ಹಾವೇರಿಯಲ್ಲಿ ಭಾನುವಾರ ನಡೆದ ‘ಬಸವ ಸಂಸ್ಕೃತಿ ಅಭಿಯಾನ’ದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರು
ಜಾತಿ–ಮತ–ಪಂಥ ಭೇದವಿಲ್ಲದ ವಿಶ್ವ ವಿನೂತನ ಧರ್ಮ ಕೊಟ್ಟವರು ಬಸವಣ್ಣನವರು. ಅವರು ಇಲ್ಲದಿದ್ದರೆ ನಾವೆಲ್ಲರೂ ಶೂದ್ರರಾಗಿರುತ್ತಿದ್ದೆವು. ಯಾವುದೇ ಸ್ಥಾನಮಾನ–ಗೌರವ ಸಿಗುತ್ತಿರಲಿಲ್ಲ
ಗಂಗಾ ಮಾತಾಜಿ ಬಸವ ಧರ್ಮಪೀಠ ಕೂಡಲ ಸಂಗಮ
ಅಭಿಯಾನಕ್ಕೆ ಸ್ವಾಗತ
ಮೆರವಣಿಗೆ ಬಸವ ತತ್ವದ ಪ್ರಚಾರ ಪ್ರಸಾರ ಹಾಗೂ ಅನುಷ್ಠಾನದ ಆಶಯದೊಂದಿಗೆ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ‘ಬಸವ ಸಂಸ್ಕೃತಿ ಅಭಿಯಾನ’ವನ್ನು ಹಾವೇರಿಯಲ್ಲಿ ಭಾನುವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಅಭಿಯಾನವನ್ನು ಬೆಳಿಗ್ಗೆ ಸ್ವಾಗತಿಸಿ ಷಟಸ್ಥಲ ಧ್ವಜಾಹಣ ನೆರವೇರಿಸಲಾಯಿತು. ಹುಕ್ಕೇರಿ ಮಠದಿಂದ ರಜನಿ ಸಭಾಂಗಣದವರೆಗೂ ಸಂಜೆ ಅಭಿಯಾನದ ಮೆರವಣಿಗೆ ನಡೆಯಿತು. ಬಸವಣ್ಣ ಹಾಗೂ ಬಸವಾದಿ ಶರಣದ ಪ್ರತಿಕೃತಿಗಳು ಮೆರವಣಿಗೆಯಲ್ಲಿದ್ದವು. ಜನರು ಬಸವ ಧ್ವಜ ಹಿಡಿದು ವಚನಗಳ ಪ್ರತಿಗಳನ್ನು ತಲೆ ಮೇಲೆ ಹೊತ್ತುಕೊಂಡು ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.