ಶುಕ್ರವಾರ, ಮಾರ್ಚ್ 5, 2021
30 °C

ಚೌಡೇಶ್ವರಿ ದೇವಿ ಮೆರವಣಿಗೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ಇಲ್ಲಿನ ‘ಭಾವೈಕ್ಯ ದೇವಿ’ ಎಂದು ಪ್ರಖ್ಯಾತಿ ಪಡೆದಿರುವ ಗಂಗಾಜಲ ಚೌಡೇಶ್ವರಿ ದೇವಿ ಉತ್ಸವ ಮೆರವಣಿಗೆಗೆ ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಆರ್‌. ಶಂಕರ್‌ ಹಾಗೂ ಶಾಸಕ ಅರುಣಕುಮಾರ ಪೂಜಾರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಏಕನಾಥ ಬಾನುವಳ್ಳಿ ಅವರು ಸೋಮವಾರ ಚಾಲನೆ ನೀಡಿದರು. 

ನಗರದ ತುಂಬೆಲ್ಲ ತಳಿರು ತೋರಣ ಕಟ್ಟಿ ರಂಗೋಲಿ ಬಿಡಿಸಿ ಅಲಂಕರಿಸಲಾಗಿತ್ತು. ಸಕಲ ವಾದ್ಯಗಳೊಂದಿಗೆ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಮಂಗಳವಾರ ಬೆಳಿಗ್ಗೆ ಮೆಡ್ಲೇರಿ ರಸ್ತೆಯ ವಾಗೀಶ ನಗರದ ಚೌಡೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು. ಯುವಕರು ಸಿಡಿಮದ್ದುಗಳನ್ನು ಸಿಡಿಸಿದರು. ಮಹಿಳೆಯರು, ಛತ್ರಿ ಛಾಮರ ಬೀಸಿದರು. ಮಹಿಳೆಯರು ಆರತಿ ಬೆಳಗಿದರು. ಮೂರು ದಿನಗಳ ಕಾಲ ದೇವಿಯ ಜಾತ್ರೆ ನಡೆಯಲಿದೆ. 

ಸಚಿವ ಆರ್‌.ಶಂಕರ್‌ ಮಾತನಾಡಿ, ‘ಚೌಡೇಶ್ವರಿ ದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ಕೊರೊನಾ ಸೋಂಕು ದೂರವಾಗಿ ನಾಡಿನ ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಹೊಂದಲಿ. ಮಳೆ –ಬೆಳೆ ಚೆನ್ನಾಗಿ ಬಂದು ರೈತರು ಮತ್ತು ನಾಡು ಸಮೃದ್ಧವಾಗಲಿ’ ಎಂದರು.

ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ‘ಭಾವೈಕ್ಯತೆ ದೇವಿ ಗಂಗಾಜಲ ಚೌಡೇಶ್ವರಿ ದೇವಿ ಎಲ್ಲ ಸಮಾಜದ ಜನತೆಗೆ ಎಲ್ಲರಿಗೂ ಆಯುರಾರೋಗ್ಯವನ್ನು ನೀಡಲಿ, ನಾಡು ಸಂಪೂರ್ಣ ಕೊರೊನಾ ಮುಕ್ತ ನಗರವಾಗಲಿ. ಭಕ್ತರು ಜಾತ್ರೆ ಸಂದರ್ಭದಲ್ಲಿ ಎಲ್ಲರೂ ಮಾಸ್ಕ್‌ ಧರಿಸಿಕೊಂಡು, ಅಂತರವನ್ನು ಕಾಯ್ದುಕೊಳ್ಳಬೇಕು. ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು’ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ನಾಯಕ, ನಾರಾಯಣಪ್ಪ ಬಿಷ್ಟಣ್ಣನವರ, ರಾಮಣ್ಣ ಕಾಕಿ, ಲಕ್ಷ್ಮಣ ಚಿಂತಾ, ನಾಗಪ್ಪ ಕೆಂಪಹನುಮಣ್ಣನವರ, ಶಾಂತಲಿಂಗಪ್ಪ ಅಣಜೇರ, ಬಸವರಾಜ ಕಡೇಮನಿ, ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಉಪಾಧ್ಯಕ್ಷೆ ಕಸ್ತೂರಿ ಚಿಕ್ಕಬಿದರಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಗಳಗೌರಿ ಪೂಜಾರ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ಚೋಳಪ್ಪ ಕಸವಾಳ, ಭಾರತಿ ಜಂಬಿಗಿ, ಭಾರತಿ ಅಳವಂಡಿ ಇದ್ದರು.

ಡಿವೈಎಸ್‌ಪಿ ಟಿ.ಸಿ. ಸುರೇಶ, ಸಿಪಿಐಗಳಾದ ಎಂ.ಐ. ಗೌಡಪ್ಪಗೌಡ, ಭಾಗ್ಯವತಿ ಗಂತಿ, ಶ್ರೀಶೈಲ ಚೌಗಲಾ ಮತ್ತು ಪಿಎಸ್‌ಐ ಪ್ರಭು ಕೆಳಗಿನಮನಿ ಬಂದೋಬಸ್ತ್‌ ಒದಿಗಿಸಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು