ಹೆತ್ತೂರು: ಸಮೀಪದ ಹಾಡ್ಲಹಳ್ಳಿ, ಐಗೂರು, ಬೂಬ್ಬನಹಳ್ಳಿ, ಹಾಡ್ಯ, ಬಾಚ್ಚಿಹಳ್ಳಿ, ಚಿಕ್ಕಂದೂರು ಗ್ರಾಮದ ಗದ್ದೆ, ಕಾಫಿ ತೋಟದಲ್ಲಿ ಕಾಡಾನೆ ದಾಳಿ ನಡೆಸಿ ಭತ್ತ ಹಾಗೂ ಕಾಫಿ ಫಸಲು ನಾಶ ಮಾಡಿವೆ. ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹೆತ್ತೂರು ಗ್ರಾಮದ ಷಣ್ಮುಖ ಮಂದ ಪಟೇಲ್ ಮಾತನಾಡಿ, 2023ರಲ್ಲಿ ಭತ್ತದ ಗದ್ದೆಗೆ ಕಾಡಾನೆ ದಾಳಿ ನಡೆಸಿ, ಭತ್ತದ ಫಸಲು ನಾಶ ಮಾಡಿವೆ. ಕಾಡಾನೆಯಿಂದ ಆದ ಬೆಳೆ ನಷ್ಟಕ್ಕೆ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈವರೆಗೆ ಅರಣ್ಯ ಅಧಿಕಾರಿಗಳು ಪರಿಹಾರ ನೀಡಿಲ್ಲ. ಈ ವರ್ಷವೂ ಮತ್ತೆ ಕಾಡಾನೆ ದಾಳಿ ಮಾಡಿ ಭತ್ತದ ಬೆಳೆ ಹಾಳು ಮಾಡಿವೆ. ನಷ್ಟದ ಪರಿಹಾರ ಕೂಡಲೇ ಒದಗಿಸುವಂತೆ ಆಗ್ರಹಿಸಿದರು.

ಹಾಡ್ಯ ರಮೇಶ್ ಮಾತನಾಡಿ, ಈಚೆಗೆ ಹೆತ್ತೂರು, ಯಸಳೂರು ಹೋಬಳಿಯ ಹಲವೆಡೆಗಳಲ್ಲಿ ನಿತ್ಯ ಕಾಡಾನೆಗಳು, ತೋಟ ಮತ್ತು ಗದ್ದೆಗಳಿಗೆ ದಾಳಿ ನಡೆಸುತ್ತಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.