ಗುರುವಾರ , ಅಕ್ಟೋಬರ್ 1, 2020
20 °C

ಟಿಎಚ್‌ಒ ಸೇರಿ 157 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ತಾಲ್ಲೂಕು ಆರೋಗ್ಯಾಧಿಕಾರಿ, ಖಾಸಗಿ ವೈದ್ಯ, ಪೊಲೀಸ್, ಬ್ಯಾಂಕ್‌ ನೌಕರ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 157 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 111 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ತಾಲ್ಲೂಕುವಾರು ವಿವರ:

ಸವಣೂರು-6, ಶಿಗ್ಗಾವಿ -10, ಬ್ಯಾಡಗಿ ಹಾಗೂ ಹಾನಗಲ್ ತಲಾ-18, ಹಾವೇರಿ-20, ಹಿರೇಕೆರೂರು-20, ರಾಣೆಬೆನ್ನೂರು ತಲಾ– 4, ಹಾವೇರಿ-32, ಬ್ಯಾಡಗಿ-7, ಹಾನಗಲ್-4, ಹಿರೇಕೆರೂರು-30 ಹಾಗೂ ರಾಣೆಬೆನ್ನೂರು ತಾಲ್ಲೂಕಿನ 53 ಮತ್ತು ಇತರೆ ಎರಡು ಜನರಿಗೆ ಸೋಂಕು ದೃಢಪಟ್ಟಿದೆ.

ಸೋಂಕಿನಿಂದ ಗುಣಮುಖರಾಗಿ ಸವಣೂರು-1, ಹಾನಗಲ್-4, ಶಿಗ್ಗಾಂವ-5, ಬ್ಯಾಡಗಿ ಹಾಗೂ ರಾಣೆಬೆನ್ನೂರು ತಾಲ್ಲೂಕಿನ ತಲಾ -17, ಹಾವೇರಿ ತಾಲ್ಲೂಕಿನ 67 ಮಂದಿ ಬಿಡುಗಡೆ ಹೊಂದಿದ್ದಾರೆ.

ಮರಣ:

ರಾಣೇಬೆನ್ನೂರು ವಿದ್ಯಾನಗರದ 85 ವರ್ಷದ ಪುರುಷ, ಹಾವೇರಿ ಶಿವಾಜಿನಗರದ 53 ವರ್ಷದ ಪುರುಷಹಾಗೂ ಕರ್ಜಗಿ ಗ್ರಾಮದ 65 ವರ್ಷದ ಮಹಿಳೆ ಸೇರಿದಂತೆ ಮೂರು ಜನರ ಮರಣವನ್ನು ಇಂದು ದೃಢಿಕರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.