ಆಲೂರು: ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಕುಂದೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಾಳ್ಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬಾಲಕಿಯರು ಶನಿವಾರ ಸಮಗ್ರ ಪ್ರಶಸ್ತಿ ಗಳಿಸಿದರು.
ಇದೇ ಶಾಲೆಯ ವಿದ್ಯಾರ್ಥಿನಿ ಪಲ್ಲವಿ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
ಕಬಡ್ಡಿ, ಕೊಕ್ಕೊ, ವಾಲಿಬಾಲ್, ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಂಶುಪಾಲೆ ಶ್ವೇತಾ ಅವರು ತರಬೇತಿ ಶಿಕ್ಷಕರಾದ ಚಂದು, ಮಹೇಂದ್ರ, ಪ್ರದೀಪ್, ಕೀರ್ತಿ, ವೀರೇಶ್, ಸೌಮ್ಯಾ, ರಶ್ಮಿ, ಪೂರ್ಣಿಮಾ, ಲತಾ, ತುಂಗಾ ಮತ್ತು ವಿಜೇತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.