ಸೋಮವಾರ, ಸೆಪ್ಟೆಂಬರ್ 28, 2020
22 °C
ಜಿಲ್ಲೆಯಲ್ಲಿ 1513ಕ್ಕೆ ಏರಿಕೆಯಾದ ಪ್ರಕರಣಗಳು: 150 ಮಂದಿ ಗುಣಮುಖ

ಹಾವೇರಿ: ಪಿಡಿಒ ಸೇರಿ 71 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕೆ.ವಿ.ಜಿ. ಬ್ಯಾಂಕ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತ ಸೇರಿದಂತೆ ಜಿಲ್ಲೆಯಲ್ಲಿ ಬುಧವಾರ 71 ಮಂದಿಗೆ ಕೋವಿಡ್-19 ದೃಢಪಟ್ಟಿದೆ. 150 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ ಈವರೆಗೆ 1513 ಕೋವಿಡ್-19 ಪ್ರಕರಣಗಳು ದೃಢಗೊಂಡಿವೆ. 825 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ 31 ಮಂದಿ ಮೃತಪಟ್ಟಿದ್ದಾರೆ. 79 ಸಕ್ರಿಯ ಪ್ರಕರಣಗಳು ಹೋಂ ಐಸೋಲೇಷನ್‍ನಲ್ಲಿ ಹಾಗೂ 578 ಪ್ರಕರಣಗಳು (ಡಿಸಿಎಚ್‌, ಡಿಸಿಎಚ್‌ಸಿ, ಸಿಸಿಸಿ) ಸಕ್ರಿಯವಾಗಿವೆ ಎಂದು ತಿಳಿಸಿದ್ದಾರೆ.

ಬುಧವಾರ ದೃಢಗೊಂಡ ಪ್ರಕರಣಗಳಲ್ಲಿ ಬ್ಯಾಡಗಿ-4, ಹಾನಗಲ್-5, ಹಾವೇರಿ-27, ಹಿರೇಕೆರೂರು-5, ರಾಣೆಬೆನ್ನೂರು-9, ಸವಣೂರ-11, ಶಿಗ್ಗಾವಿ ತಾಲ್ಲೂಕಿನಲ್ಲಿ 10 ಪ್ರಕರಣಗಳು ದೃಢಪಟ್ಟಿವೆ.

ಬ್ಯಾಡಗಿಯ ಬುಡಪನಹಳ್ಳಿ, ಬಿಸಲಹಳ್ಳಿ, ಕಾಗಿನೆಲೆ, ಬೆಟ್ಟದಮಲ್ಲೇಶ್ವರ ