ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲೂರು | ಬಾಡಿಗೆ ನೀಡಲು ಒಂದು ವಾರದ ಗಡುವು

Published 26 ಜೂನ್ 2023, 15:30 IST
Last Updated 26 ಜೂನ್ 2023, 15:30 IST
ಅಕ್ಷರ ಗಾತ್ರ

ಬೇಲೂರು: ಬಾಡಿಗೆ ಬಾಕಿ ಉಳಿಸಿಕೊಂಡಿರುವ ಪುರಸಭಾ ವಾಣಿಜ್ಯ ಮಳಿಗೆಗಳ ಬಾಡಿಗೆದಾರರಿಗೆ ಬಾಡಿಗೆ ಪಾವತಿಸಲು, ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ ಒಂದು ವಾರದ ಗಡುವು ನೀಡಿದರು.

ಇಲ್ಲಿನ ಪುರಸಭಾ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿಗೆ ಸೋಮವಾರ ಖುದ್ದು ಭೇಟಿ ನೀಡಿ ಬಾಡಿಗೆದಾರರಿಗೆ ಬಾಡಿಗೆ ನೀಡುವಂತೆ ಹೇಳಿ ಹಾಗೂ ಸ್ಥಳದಲ್ಲೇ ₹5 ಲಕ್ಷ ಬಾಡಿಗೆ ವಸೂಲಿ ಮಾಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪುರಸಭೆ 193 ಮಳಿಗೆಗಳಿಂದ ಸುಮಾರು ₹1 ಕೋಟಿ ಬಾಡಿಗೆ ಬರಬೇಕಿದ್ದು, ಕರ ವಸೂಲಿಗಾರರು ಮತ್ತು ಅಧಿಕಾರಿಗಳು ಕೇಳಲು ಹೋದರೆ ಅವರಿಗೆ, ಬಾಡಿಗೆದಾರರು ಸ್ಪಂದಿಸದೆ, ಹಾರಿಕೆ ಉತ್ತರ ನೀಡುತ್ತಿದ್ದರು. ಆದ್ದರಿಂದ ಇಂದು ಖುದ್ದು ನಾನೇ ಬಾಡಿಗೆ ವಸೂಲಾತಿಗೆ ಅಧಿಕಾರಿಗಳ ಜೊತೆ ಬಂದಿದ್ದೇನೆ. 2023ರ ಡಿಸೆಂಬರ್‌‌‌‌ಗೆ ಬಾಡಿಗೆ ಕರಾರು ಅವಧಿ ಮುಗಿಯಲಿದ್ದು ನಂತರ 193 ಮಳಿಗೆಗಳನ್ನು ಮರು ಹರಾಜು ಮಾಡಲಾಗುವುದು’ ಎಂದರು.

ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ‘ಬಾಡಿಗೆ ಬಾಕಿ ಇರುವವರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಒಂದು ವಾರದಲ್ಲಿ ಬಾಕಿ ಉಳಿಸಿಕೊಂಡಿರುವ ಸಂಪೂರ್ಣ ಬಾಡಿಗೆಯನ್ನು ಕಟ್ಟದಿದ್ದರೆ ಕಾನೂನಿನಂತೆ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದರು.

ಈ ಸಂದರ್ಭದಲ್ಲಿ ಕಂದಾಯಾಧಿಕಾರಿ ಹರೀಶ್, ಕಂದಾಯ ನಿರೀಕ್ಷಕ ಪ್ರಸನ್ನ, ಆರೋಗ್ಯಾಧಿಕಾರಿ ಲೋಹಿತ್, ಜ್ಯೋತಿ, ದಿನೇಶ್, ಕರವಸೂಲಿಗಾರ ಆನಂದ್, ಪೃಥ್ವಿ, ಸಲ್ಮಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT