ಶುಕ್ರವಾರ, ಫೆಬ್ರವರಿ 21, 2020
21 °C

ಕಾರು ಅಪಘಾತ: ಇಬ್ಬರು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಂಸಭಾವಿ: ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಸುತ್ತಕೋಟಿ ಗ್ರಾಮದ ಹೊರವಲಯದ ಚಿಕ್ಕಬೂದಿಹಾಳ ಕ್ರಾಸ್ ಬಳಿ ಬುಧವಾರ ನಡೆದಿದೆ.

ಕಾರ್ತಿಕ ಈಳಿಗೇರ(21), ಪವನ ಭೋಗಾವಿ (23) ಮೃತಪಟ್ಟಿದ್ದು, ಸಂತೋಷ ರಾಗಿಕೊಪ್ಪ ಎಂಬುವನ ಕೈಗಳು ಮುರಿದು ಚಿಂತಾಜನಕ ಸ್ಥಿತಿಯಲ್ಲಿದ್ದು ದಾವಣಗೆರೆ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಯುವಕರು ರಾಣೆಬೆನ್ನೂರಿಂದ ಹಂಸಭಾವಿಗೆ ಬರುತ್ತಿರುವಾಗ ಕಾರನ್ನು ಅತೀ ವೇಗವಾಗಿ ಚಲಿಸಿದ್ದರ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಾಲುವೆ ಉರುಳಿ ಬಿದ್ದು ಅಪಘಾತ ಸಂಭವಿಸಿದೆ. ಈ ಕುರಿತು ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂತ್ವನ: ಅಪಘಾತವಾದ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಹೋಗುತ್ತಿದ್ದ ಸೊರಬ ತಾಲೂಕಿನ ಶಾಸಕ ಕುಮಾರ ಬಂಗಾರಪ್ಪ ಘಟನೆ ಬಗ್ಗೆ ವಿಚಾರಿಸಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು