ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ವೈದ್ಯ ಸೇರಿದಂತೆ 156 ಮಂದಿಗೆ ಕೋವಿಡ್‌

Last Updated 2 ಸೆಪ್ಟೆಂಬರ್ 2020, 15:28 IST
ಅಕ್ಷರ ಗಾತ್ರ

ಹಾವೇರಿ: ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು, ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಉದ್ಯೋಗಿಗಳು ಒಳಗೊಂಡಂತೆ ಜಿಲ್ಲೆಯಲ್ಲಿ ಬುಧವಾರ 156 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಹಾಗೂ 69 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ತಾಲ್ಲೂಕುವಾರು ವಿವರ:ಹಾವೇರಿ-55, ರಾಣೆಬೆನ್ನೂರು-29, ಬ್ಯಾಡಗಿ-23, ಹಿರೇಕೆರೂರು-21, ಶಿಗ್ಗಾವಿ-14, ಹಾನಗಲ್-9, ಸವಣೂರ-3 ಹಾಗೂ ಇತರೆ ಎರಡು ಮಂದಿಗೆ ಸೋಂಕು ದೃಢಪಟ್ಟಿದೆ.

ಸೋಂಕಿನಿಂದ ಗುಣಮುಖರಾಗಿ ಬ್ಯಾಡಗಿ-2, ಹಾನಗಲ್-1, ಹಾವೇರಿ-26, ಹಿರೇಕೆರೂರು-30, ರಾಣೆಬೆನ್ನೂರು-2, ಸವಣೂರು ಹಾಗೂ ಶಿಗ್ಗಾವಿ ತಲಾ 4 ಮಂದಿ ಬಿಡುಗಡೆ ಹೊಂದಿದ್ದಾರೆ.

ಮರಣ:ರಾಣೇಬೆನ್ನೂರು ಕನಕದಾಸ ನಗರದ 50 ವರ್ಷದ ಪುರುಷ, ಹಾನಗಲ್ ನಗರದ 80 ವರ್ಷದ ಪುರುಷ ಹಾಗೂ ಹಾನಗಲ್ ತಾಲ್ಲೂಕು ಬೊಮ್ಮನಹಳ್ಳಿಯ 81 ವರ್ಷದ ಮಹಿಳೆ ಸೇರಿದಂತೆ ಮೂವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT