ಹಾವೇರಿ: ಅಲೆಮಾರಿ ಸಿಂಧೋಳು ಸಮುದಾಯದ ಪೂಜಾ ನಾಗಪ್ಪ ದುರಮುರಗಿ ಎಂಬ ಎರಡೂವರೆ ವರ್ಷದ ಬಾಲಕಿ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದು, ಘಟನಾ ಸ್ಥಳ ಹಾಗೂ ಬಾಲಕಿಯ ಗುಡಿಸಲಿಗೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಗುರುವಾರ ಭೇಟಿ ನೀಡಿದರು.

ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಹಂಸಬಾವಿ ಬಳಿಯ ಚಿಕ್ಕನಜಿ ಕ್ರಾಸ್ನಲ್ಲಿರುವ (ತಿಳವಳ್ಳಿ ಕ್ರಾಸ್) ಕೆರೆಯಲ್ಲಿ ಬುಧವಾರ ಬಿದ್ದು ಬಾಲಕಿ ಪೂಜಾ ಮೃತಪಟ್ಟಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಜಿಲ್ಲಾಧಿಕಾರಿ, ಬಾಲಕಿಯ ಪೋಷಕರು ವಾಸವಿರುವ ಗುಡಿಸಲು ಬಳಿ ಹೋಗಿ ಅವರಿಗೆ ಸಾಂತ್ವಾನ ಹೇಳಿದರು.

ಕೆರೆ ದಡದ ಸಮೀಪದಲ್ಲಿಯೇ ಅಲೆಮಾರಿ ಸಿಂಧೋಳ ಸಮುದಾಯದ ಜನರು, ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದಾರೆ. ಮೂಲ ಸೌಕರ್ಯಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಇದರ ನಡುವೆಯೇ ಬುಧವಾರ ಬಾಲಕಿ ಮೃತಪಟ್ಟಿದ್ದು, ಸಮುದಾಯದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಪೋಷಕರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಗುಡಿಸಲಿನ ಮುಂದೆ ಆಟವಾಡುತ್ತಿದ್ದ ಬಾಲಕಿ, ಆಟವಾಡುತ್ತ ಕೆರೆ ಬಳಿ ಹೋಗಿ ಆಯತಪ್ಪಿ ಬಿದ್ದಿದ್ದಳು. ಅಲ್ಲಿಯೇ ಮುಳುಗಿದ್ದಳು. ಅದನ್ನು ಗಮನಿಸಿದ್ದ ಸ್ಥಳೀಯರು, ಬಾಲಕಿಯನ್ನು ಹೊರಗೆ ತೆಗೆದು ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗಮಧ್ಯೆಯೇ ಬಾಲಕಿ ಮೃತಪಟ್ಟಿದ್ದಾಳೆ.

‘ಅಲೆಮಾರಿ ಸಿಂಧೋಳ ಸಮುದಾಯದವರು, ಎಲ್ಲ ಸೌಕರ್ಯಗಳಿಂದ ವಂಚಿತವಾಗಿ ಕಾಡು ಮನುಷ್ಯರ ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಗಲೀಜಾದ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಇಂಥ ಗುಡಿಸಲು ಬಳಿಯೇ ಕೆರೆಯಿದ್ದು, ಅದೇ ಕೆರೆಯಲ್ಲಿಯೇ ಮುಳುಗಿ ಬಾಲಕಿ ಮೃತಪಟ್ಟಿದ್ದಾಳೆ. ಇದಕ್ಕೆ ಆಡಳಿತ ವ್ಯವಸ್ಥೆಯೇ ಕಾರಣ’ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದರು.

ಪರಿಹಾರದ ಭರವಸೆ

ಬಾಲಕಿಯ ಪೋಷಕರು ವಾಸವಿರುವ ಗುಡಿಸಲಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಸಾಂತ್ವನ ಹೇಳಿದರು. ಜೊತೆಗೆ, ಸೂಕ್ತ ಪರಿಹಾರ ನೀಡುವುದಾಗಿಯೂ ಭರವಸೆ ನೀಡಿದರು.

ಭೇಟಿ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿಲ್ಲಾಧಿಕಾರಿ, ‘ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ತಿಳಿದುಕೊಂಡಿದ್ದೇನೆ. ಕಂದಾಯ ಗ್ರಾಮ ಮಾಡಲು ಅವಕಾಶವಿದ್ದು, ಈ ಬಗ್ಗೆ ಪರಿಶೀಲಿಸುವೆ’ ಎಂದರು.

‘ಕೆರೆಯ ಸಮೀಪದ ಜಾಗದಲ್ಲಿಯೇ ಅಲೆಮಾರಿ ಸಿಂಧೋಳ ಸಮುದಾಯದವರು ವಾಸವಿದ್ದಾರೆ. ಮಳೆ ಬಂದ ಸಂದರ್ಭದಲ್ಲಿ ಗುಡಿಸಲಿಗೆ ನೀರು ನುಗ್ಗುವ ಸ್ಥಿತಿಯಿದೆ. ಹೀಗಾಗಿ, ಅವರಿಗೆ ಪರ್ಯಾಯವಾಗಿ ಬೇರೆ ಕಡೆ ಜಾಗ ತೋರಿಸಲಾಗಿದೆ. ಆದರೆ, ಸ್ಥಳೀಯ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾಹಿತಿಯಿದೆ. ಈ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ’ ಎಂದರು.

‘ಅಲೆಮಾರಿ ಸಮುದಾಯದವರಿಗೆ ಸೂಕ್ತ ವಾಸದ ವ್ಯವಸ್ಥೆ ಮಾಡಿಕೊಡಬೇಕು. ಸರ್ವೇ ನಂಬರ್ 105ರ ಜಾಗವನ್ನು ಕಂದಾಯ ಗ್ರಾಮದಡಿ ಬರುವುದಾದರೆ, ಪರಿಶೀಲಿಸಿ ಅಭಿವೃದ್ಧಿಪಡಿಸಬೇಕು. ಸಮುದಾಯದ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್, ರೇಷನ್ ಕಾರ್ಡ್ ಹಾಗೂ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ತಲುಪಿಸಬೇಕು. ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಬೇಕು. ಕೆರೆಯನ್ನು ಸಮೀಕ್ಷೆ ಮಾಡಿಸಿ, ಸುತ್ತಲೂ ತಂತಿಬೇಲಿ ಹಾಕಬೇಕೆಂದು ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ’ ಎಂದರು.

ಶಾಸಕ ಯು.ಬಿ. ಬಣಕಾರ ಸಹ ಘಟನಾ ಸ್ಥಳ ಹಾಗೂ ಬಾಲಕಿಯ ಗುಡಿಸಲಿಗೆ ಭೇಟಿ ನೀಡಿ, ಪೋಷಕರಿಗೆ ಸಾಂತ್ವಾನ ಹೇಳಿದರು.

‘ಗುಡಿಸಲಿನಲ್ಲಿ ಜೀವನ: ನಾಚಿಕೆಯಾಗಬೇಕು’

‘ಗುಡಿಸಲು ಮುಕ್ತ ರಾಜ್ಯ ಮಾಡುವ ಘೋಷಣೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾನಾ ಯೊಜನೆಗಳನ್ನು ಜಾರಿಗೆ ತಂದಿವೆ. ಆದರೆ 25 ವರ್ಷಗಳಿಂದ ಅಲೆಮಾರಿ ಸಿಂಧೋಳ ಜನರು ಇಂದಿಗೂ ಗುಡಿಸಲಿನಲ್ಲಿ ಉಳಿದುಕೊಂಡಿದ್ದಾರೆ. ಇವರ ಸ್ಥಿತಿ ನೋಡಿದರೆ ಸರ್ಕಾರಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು’ ಎಂದು ಸಮುದಾಯದ ಜನರು ಆಕ್ರೋಶ ಹೊರಹಾಕಿದರು. ‘ನಮ್ಮ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ. ಆಧಾರ್ ಪಡಿತರ ಚೀಟಿ ನೀಡಲು ಅಧಿಕಾರಿಗಳು ಹಣ ಕೇಳುತ್ತಾರೆ. ಕೆಸರು ಹೆಚ್ಚಿರುವ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿರುವ ನಾವು ಕುಲಕಸುಬು ಮಾಡಿ ಜೀವನ ನಡೆಸುತ್ತಿದ್ದೇವೆ. ಯಾವುದಾದರೂ ಪ್ರಮಾಣ ಪತ್ರ ಬೇಕು ಎಂದರೆ ಅಧಿಕಾರಿಗಳು ಸತಾಯಿಸುತ್ತಾರೆ’ ಎಂದು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.