ಹಾಸನ: ತಾಲ್ಲೂಕಿನ ಸೀಗೆ ಗ್ರಾಮದ ಬಳಿ ಶಿಕ್ಷಕಿ ಶಕುಂತಲಾ ಅವರ ಮೇಲೆ ಬೀದಿ ನಾಯಿಗಳು ಶನಿವಾರ ದಾಳಿ ನಡೆಸಿ ಗಾಯಗೊಳಿಸಿವೆ.
ವೀರಾಪುರ ಗ್ರಾಮದ ಶಾಲೆಗೆಬೆಳಿಗ್ಗೆಸೀಗೆ ಕೆರೆ ಏರಿ ಮೇಲೆ ನಡೆದುಕೊಂಡು ಹೋಗುವಾಗ ದಿಢೀರ್ ದಾಳಿ ಮಾಡಿದ ಬೀದಿ ನಾಯಿಗಳಹಿಂಡು ಶಿಕ್ಷಕಿಯ ಮುಖದ ಭಾಗಕ್ಕೆ ಕಚ್ಚಿ ಗಾಯಗೊಳಿಸಿವೆ. ಶಿಕ್ಷಕಿಯ ಚೀರಾಟ ಕೇಳಿ ಸ್ಥಳೀಯರು ಸಹಾಯಕ್ಕೆ ಧಾವಿಸಿದರು. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
‘ಹಾಸನ ನಗರ ಸೇರಿದಂತೆ ತಾಲ್ಲೂಕಿನಾದಾದ್ಯಂತ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ. ಈ ಬಗ್ಗೆ ನಗರಸಭೆಗೆ ಸಾಕಷ್ಟು ಬಾರಿ ದೂರು ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂಬುದು ಸಾರ್ವಜನಿಕರು ಆರೋಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.