ಹಾಸನ: ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸಭೆ ಶನಿವಾರ ನಗರದ ತಣ್ಣೀರುಹಳ್ಳ ಮಠದ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಸಾನ್ನಿಧ್ಯ ವಹಿಸಿದ್ದ ತಣ್ಣೀರುಹಳ್ಳ ಮಠದ ಮಠಾಧೀಶ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಗೌರವಾಧ್ಯಕ್ಷ ವಿಜಯಕುಮಾರ್ ಸ್ವಾಮೀಜಿ ಮಾತನಾಡಿ, ‘ವೀರಶೈವ–ಲಿಂಗಾಯತ ಎರಡು ಒಂದೇ. ವೀರಶೈವರು, ಲಿಂಗಾಯತರು ಲಿಂಗವನ್ನು ಧರಿಸುವ ಮೂಲಕ ಲಿಂಗಧಾರಣೆ, ಲಿಂಗಪೂಜೆಯಂತಹ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮೆಲ್ಲರ ಸಂಸ್ಕೃತಿ ಒಂದೇ. ನಾವೆಲ್ಲ ಒಗ್ಗಟ್ಟಾಗಿ ಹೋಗಬೇಕಾಗಿದೆ’ ಎಂದರು.

ವೀರಶೈವ ಲಿಂಗಾಯತದ ಸಂಘಟನೆ ಅಗತ್ಯವಾಗಿದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಅವರಿಗೆ ಸಮಾಜದ ಲಿಂಗಪೂಜೆ, ಧಾರ್ಮಿಕ ವಿಚಾರಗಳನ್ನು ಕಲಿಸಬೇಕು. ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

‘ಮುಂದಿನ ತಿಂಗಳು ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ನಡೆಯುವ ವಿಭಾಗ ಮಟ್ಟದ ವೀರಶೈವ–ಲಿಂಗಾಯತ ಮಹಾಸಭೆಯ ಕಾರ್ಯಾಗಾರದಲ್ಲಿ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಭಾಗವಹಿಸಿ’ ಎಂದು ಮನವಿ ಮಾಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮಾತನಾಡಿ, ‘ವೀರಶೈವ –ಲಿಂಗಾಯತ ಮಹಾಸಭೆಗೆ ನೋಂದಣಿ ಮಾಡಿಸಿಕೊಳ್ಳಿ. ಈಗಾಗಲೇ ಸದಸ್ಯತ್ವ ಪಡೆದವರಿಗೆ ಗುರುತಿನ ಚೀಟಿ ನಿಡಲಾಗುತ್ತಿದೆ’ ಎಂದರು.

ಪದಾಧಿಕಾರಿಗಳಾದ ಎಚ್.ಪಿ. ಹೇಮೇಶ್, ಲೀಲಾ ಧರ್ಮಪ್ಪ, ಎಚ್.ವಿ. ಹೇಮಂತ್, ಶೆಟ್ಟಿಹಳ್ಳಿ ಧರ್ಮ, ಶೋಭನ್ ಬಾಬು, ಶರತ್ ಭೂಷಣ್, ಮಮತಾ ಪಾಟೀಲ್, ಅಶಾದೇವಿ ಕುಮಾರ್, ಶೀಲಾ ವಿಶ್ವನಾಥ್, ಧನಲಕ್ಷ್ಮೀ, ಶೈಲಾ ಮದನ್, ಪ್ರದೀಪ್, ಶೋಭಾ ಮಹೇಶ್, ರಾಜಶೇಖರ ಮೂರ್ತಿ, ದಿಲೀಪ್, ನವೀನ್ ದರ್ಶನ್ ಮಲ್ನಾಡ್, ಮಯೂರಿ ಲೋಕೇಶ್, ಸುಜಾತಾ ರಾಜಶೇಖರ್, ಸಾವಿತ್ರಿ ವಿಜಯಕುಮಾರ್, ಶೋಭಾ ಚಂದ್ರಶೇಖರ್, ಭಾಮಿನಿ ಹೇಮಂತ್, ರತ್ನಾ ಸೋಮಶೇಖರ್, ಸರಸ್ವತಿ ಚಂದುಕುಮಾರ್, ವೀಣಾ ದೇವರಾಜ್, ಸುಶೀಲಾ ಪಾಲನೇತ್ರ, ಅನಿತಾ ಯೋಗೀಶ್, ನೇತ್ರಾವತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.