ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ ಹಬ್ಬ: ಹಿರೀಸಾವೆ ವಾರದ ಸಂತೆಯಲ್ಲಿ ಹೆಚ್ಚಿದ ತರಕಾರಿ ಬೆಲೆ

Published 8 ಏಪ್ರಿಲ್ 2024, 7:37 IST
Last Updated 8 ಏಪ್ರಿಲ್ 2024, 7:37 IST
ಅಕ್ಷರ ಗಾತ್ರ

ಹಿರೀಸಾವೆ: ಹೋಬಳಿಯಲ್ಲಿ ಮಳೆಯ ಕೊರತೆ, ಹೆಚ್ಚುತ್ತಿರುವ ಬಿಸಿಲಿನಿಂದ 38 ರಿಂದ 40 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ, ನೀರಿಲ್ಲದೇ ತರಕಾರಿ ಫಸಲು ಕುಂಠಿತವಾಗಿದ್ದು, ಯುಗಾದಿ ಹಬ್ಬದ ವಾರದ ಸಂತೆಯಲ್ಲಿ ಟೊಮ್ಯಾಟೋ ಮತ್ತು ಈರುಳ್ಳಿ ಕೆ.ಜಿ.ಗೆ ₹ 15 ರಿಂದ ₹ 20 ಇದ್ದರೆ, ಉಳಿದ ತರಕಾರಿಗಳ ಬೆಲೆ ₹ 40ಕ್ಕಿಂತ ಹೆಚ್ಚಾಗಿತ್ತು.

ಪ್ರತಿ ಭಾನುವಾರ ಇಲ್ಲಿ ವಾರದ ಸಂತೆ ನಡೆಯುತ್ತದೆ. ಹೋಬಳಿಯ ಜನರು ತರಕಾರಿ ಕೊಳ್ಳುತ್ತಾರೆ. ಶುಂಠಿ ಬೆಲೆ ₹ 150 ರಿಂದ ₹ 200 ದಾಟಿದೆ. ನಾಟಿ ಬೆಳ್ಳುಳ್ಳಿ ಸಹ ₹ 200 ರಿಂದ 220 ಆಗಿದೆ.

ಬಹುತೇಕ ಎಲ್ಲ ರೀತಿಯ ಸೋಪ್ಪುಗಳು ₹ 10ಕ್ಕೆ ಒಂದು ಕಂತೆಯಾದರೆ, ಹಸಿ ಮೆಣಸಿನಕಾಯಿ, ಬೀನ್ಸ್ ₹ 100 ರಿಂದ ₹ 120, ಬದನೆಕಾಯಿ, ಕ್ಯಾರೆಟ್, ಬೀಟ್‌ರೂಟ್ ಸೇರಿದಂತೆ ಇತರೇ ತರಕಾರಿಗಳು ಕೆಜಿಗೆ ₹ 50 ರಿಂದ ₹ 60 ಇತ್ತು. ಪಚ್ಚೆ ಬಾಳೆಹಣ್ಣು ಕೆ.ಜಿ.ಗೆ ₹ 30 ರಿಂದ ₹ 40 ಮತ್ತು ಪುಟ್ಟ ಬಾಳೆಹಣ್ಣು ₹ 50 ರಿಂದ ₹ 60 ರೂ ಇತ್ತು. ಮೂರು, ನಾಲ್ಕು ಸೌತೆಕಾಯಿಗೆ ₹ 50, 3-4 ಲಿಂಬೆಹಣ್ಣು ₹20 ಬೆಲೆ ಇತ್ತು.

ಬಹುತೇಕ ತರಕಾರಿಗಳ ಬೆಲೆ ₹ 40 ಕ್ಕಿಂತ ಕಡಿಮೆ ಇಲ್ಲ ಎಂದು ತರಕಾರಿ ವ್ಯಾಪಾರಿ ಮಂಜು ಹೇಳಿದರು. ಮಾರುಕಟ್ಟೆಗೆ ಹೆಚ್ಚು ಬಾಳೆಹಣ್ಣು ಬಂದಿರುವುದರಿಂದ ಬಾಳೆಹಣ್ಣಿನ ಬೆಲೆ ಮತ್ತು ವ್ಯಾಪಾರವೂ ಕಡಿಮೆಯಾಗಿದೆ ಎನ್ನುತ್ತಾರೆ ಬಾಳೆಹಣ್ಣಿನ ವ್ಯಾಪಾರಿ ಪುಟ್ಟಸ್ವಾಮಿ.

ಸಣ್ಣ ಈರುಳ್ಳಿ ₹ 100 ಕ್ಕೆ 5 ರಿಂದ 6 ಕೆ.ಜಿ., ಉತ್ತಮ ಈರುಳ್ಳಿ ₹ 100 ಕ್ಕೆ 4 ಕೆಜಿ ಆಗಿದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿ ನಾಗರಾಜು.

ಸೇಬು ಹಣ್ಣು ಕೆ.ಜಿ.ಗೆ ₹ 200, ದ್ರಾಕ್ಷಿ ₹ 100, ಕರ್ಬುಜ ₹ 50, ದಾಳಿಂಬೆ ₹ 180, ಮೊಸಂಬಿ ಮತ್ತು ಕಿತ್ತಳೆ ₹ 80 –₹ 100, ಸಪೋಟ್ ₹ 60 ಇದೆ ಎಂದು ಹಣ್ಣಿನ ವ್ಯಾಪಾರಿ ನವೀನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT