ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೂನಬೇವು ಗ್ರಾಮದ ಮನೆಯೊಂದರಲ್ಲಿ ಜೋಕಾಲಿಯಲ್ಲಿ ಆಟವಾಡುತ್ತಿದ್ದ ರಾಹುಲ್ ಮಲ್ಲಿಕಾರ್ಜುನ ಬಾವಿಹಳ್ಳಿ (16) ಎಂಬ ಬಾಲಕ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
.ಹಾವೇರಿ: ಬೌ ಬೌ ಹಾವಳಿ; 3,237 ಮಂದಿಗೆ ನಾಯಿ ಕಡಿತ.
‘ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ತೆಲಗಿ ಗ್ರಾಮದ ರಾಹುಲ್, ಕೂನಬೇವು ಗ್ರಾಮದಲ್ಲಿರುವ ಅಜ್ಜ ರಾಮಣ್ಣ ತಂಡೂರ ಅವರ ಮನೆಗೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ತಂದೆ ಮಲ್ಲಿಕಾರ್ಜುನ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ರಾಣೆಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.

‘ಅಜ್ಜ ರಾಮಣ್ಣ ಅವರ ಮನೆಯ ಮೇಲಿನ ಮಹಡಿಯಲ್ಲಿ ಸೀರೆಯಿಂದ ಜೋಕಾಲಿ ಕಟ್ಟಲಾಗಿತ್ತು. ಅದರಲ್ಲಿ ಕುಳಿತು ರಾಹುಲ್ ಆಟವಾಡುತ್ತಿದ್ದ. ಇದೇ ಸಂದರ್ಭದಲ್ಲಿ ಜೋಕಾಲಿಯ ಸೀರೆ, ರಾಹುಲ್ನ ಕುತ್ತಿಗೆಗೆ ಸುತ್ತಿಕೊಂಡಿತ್ತು. ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೇ ಬಾಲಕನಿಗೆ ಉಸಿರುಗಟ್ಟಿತ್ತು. ಪ್ರಜ್ಞೆ ತಪ್ಪಿದ್ದ ಆತನನ್ನು ಪೋಷಕರು ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಸೀರೆ ಕುತ್ತಿಗೆಗೆ ಸುತ್ತಿಕೊಂಡು ಬಾಲಕ ಮೃತಪಟ್ಟಿದ್ದು, ಸಾವಿನಲ್ಲಿ ಬೇರೆ ಅನುಮಾನ ಇಲ್ಲವೆಂದು ತಂದೆ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.
.ಹಾವೇರಿ: ಹಣ ಅಕ್ರಮ ವಸೂಲಿ; ಪಿಡಿಒ ಅಮಾನತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.