ಹಾವೇರಿ: ಜಿಲ್ಲೆಯಾದ್ಯಂತ ಬೀದಿ ನಾಯಿಗಳ ಹಾವಳಿ ಮುಂದುವರಿದಿದ್ದು, ಮಕ್ಕಳು ಹಾಗೂ ವೃದ್ಧರ ಮೇಲೆ ನಾಯಿಗಳು ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಪ್ರಸಕ್ತ ವರ್ಷದ ಜನವರಿಯಿಂದ ಜೂನ್ವರೆಗೆ 3,237 ಮಂದಿಗೆ ನಾಯಿ ಕಡಿದಿದ್ದು, ಈ ಪೈಕಿ ಒಬ್ಬರು ರೇಬಿಸ್ ಕಾಯಿಲೆಯಿಂದ ಮೃತಪಟ್ಟಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಬೀದಿಯಲ್ಲಿ ಗುಂಪು ಗುಂಪಾಗಿ ನಾಯಿಗಳು ಓಡಾಡುತ್ತಿದ್ದು, ಯಾರಾದರೂ ಒಂಟಿಯಾಗಿ ತೆರಳುತ್ತಿದ್ದರೆ ಅವರ ಮೇಲೆ ದಾಳಿ ಮಾಡುತ್ತಿವೆ. ನಗರ ಹಾಗೂ ಗ್ರಾಮೀಣ ಎರಡೂ ಪ್ರದೇಶಗಳಲ್ಲಿಯೂ ನಾಯಿಗಳ ಹಾವಳಿ ಮಿತಿಮೀರಿದೆ. ಕೆಲ ಪ್ರದೇಶಗಳಲ್ಲಂತೂ ನಾಯಿಗಳ ಹಿಂಡು ನಿತ್ಯವೂ ಓಡಾಡುತ್ತಿದ್ದು, ಪಾದಚಾರಿಗಳು ಜೀವ ಭಯದಲ್ಲಿ ಓಡಾಡುತ್ತಿದ್ದಾರೆ.

ಜಿಲ್ಲಾ ಕೇಂದ್ರ ಹಾವೇರಿ ನಗರದ ಹಲವು ಪ್ರದೇಶಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳು ಓಡಾಡುತ್ತಿವೆ. ಹಳೇ ಪಿ.ಬಿ.ರಸ್ತೆ, ನೇತಾಜಿನಗರ, ಇಜಾರಿ ಲಕಮಾಪುರ, ಶಿವಲಿಂಗೇಶ್ವರನಗರ, ಬಸವೇಶ್ವರನಗರ, ನಾಗೇಂದ್ರನಮಟ್ಟಿ, ಅಶ್ವಿನಿನಗರ, ಶಿವಾಜಿನಗರ, ರೇಲ್ವೆ ನಿಲ್ದಾಣ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ಕಂಡುಬರುತ್ತಿದೆ. ಈ ಪ್ರದೇಶಗಳಲ್ಲಿ ಮೇಲಿಂದ ಮೇಲೆ ನಾಯಿ ದಾಳಿ ಪ್ರಕರಣಗಳು ವರದಿಯಾಗುತ್ತಿವೆ.

ನಾಯಿ ದಾಳಿಗೆ ತುತ್ತಾದ ಮಕ್ಕಳು ಹಾಗೂ ವೃದ್ಧರು, ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ಗಾಯಗೊಂಡವರು, ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು, ಹುಬ್ಬಳ್ಳಿ ಹಾಗೂ ದಾವಣಗೆರೆಯಲ್ಲಿರುವ ಆಸ್ಪತ್ರೆಗೂ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖವಾಗುತ್ತಿದ್ದಾರೆ.

