಿಲೇಟರ್ ಇಲ್ಲದ ಎಸ್.ಅಂಕನಹಳ್ಳಿ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಿದ್ದರು. ಉಸಿರಾಟದ ತೊಂದರೆ ಹೆಚ್ಚಾಗುತ್ತಿದೆ. ಇಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಹೇಳುತ್ತಿದ್ದರು. ಬುಧವಾರ ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟರು. ಸೌಲಭ್ಯ ಇಲ್ಲದ ಚಿಕಿತ್ಸಾ ಕೇಂದ್ರಕ್ಕೆ ಸೇರಿಸಿದ ವೈದ್ಯರೇ ತಂದೆಯ ಸಾವಿಗೆ ಕಾರಣ’ ಎಂದರು.

ಈ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ ಪ್ರತಿಕ್ರಿಯಿಸಿ, ‘ಮೃತರಿಗೆ ಸಿಂಪ್ಟಮ್ ಎ ಇದ್ದ ಕಾರಣ ಎಸ್.ಅಂಕನಹಳ್ಳಿ ಕೋವಿಡ್ ಚಿಕಿತ್ಸಾ ಕೆಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದೆವು. ಬುಧವಾರ ಉಸಿರಾಟ ತೊಂದರೆ ಕಾಣಿಸಿಕೊಂಡ ಕಾರಣ ಪಟ್ಟಣದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊಡಿಸಲು ಕರೆ ತಂದಿದ್ದರು. ಚಿಕಿತ್ಸೆ ನೀಡುವ ಮುನ್ನ ಸ್ಪಂದಿಸಿದ್ದರೆ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳುಹಿಸಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು