ರಾಣೆಬೆನ್ನೂರು: ಮೆಣಸಿನಕಾಯಿ ಬೆಳೆಯಲ್ಲಿ ಮುಟುರು ರೋಗ, ಕಾಯಿಕೊರೆಯುವ ಕೀಟ ಬಾಧೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಮುಟುರು ರೋಗಕ್ಕೆ ಕಾರಣವಾದ ರಸ ಹೀರುವ ಕೀಟಗಳು, ಎಲೆಗಳ ಕೆಳಭಾಗದಲ್ಲಿ ಕುಳಿತು ರಸ ಹೀರುವುದರಿಂದ ಎಲೆಗಳು ಅಂಚಿನಿಂದ ಮುದುರಿಕೊಂಡು ಸಸ್ಯದ ಬೆಳವಣಿಗೆ ಕುಂಠಿತಗೊಳ್ಳಲಿದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ಇದರ ನಿರ್ವಹಣೆಗಾಗಿ ಹೊಲದ ಸುತ್ತಲೂ ತಡೆ ಬೆಳೆಯಾಗಿ 2 ರಿಂದ 3 ಸಾಲು ಎತ್ತರಕ್ಕೆ ಬೆಳೆಯಬಲ್ಲ ಜೋಳ ಅಥವಾ ಮೆಕ್ಕೆಜೋಳ ಬಿತ್ತಬೇಕು ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಗುರುಪ್ರಸಾದ ಜಿ.ಎಸ್ ಸಲಹೆ ನೀಡಿದರು.