ಹಳೇ ಪಿ.ಬಿ.ರಸ್ತೆಗೆ ಹೊಂದಿಕೊಂಡಿರುವ ಇಜಾರಿಲಕಮಾಪುರದ ಗುದ್ಲೆಪ್ಪ ಹಳ್ಳಿಕೇರಿ (ಜಿ.ಎಚ್.) ಕಾಲೇಜಿನ ಹಿಂಭಾಗದಲ್ಲಿರುವ ಸಿದ್ದಾರೂಢ ಕಾಲೊನಿಯಲ್ಲಿಯೂ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಹಾವೇರಿ ನಗರಸಭೆಯ ಒಂದನೇ ವಾರ್ಡ್ನಲ್ಲಿರುವ ಈ ಕಾಲೊನಿಯಲ್ಲಿ ನಿತ್ಯವೂ ನಾಯಿಗಳ ಹಿಂಡು ಓಡಾಡುತ್ತಿವೆ. ಪ್ರಮುಖ ರಸ್ತೆಯಲ್ಲಿಯೇ ನಾಯಿಗಳು ಜಮೆಗೊಂಡು ನಿಲ್ಲುತ್ತಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಹಾಗೂ ಬೈಕ್ನಲ್ಲಿ ತೆರಳುವವರನ್ನು ಬೆನ್ನಟ್ಟುತ್ತಿವೆ.

ಅಗತ್ಯ ವಸ್ತುಗಳ ಖರೀದಿಗಾಗಿ ಮಕ್ಕಳನ್ನು ಅಂಗಡಿಗೆ ಕಳುಹಿಸಿದರೆ, ಅಂಥ ಮಕ್ಕಳ ಮೇಲೂ ನಾಯಿಗಳು ದಾಳಿ ಮಾಡುತ್ತಿವೆ. ನಾಯಿಗಳ ಹಿಂಡು ಹೆಚ್ಚಾಗಿದ್ದರಿಂದ, ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಪೋಷಕರು ಭಯಪಡುತ್ತಿದ್ದಾರೆ.

ಹಾವೇರಿ ಮಾತ್ರವಲ್ಲದೇ ರಾಣೆಬೆನ್ನೂರು, ಹಿರೇಕೆರೂರು, ಹಾನಗಲ್, ರಟ್ಟೀಹಳ್ಳಿ, ಸವಣೂರು, ಬ್ಯಾಡಗಿ ಹಾಗೂ ಶಿಗ್ಗಾವಿ ಪಟ್ಟಣಗಳಲ್ಲಿಯೂ ನಾಯಿಗಳ ಹಿಂಡು ಕಂಡುಬರುತ್ತಿವೆ. ಜೊತೆಗೆ, ಆಯಾ ತಾಲ್ಲೂಕಿನ ಗ್ರಾಮಗಳಲ್ಲಿಯೂ ಬೀದಿ ನಾಯಿಗಳು ಓಡಾಡುತ್ತಿವೆ.

ಹಾವೇರಿ, ರಾಣೆಬೆನ್ನೂರು ನಗರ ವ್ಯಾಪ್ತಿಯಲ್ಲಿ ಕೆಲದಿನ ಮಾತ್ರ ಬೀದಿನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ನಂತರದ ದಿನಗಳಲ್ಲಿ ಈ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಹಲವು ಕಡೆಗಳಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಎಂಬುದು ಕೇವಲ ಕಾಗದದಲ್ಲಿ ಮಾತ್ರ ಉಳಿದುಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂಥ ಬೀದಿ ನಾಯಿಗಳಿಂದ ಮಕ್ಕಳು–ಮಹಿಳೆಯರು ಒಂಟಿಯಾಗಿ ಓಡಾಡುವುದು ಕಷ್ಟವಾಗಿರುವುದಾಗಿ ಜನರು ದೂರುತ್ತಿದ್ದಾರೆ.

‘ಹಾವೇರಿಯಲ್ಲಿ ಈ ಹಿಂದೆ ಹಂದಿಗಳ ಕಾಟ ವಿಪರೀತವಿತ್ತು. ಈಗ ಹಂದಿಗಳ ಸಂಖ್ಯೆ ಕಡಿಮೆಯಿದ್ದು, ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಹಲವು ಕಡೆಗಳಲ್ಲಿ ನಾಯಿಗಳು ಗುಂಪು ಗುಂಪಾಗಿ ಓಡಾಡುತ್ತಿವೆ. ಮಕ್ಕಳು ಹಾಗೂ ವೃದ್ಧರು ರಸ್ತೆಯಲ್ಲಿ ಹೋಗುವಾಗ ದಾಳಿ ಮಾಡಿ, ಗಾಯಗೊಳಿಸುತ್ತವೆ’ ಎಂದು ನಾಗೇಂದ್ರನಮಟ್ಟಿಯ ನಿವಾಸಿ ಚಂದ್ರಣ್ಣ ಹೇಳಿದರು.

‘ನಾಗೇಂದ್ರನಮಟ್ಟಿ ಮೂಲ ಸೌಕರ್ಯ ವಂಚಿತ ಪ್ರದೇಶ. ಈ ಪ್ರದೇಶದಲ್ಲಿ ನಾಯಿಗಳು ಹೆಚ್ಚಾಗಿ ಓಡಾಡುತ್ತಿವೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಹಾಗೂ ಶಾಲೆಯಿಂದ ಮನೆಗೆ ವಾಪಸು ಕರೆತರಲು ಪೋಷಕರು ಹೋಗಬೇಕಾದ ಸ್ಥಿತಿಯಿದೆ. ಮಕ್ಕಳನ್ನು ಹೊರಗೆ ಕಳುಹಿಸಲು ಭಯವಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.

ಸಿದ್ದಾರೂಢ ಕಾಲೊನಿ ನಿವಾಸಿ ಶಂಕರ, ‘ನಮ್ಮ ಪ್ರದೇಶದ ರಸ್ತೆಗಳಲ್ಲಿ ಬೀದಿನಾಯಿಗಳು ಹೆಚ್ಚಾಗಿ ಓಡಾಡುತ್ತಿವೆ. ಒಂದು ಹಿಂಡಿನಲ್ಲಿ 10ಕ್ಕೂ ಹೆಚ್ಚು ನಾಯಿಗಳಿವೆ. ರಸ್ತೆಯಲ್ಲಿ ಯಾರಾದರೂ ಒಂಟಿಯಾಗಿ ಹೊರಟಿದ್ದರೆ, ಅವರನ್ನು ಎಲ್ಲ ನಾಯಿಗಳು ಬೆನ್ನಟ್ಟುತ್ತವೆ. ಇಂಥ ಸಂದರ್ಭದಲ್ಲಿ ಪಾದಚಾರಿಗಳು ಭಯದಿಂದ ರಸ್ತೆಯಲ್ಲಿ ಬೀಳುತ್ತಿದ್ದಾರೆ. ಅಂಥ ಸಂದರ್ಭದಲ್ಲಿಯೇ ನಾಯಿಗಳು, ಪಾದಚಾರಿಗಳ ದೇಹದ ಹಲವು ಕಡೆಗಳಲ್ಲಿ ಕಚ್ಚಿ ಗಾಯಗೊಳಿಸುತ್ತಿವೆ’ ಎಂದು ಹೇಳಿದರು.

ಇಜಾರಿಲಕಮಾಪುರದ ನಿವಾಸಿ ಲಕ್ಷ್ಮಿ, ‘ನನ್ನ ಮಗನನ್ನು ಹಾಲು ತರಲು ಅಂಗಡಿಗೆ ಕಳುಹಿಸಿದ್ದೆ. ಹಾಲು ತೆಗೆದುಕೊಂಡು ವಾಪಸು ಬರುವಾಗ ಬೀದಿನಾಯಿಗಳು ದಾಳಿ ಮಾಡಿದ್ದವು. ಮಗ ಹೆದರಿ ಓಡಿದ್ದ. ಆತನನ್ನೇ ಬೆನ್ನಟ್ಟಿದ್ದ ನಾಯಿಗಳು ಕಾಲಿಗೆ ಕಚ್ಚಿದ್ದವು. ಅದನ್ನು ನೋಡಿದ್ದ ಸ್ಥಳೀಯರು, ನಾಯಿಗಳನ್ನು ಓಡಿಸಿ ಮಗನನ್ನು ರಕ್ಷಿಸಿದ್ದಾರೆ. ಮಗನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇನೆ’ ಎಂದರು.

‘ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲೇಬೇಕು. ಇಲ್ಲದಿದ್ದರೆ, ರಸ್ತೆಯಲ್ಲಿ ಓಡಾಡಲು ಆಗುವುದಿಲ್ಲ. ದೊಡ್ಡವರನ್ನು ಕಂಡರೆ ನಾಯಿಗಳು, ದಾಳಿ ಮಾಡುವುದು ಕಡಿಮೆ. ಆದರೆ, ಮಕ್ಕಳು ಹಾಗೂ ವೃದ್ಧರನ್ನು ಕಂಡಾಗ ಬಹುಬೇಗನೇ ದಾಳಿ ಮಾಡುತ್ತಿದ್ದೇವೆ. ನಾಯಿ ಕಡಿತದಿಂದ ಗಾಯಗೊಂಡವರಲ್ಲಿ ಮಕ್ಕಳು ಹಾಗೂ ವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದು ಹೇಳಿದರು.

ರೇಬಿಸ್ನಿಂದ ಒಬ್ಬ ಸಾವು: ನಾಯಿ ಕಡಿತದಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು, ರೇಬಿಸ್ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಈತನ ಜೊತೆ ಸಂಪರ್ಕದಲ್ಲಿದ್ದ ಹಲವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾದಲ್ಲಿರಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ, ಅವರಲ್ಲಿ ರೇಬಿಸ್ ಲಕ್ಷಣಗಳು ಕಂಡುಬಂದಿಲ್ಲ.

‘2024ರ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ 2,682 ಮಂದಿ ಗಾಯಗೊಂಡಿದ್ದರು. ಆದರೆ, ಯಾರೊಬ್ಬರಲ್ಲೂ ರೇಬಿಸ್ ಲಕ್ಷಣ ಕಂಡುಬಂದಿರಲಿಲ್ಲ. 2025ರ ಜನವರಿಯಿಂದ ಜೂನ್ವರೆಗೆ 3,237 ಮಂದಿಗೆ ನಾಯಿಗಳು ಕಡಿದಿವೆ. ಈ ಪೈಕಿ ಒಬ್ಬರು ರೇಬಿಸ್ನಿಂದ ಮೃತಪಟ್ಟಿದ್ದಾರೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘2025ರ ಜೂನ್ ಒಂದೇ ತಿಂಗಳಿನಲ್ಲಿ 473 ಮಂದಿ ಮೇಲೆ ನಾಯಿಗಳು ದಾಳಿ ಮಾಡಿವೆ. ಅವರೆಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಜುಲೈ, ಆಗಸ್ಟ್, ಸೆಪ್ಟೆಂಬರ್ನಲ್ಲೂ ನಾಯಿ ದಾಳಿ ಪ್ರಕರಣಗಳು ಹೆಚ್ಚಿರುವ ಮಾಹಿತಿಯಿದೆ. ಈ ಬಗ್ಗೆ ಅಂಕಿ–ಅಂಶಗಳ ಸಂಗ್ರಹಿಸಲಾಗುತ್ತಿದೆ’ ಎಂದು ತಿಳಿಸಿದರು.

‘ನಾಯಿ ಕಡಿತಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದೆ. ಅದಕ್ಕೆ ಬೇಕಾದ ಔಷಧ ಹಾಗೂ ಇತರೆ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದೆ’ ಎಂದು ಹೇಳಿದರು.

ಪ್ರಕರಣ ದಾಖಲಿಸುವ ಎಚ್ಚರಿಕೆ: ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕಾಗಿ ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ‘ಜಿಲ್ಲಾ ಮಟ್ಟದ ಪ್ರಾಣಿ ಸಂತಾನ ನಿಯಂತ್ರಣ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ’ ನಡೆಯಿತು.

ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ಜಿಲ್ಲೆಯಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಇವುಗಳ ಸಂತಾನ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು. ಮುಂಬರುವ ದಿನಗಳಲ್ಲಿ ಯಾರಿಗಾದರೂ ಬೀದಿನಾಯಿಗಳು ಕಚ್ಚಿದ ಬಗ್ಗೆ ವರದಿಯಾದರೆ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಿರುದ್ಧವೇ ಅಪರಾಧ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಎಚ್ಚರಿಕೆ ಬಳಿಕವೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಎಲ್ಲಿಯೂ ಬೀದಿನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಪ್ರಕ್ರಿಯೆ ಆರಂಭಿಸಿಲ್ಲ. ಅಧಿಕಾರಿಗಳ ಈ ವರ್ತನೆ ಜನರ ಆಕ್ರೋಶಕ್ಕೂ ಕಾರಣವಾಗಿದೆ.

‘ಬೀದಿನಾಯಿಗಳ ದಾಳಿಯಿಂದ ಜನರು ಹೆದರುತ್ತಿದ್ದಾರೆ. ಭಯದಲ್ಲಿ ಸಂಚರಿಸುತ್ತಿದ್ದಾರೆ. ಭಯ ಹೋಗಲಾಡಿಸಲು ಅಧಿಕಾರಿಗಳು ಮುಂದಾಗಬೇಕು. ಬೀದಿನಾಯಿಗಳನ್ನು ಹಿಡಿದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು’ ಎಂದು ಜನರು ಒತ್ತಾಯಿಸಿದ್ದಾರೆ.

ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ‘ಬೀದಿನಾಯಿಗಳ ಹಾವಳಿ ಇರುವುದು ಗಮನದಲ್ಲಿದೆ. ಅವುಗಳಿಗೆ ಏನಾದರೂ ಮಾಡಲು ಹೋದರೆ ಪ್ರಾಣಿ ದಯಾ ಸಂಘದವರು ಬರುತ್ತಾರೆ. ಅಧಿಕಾರಿಗಳ ವಿರುದ್ಧವೇ ಮೊಕದ್ದಮೆ ದಾಖಲಿಸುತ್ತಾರೆ. ಹೀಗಾಗಿ, ಬೀದಿನಾಯಿಗಳ ನಿಯಂತ್ರಣ ಮಾಡಲು ಅಧಿಕಾರಿಗಳು ಹಿಂದೇಟು ಹಾಕುವಂತಾಗಿವೆ’ ಎಂದು ವಾಸ್ತವ ಸ್ಥಿತಿಯನ್ನು ತೆರೆದಿಟ್ಟರು.

ಜಿಲ್ಲೆಯಾದ್ಯಂತ ಬೀದಿನಾಯಿಗಳ ನಿಯಂತ್ರಣಕ್ಕಾಗಿ ವಿಶೇಷ ಕಾರ್ಯಾಚರಣೆ ನಡೆಸಬೇಕು. ಈ ಮೂಲಕ ಬೀದಿನಾಯಿಗಳ ಬಗ್ಗೆ ಜನರಲ್ಲಿರುವ ಭಯ ಹೋಗಲಾಡಿಸಬೇಕು
ಧರ್ಮಣ್ಣ ಕೆಂಬಾವಿ ಹಾವೇರಿ

ನಾಯಿಯನ್ನೇ ಕೊಂದ ಜನ

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಬೀದಿನಾಯಿ ಕಡಿತದಿಂದಾಗಿ 12 ಮಂದಿ ತೀವ್ರ ಗಾಯಗೊಂಡಿದ್ದರು. ಇದರಿಂದ ಸಿಟ್ಟಾಗಿದ್ದ ಜನರು ನಾಯಿಯನ್ನು ಹೊಡೆದು ಕೊಂದಿದ್ದ ಘಟನೆ ಈಚೆಗೆ ನಡೆದಿತ್ತು. ಹಾನಗಲ್ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಈ ಬಗ್ಗೆ ಜನರು ದೂರು ನೀಡಿದರೂ ಪುರಸಭೆ ಅಧಿಕಾರಿಗಳು ಮಾತ್ರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೀದಿನಾಯಿಗಳ ಸಂತತಿ ಬೆಳೆಯುತ್ತಿದೆ.

ಮಕ್ಕಳು ಮಹಿಳೆಯರು ಹಾಗೂ ವೃದ್ಧರು ರಸ್ತೆಯಲ್ಲಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ‘ಚಿದಂಬರ ನಗರ ಮತ್ತು ಕುಮಾರೇಶ್ವರನಗರದಲ್ಲಿ ಇತ್ತೀಚೆಗೆ ಬೀದಿನಾಯಿಯೊಂದು 12 ಜನರ ಮೇಲೆ ದಾಳಿ ಮಾಡಿ ಕಚ್ಚಿತ್ತು. ಗಾಯಗೊಂಡವರು ಇಂದಿಗೂ ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಇದಕ್ಕೆ ಹೊಣೆ ಯಾರು? ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಬೀದಿ ನಾಯಿಗಳ ನಿಯಂತ್ರಣ ಮಾಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು.

ಅಪಘಾತಕ್ಕೆ ಕಾರಣ

ರಸ್ತೆಯಲ್ಲಿ ಹೋಗುವ ಬೈಕ್ಗಳನ್ನು ನಾಯಿಗಳ ಹಿಂಡು ಬೆನ್ನಟ್ಟುತ್ತಿದೆ. ಇದರಿಂದಾಗಿ ಬೈಕ್ ಸವಾರರು ರಸ್ತೆಯಲ್ಲಿಯೇ ಉರುಳಿಬಿದ್ದು ಗಾಯಗೊಳ್ಳುತ್ತಿದ್ದಾರೆ. ಬೀದಿನಾಯಿಗಳು ಅಪಘಾತಕ್ಕೆ ಕಾರಣವಾಗುತ್ತಿರುವುದಾಗಿ ಜನರು ದೂರುತ್ತಿದ್ದಾರೆ. ‘ಕೆಲದಿನಗಳ ಹಿಂದೆಯಷ್ಟೇ ಹಾವೇರಿಯ ದಾನೇಶ್ವರಿನಗರದ ರಸ್ತೆಯಲ್ಲಿ ಬೈಕ್ನಲ್ಲಿ ಹೊರಟಿದ್ದೆ. ನಾಯಿಗಳ ಹಿಂದು ಬೆನ್ನಟ್ಟಿತ್ತು. ಅವುಗಳಿಂದ ತಪ್ಪಿಸಿಕೊಳ್ಳಲು ಅತೀ ವೇಗದಲ್ಲಿ ಬೈಕ್ ಚಲಾಯಿಸಿದ್ದೆ. ಕ್ಷಣಮಾತ್ರದಲ್ಲಿ ಬೈಕ್ ಉರುಳಿಬಿದ್ದಿತ್ತು. ನಾನು ಬೈಕ್ ಸಮೇತ ರಸ್ತೆಗೆ ಬಿದ್ದಿದೆ. ಕೈ–ಕಾಲಿಗೆ ಪೆಟ್ಟಾಯಿತು’ ಎಂದು ಬಸವೇಶ್ವರನಗರದ ನಿವಾಸಿ ಕುಮಾರ ಶಾಂತಲಿಂಗಮ್ಮನವರ ತಿಳಿಸಿದರು.

‘288 ಮಂದಿಗೆ ಹಾವು ಕಡಿತ’

ಜಿಲ್ಲೆಯಲ್ಲಿ ನಾಯಿ ಕಡಿತದ ಜೊತೆಯಲ್ಲಿಯೇ ಹಾವು ಕಡಿತ ಪ್ರಕರಣಗಳು ಹೆಚ್ಚಾಗಿವೆ. ‘ಜನವರಿಯಿಂದ ಜೂನ್ವರೆಗೆ 288 ಮಂದಿಗೆ ಹಾವು ಕಡಿದಿದ್ದು ಈ ಪೈಕಿ ನಾಲ್ವರು ಮೃತಪಟ್ಟಿದ್ದಾರೆ. ಉಳಿದವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು. ‘ಜೂನ್ ತಿಂಗಳಿನಲ್ಲಿಯೇ 92 ಮಂದಿಗೆ ಹಾವು ಕಡಿದಿದೆ. ಎಲ್ಲರೂ ಚೇತರಿಸಿಕೊಂಡಿದ್ದಾರೆ. ಹಾವು ಕಡಿತಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ. ಔಷಧದ ದಾಸ್ತಾನೂ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.