ರಟ್ಟೀಹಳ್ಳಿ: ‘2024-25ನೇ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಸುರಿದ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆ, ಸೇತುವೆ, ಚರಂಡಿ ಕಾಮಗಾರಿಗಳನ್ನು ದುರಸ್ತಿಪಡಿಸಲು ಮಳೆ ಪರಿಹಾರ ಕಾರ್ಯಕ್ರಮದಡಿ ಹಿರೇಕೆರೂರ-ರಟ್ಟೀಹಳ್ಳಿ ತಾಲ್ಲೂಕು ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ₹10 ಕೋಟಿ ಅನುಮೋದನೆ ಮಂಜೂರಾಗಿದೆ’ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.

ಈ ಆದೇಶದನ್ವಯ ರಟ್ಟೀಹಳ್ಳಿ ತಾಲ್ಲೂಕಿನ ಯಡಗೋಡ-ಬಡಾಸಂಗಾಪುರ ರಸ್ತೆ ಅಭಿವೃದ್ಧಿಗೆ ₹1 ಕೋಟಿ, ಬುಳ್ಳಾಪುರದಿಂದ ತುಮ್ಮಿನಕಟ್ಟಿ ರಸ್ತೆ ಅಭಿವೃದ್ಧಿಗೆ ₹55 ಲಕ್ಷ , ಗುಡ್ಡದಮಾದಾಪುರ ಗ್ರಾಮದ ಕರಡಿಕೊಳ್ಳದ ಸಿದ್ದೇಶ್ವರ ದೇವಸ್ಥಾನದಿಂದ ಹೊನ್ನಾಳಿ ರಸ್ತೆ ಸೇರುವ ರಸ್ತೆ ಅಭಿವೃದ್ಧಿಗೆ ₹50 ಲಕ್ಷ, ಕೋಡಿಹಳ್ಳಿಯಿಂದ ಮಾವಿನತೋಪ ರಸ್ತೆಗೆ ಸೇರುವ ರಸ್ತೆಯಲ್ಲಿ ಸೇತುವೆ ನಿರ್ಮಾಣ ₹2 ಕೋಟಿ, ರಟ್ಟೀಹಳ್ಳಿ-ಶಿರಗಂಬಿ ರಸ್ತೆಯಿಂದ ಹಿರೇಕೆರೂರ-ರಟ್ಟೀಹಳ್ಳಿ ಸೇರುವ ರಸ್ತೆ ಅಭಿವೃದ್ದಿಗೆ ₹1 ಕೋಟಿ, ಅಣಜಿ-ಕಮಲಾಪುರ ರಸ್ತೆಯಿಂದ ಮೈದೂರು ರಸ್ತೆಯಲ್ಲಿ ಸಿ.ಡಿ.ನಿರ್ಮಾಣ ₹55 ಲಕ್ಷ, ಕಿರಗೇರಿಯಿಂದ ಕೂಸಗಟ್ಟಿ ರಸ್ತೆ ಅಭಿವೃದ್ಧಿಗೆ ₹45 ಲಕ್ಷ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.