ಅರಕಲಗೂಡು: ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವದ ಮೆರವಣಿಗೆಗೆ ಗುರುವಾರ ರಾತ್ರಿ ಅದ್ದೂರಿ ಚಾಲನೆ ದೊರೆಯಿತು.

ಇತಿಹಾಸ ಪ್ರಸಿದ್ದ ಲಕ್ಷ್ಮೀ ನರಸಿಂಹಸ್ವಾಮಿ, ಅಮೃತೇಶ್ವರ ಸ್ವಾಮಿ, ಉಮಾಮಹೇಶ್ವರಿ, ಗ್ರಾಮದೇವತೆ ದೊಡ್ಡಮ್ಮ ದೇವಿ ದೇವಾಲಯದಲ್ಲಿ ವಿವಿಧ ಮಠಾಧೀಶರು, ಶಾಸಕ ಎ.ಮಂಜು, ಜಿಲ್ಲಾಧಿಕಾರಿ ಲತಾಕುಮಾರಿ ಪೂಜೆ ಸಲ್ಲಿಸಿದರು.

ದೊಡ್ಡಮ್ಮ ವೃತ್ತದಲ್ಲಿ ನಡೆದ ಸಭೆಯಲ್ಲಿ ದಸರಾ ಉತ್ಸವವನ್ನು ಉದ್ಘಾಟಿಸಿದ ಬುಕರ್ ಪ್ರಶಸ್ತಿ ವಿಜೇತೆ, ಅನುವಾದಕಿ ದೀಪಾ ಭಾಸ್ತಿ ಮಾತನಾಡಿ, ‘ತಾಲ್ಲೂಕು ಕೇಂದ್ರದಲ್ಲಿ ಇಷ್ಟು ವೈಭವ ಸಂಭ್ರಮದಿಂದ ದಸರಾ ಆಚರಣೆ ನಡೆಯುತ್ತಿರುವುದು ವಿಶೇಷವಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ದೊರೆತದ್ದು ಸಂತಸದ ಸಂಗತಿ, ಸಾಹಿತಿಗಳಿಗೆ ಜನರ ಪ್ರೋತ್ಸಾಹ ಅಗತ್ಯ, ತಮ್ಮ ಸಾಹಿತ್ಯ ಕೃಷಿಗೆ ದೊಡ್ಡಮ್ಮ ದೇವಿಯ ಆಶೀರ್ವಾದ ದೊರೆಯಲಿ’ ಎಂದು ಪ್ರಾರ್ಥಿಸುತ್ತೇನೆ’ ಎಂದರು.

ಜಿಲ್ಲಾಧಿಕಾರಿ ಲತಾ ಕುಮಾರಿ ಮಾತನಾಡಿ, ‘ಅರಕಲಗೂಡು ದಸರಾ ಜಿಲ್ಲೆಯಾದ್ಯಂತ ಗಮನ ಸೆಳೆದಿದ್ದು, ವೈಭವದಿಂದ ಆಚರಿಸುತ್ತಿರುವುದು ಸಂತೋಷದಾಯಕವಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾಗದಂತೆ ಶಾಂತಿಯಿಂದ ಸಂಭ್ರಮಾಚರಣೆ ನಡೆಯಲಿ’ ಎಂದರು.

ಶಾಸಕ ಎ. ಮಂಜು ಮಾತನಾಡಿ, ‘25 ವರ್ಷಗಳ ಹಿಂದೆ ಮರು ಚಾಲನೆ ದೊರೆತ ಬಳಿಕ ದಸರಾ ಉತ್ಸವ ಪ್ರತಿವರ್ಷ ತನ್ನ ಮೆರುಗನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದೆ’ ಎಂದು ಹೇಳಿದರು.

ಬಳಿಕ ಉತ್ಸವಗಳ ಮೆರವಣಿಗೆ ಚಾಲನೆ ನೀಡಲಾಯಿತು. ಕಣ್ಣು ಕೋರೈಸುವಂತೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದ ದೇವತೆಗಳ ಉತ್ಸವಗಳು, ಸ್ಥಬ್ದ ಚಿತ್ರಗಳು ಮೆರವಣಿಗೆಯಲ್ಲಿ ಬನ್ನಿ ಮಂಟಪದತ್ತ ಸಾಗಿದವು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮರಗು ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.