ಹಾವೇರಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಜಿ.ಎಚ್. (ಗುದ್ಲೆಪ್ಪ ಹಳ್ಳಿಕೇರಿ) ಕಾಲೇಜಿನ ಚೆಕ್ ಕದ್ದು ಬ್ಯಾಂಕ್ನಿಂದ ₹ 8 ಲಕ್ಷ ಡ್ರಾ ಮಾಡಿಕೊಳ್ಳಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಶಿವಾನಂದ ಶಿವಪುತ್ರಪ್ಪ ಕಂಬಳಿ ಅಲಿಯಾಸ್ ಕರಿಗಾರ (27) ಎಂಬುವವರನ್ನು ಹಾವೇರಿ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಹಾವೇರಿ ತಾಲ್ಲೂಕಿನ ಬಸಾಪುರದ ನಿವಾಸಿ ಶಿವಾನಂದ, ಕಾಲೇಜಿನ ಉದ್ಯೋಗಿ ಜೊತೆ ಸೇರಿ ಕೃತ್ಯ ಎಸಗಿದ್ದ ಬಗ್ಗೆ ಮಾಹಿತಿಯಿದೆ. ಆದರೆ, ಕೃತ್ಯ ಎಸಗಿದ ನಂತರ ಉದ್ಯೋಗಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದು ಶಹರ ಠಾಣೆ ಪೊಲೀಸರು ಹೇಳಿದರು.

‘ಆರೋಪಿ ಶಿವಾನಂದ, ಹಲವು ಕಡೆ ಸಾಲ ಮಾಡಿಕೊಂಡಿದ್ದ. ಬ್ಯಾಂಕ್ನಿಂದ ಡ್ರಾ ಮಾಡಿಕೊಂಡಿದ್ದ ₹ 8 ಲಕ್ಷ ಪೈಕಿ, ಸ್ವಲ್ಪ ಹಣವನ್ನು ಸಾಲಗಾರರಿಗೆ ನೀಡಿದ್ದ. ಉಳಿದ ಹಣ ತನ್ನ ಬಳಿಯೇ ಇಟ್ಟುಕೊಂಡಿದ್ದ. ಆತನನ್ನು ಬಂಧಿಸುತ್ತಿದ್ದಂತೆ ₹ 8 ಲಕ್ಷ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ಐದರ ಪೈಕಿ ಒಂದು ಚೆಕ್ ಪುಸ್ತಕ ನಾಪತ್ತೆ: ‘ಆಕ್ಸಿಸ್ ಬ್ಯಾಂಕ್ನ ಹಾವೇರಿ ಶಾಖೆಯಲ್ಲಿ ಜಿ.ಎಚ್. ಕಾಲೇಜಿನವರು ಹಣಕಾಸಿನ ವ್ಯವಹಾರ ನಡೆಸುತ್ತಿದ್ದಾರೆ. ಇತ್ತೀಚೆಗೆ ಐದು ಚೆಕ್ ಪುಸ್ತಕಕ್ಕಾಗಿ ಅವರು ಕೋರಿಕೆ ಸಲ್ಲಿಸಿದ್ದರು. ಬ್ಯಾಂಕ್ನವರು ಐದು ಚೆಕ್ಪುಸ್ತಕಗಳನ್ನು ಕಳುಹಿಸಿದ್ದರು. ಆದರೆ, ನಾಲ್ಕು ಪುಸ್ತಕಗಳು ಮಾತ್ರ ಕಚೇರಿಯಲ್ಲಿದ್ದವು’ ಎಂದು ಪೊಲೀಸರು ಹೇಳಿದರು.

‘ಒಂದು ಚೆಕ್ ಪುಸ್ತಕ ನಾಪತ್ತೆಯಾಗಿದ್ದ ವಿಷಯ ಕಾಲೇಜಿನವರಿಗೆ ಗೊತ್ತಿರಲಿಲ್ಲ. ಯಾವಾಗ ಒಂದು ಚೆಕ್ನಿಂದ ₹ 8 ಲಕ್ಷ ಡ್ರಾ ಆಗಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ, ಪರಿಶೀಲನೆ ನಡೆಸಿದಾಗಲೇ ಚೆಕ್ ಪುಸ್ತಕ ನಾಪತ್ತೆಯಾಗಿದ್ದು ಗಮನಕ್ಕೆ ಬಂದಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.