ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರವಣಬೆಳಗೊಳ | ಬಾಹುಬಲಿ ದರ್ಶನ ಪಡೆದ ತಮಿಳುನಾಡು ರಾಜ್ಯಪಾಲರು

Published 14 ಮೇ 2024, 15:25 IST
Last Updated 14 ಮೇ 2024, 15:25 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ತಮಿಳುನಾಡು ರಾಜ್ಯದ ರಾಜ್ಯಪಾಲ ಆರ್.ಎನ್. ರವಿ ಹಾಗೂ ಅವರ ಪತ್ನಿ ಲಕ್ಷ್ಮಿ ಮಂಗಳವಾರ ಶ್ರೀಕ್ಷೇತ್ರ ಶ್ರವಣಬೆಳಗೊಳದ ವಿಂದ್ಯಗಿರಿ ಬೆಟ್ಟಕ್ಕೆ ಭಗವಾನ್  ಬಾಹುಬಲಿ ಸ್ವಾಮಿ ಹಾಗೂ ಅಧಿ ದೇವತೆ  ಕೂಷ್ಮಾಂಡಿನಿ ದೇವಿಯ ದರ್ಶನ ಪಡೆದರು. 

ಕ್ಷೇತ್ರದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಆಶೀರ್ವಾದ ಪಡೆದರು. ರವಿ ದಂಪತಿ ಗೆ ಕ್ಷೇತ್ರದದಿಂದ ಗ್ರಂಥಗಳು, ಶ್ರೀಫಲ ಹಾಗೂ ರಜತ ಕಲಶ ನೀಡಿ ಗೌರವಿಸಲಾಯಿತು.

 ‘ವಿಶ್ವಪ್ರಸಿದ್ದ ಬಾಹುಬಲಿ ಸ್ವಾಮಿಯ ಏಕಶಿಲಾ ಮೂರ್ತಿ, ಕ್ಷೇತ್ರದ ಐತಿಹಾಸಿಕ ಹಿನ್ನೆಲೆ, ಶಿಲಾ ಶಾಸನಗಳು, ಧಾರ್ಮಿಕ ವಿಧಿ, ಕಲೆ-ಸಾಹಿತ್ಯದ ಜೀವಂತಿಕೆಯನ್ನು ನೋಡಿ ಬಹಳ ಖುಷಿಯಾಯಿತು. ಶಾಲಾ ದಿನಗಳಲ್ಲಿ ಚಂದ್ರಗುಪ್ತ ಮೌರ್ಯ ಹಾಗೂ ಭದ್ರಬಾಹು ಮುನಿಗಳ ಬಗ್ಗೆ ಓದಿದ್ದೆನು. ಅಂದಿನಿಂದಲೂ ಶ್ರವಣಬೆಳಗೊಳಕ್ಕೆ ಬರಬೇಕು ಎಂದು ಅಪೇಕ್ಷೆ ಇತ್ತು ಎಂದು ರಾಜ್ಯಪಾಲ ರವಿ ಹೇಳಿದರು. 2030ರ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಬರುವುದಾಗಿ ತಿಳಿಸಿದರು.

ಶ್ರವಣಬೆಳಗೊಳದ ಶ್ರೀಜೈನ ಮಠದಲ್ಲಿ ತಮಿಳುನಾಡು ರಾಜ್ಯಪಾಲರಾದ ಆರ್.ಎನ್. ರವಿ ಮತ್ತು ಅವರ ಶ್ರೀಮತಿಯವರನ್ನು ಕ್ಷೇತ್ರದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಂಗಳವಾರ ಸನ್ಮಾನಿಸಿದರು.
ಶ್ರವಣಬೆಳಗೊಳದ ಶ್ರೀಜೈನ ಮಠದಲ್ಲಿ ತಮಿಳುನಾಡು ರಾಜ್ಯಪಾಲರಾದ ಆರ್.ಎನ್. ರವಿ ಮತ್ತು ಅವರ ಶ್ರೀಮತಿಯವರನ್ನು ಕ್ಷೇತ್ರದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಮಂಗಳವಾರ ಸನ್ಮಾನಿಸಿದರು.
ತಮಿಳುನಾಡು ರಾಜ್ಯಪಾಲರಾದ  ಆರ್.ಎನ್.ರವಿ ಅವರು ವಿಂಧ್ಯಗಿರಿ ಬೆಟ್ಟದ ಭಗವಾನ್ ಬಾಹುಬಲಿ ದರ್ಶನ ಪಡೆದರು.
ತಮಿಳುನಾಡು ರಾಜ್ಯಪಾಲರಾದ  ಆರ್.ಎನ್.ರವಿ ಅವರು ವಿಂಧ್ಯಗಿರಿ ಬೆಟ್ಟದ ಭಗವಾನ್ ಬಾಹುಬಲಿ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT