ಮಂಗಳವಾರ, ಆಗಸ್ಟ್ 3, 2021
24 °C

ಚೀನಾ ವಿರುದ್ಧ ಬಿಜೆಪಿ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಲಡಾಖ್‌ ಗಡಿಯಲ್ಲಿ ಸೋಮವಾರ ರಾತ್ರಿ ಚೀನಾ ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಮೈತ್ರಿ ಮಂತ್ರ ಜಪಿಸುತ್ತಲೇ ಭಾರತದ ಬೆನ್ನಿಗೆ ಇರಿಯುವ ಕೆಲಸವನ್ನು ಮಾಡುತ್ತಿರುವ ಚೀನಾ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. 

ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಕೈಗೊಂಡ ಪ್ರತಿಭಟನೆ ವೇಳೆ, ಚೀನಾ ಉತ್ಪಾದಿತ ವಸ್ತುಗಳನ್ನು ಸುಡುವ ಮೂಲಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕರು ಕೂಡಾ ಚೀನಾ ವಸ್ತುಗಳನ್ನು ಬಳಸದೆ, ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ‘ಭಾರತದ ಶಾಂತ ಸ್ವಭಾವವನ್ನು ಚೀನಾ ದುರುಪಯೋಗ ಪಡಿಸಿಕೊಂಡರೆ ಸುಮ್ಮನಿರಲು ಭಾರತ ನೆಹರೂ ನಾಯಕತ್ವದ ಸರ್ಕಾರವನ್ನು ಹೊಂದಿಲ್ಲ. ಬದಲಾಗಿ ತಲೆಗೆ ತಲೆಗಳ ಪ್ರತ್ಯುತ್ತರ ನೀಡುವ ಧೀಮಂತ ನಾಯಕ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಸುರಕ್ಷಿತವಾಗಿರಲಿದೆ ಎಂದು ಹೇಳಿದರು.

ಮುಖಂಡರಾದ ಪ್ರದೀಪ ಮುಳ್ಳೂರ, ಶಶಿಧರ ಹೊಸಳ್ಳಿ, ಗಿರೀಶ ತುಪ್ಪದ, ಶಿವಕುಮಾರ ಸಂಗೂರ, ವಿರುಪಾಕ್ಷಪ್ಪ ಕಡ್ಲಿ, ಚನ್ನಮ್ಮ ಬ್ಯಾಡಗಿ, ಕವಿತಾ ಯಲವಗಿಮಠ, ರತ್ನಾ ಭಿಮಕ್ಕನವರ, ಶಿವಯೋಗಿ ಹುಲಿಕಂತಿಮಠ, ಬಬುಸಾಬ್ ಮೋಮಿನಗಾರ, ಪ್ರಭು ಹಿಟ್ನಳ್ಳಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು