ಬ್ಯಾಡಗಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಕೇವಲ 621 ಕ್ವಿಂಟಲ್ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ತೀವ್ರ ಕುಸಿತ ಕಂಡು ಬಂದಿದೆ.
ಕಳೆದ ಶುಕ್ರವಾರ ಮಾರುಕಟ್ಟೆಗೆ 2,160 ಕ್ವಿಂಟಲ್ ಮೆಣಸಿನಕಾಯಿ ಆವಕವಾಗಿತ್ತು. ಬೆಳಿಗ್ಗೆಯಿಂದ ಆಕಾಶದಲ್ಲಿ ಮೋಡ ಕವಿದ ವಾತಾವರಣವಿದ್ದ ಕಾರಣ ವಹಿವಾಟು ಅಷ್ಟೊಂದು ಜೋರಾಗಿರಲಿಲ್ಲ.
ಸೋಮವಾರ ತೇವಾಂಶ ಹೆಚ್ಚಿರುವ ಹಾಗೂ ಕನಿಷ್ಠ ಗುಣಮಟ್ಟ ಹೊಂದಿರದ 248 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ.17 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹60,009 ರಂತೆ, 31 ಚೀಲ ಕಡ್ಡಿ ಮೆಣಸಿನಕಾಯಿ ₹52,069 ರಂತೆ ಮತ್ತು ಗುಂಟೂರ ತಳಿ ₹18,809 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ.
ಸರಾಸರಿ ಬೆಲೆಯಲ್ಲಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹42,529, ಕಡ್ಡಿ ಮೆಣಸಿನಕಾಯಿ ₹32,869 ಹಾಗೂ ಗುಂಟೂರು ತಳಿ ₹16,359ರಂತೆ ಮಾರಾಟವಾಗಿದ್ದು, ಬೆಲೆಯಲ್ಲಿ ತುಸು ಹೆಚ್ಚಳವಾಗಿದೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 99 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.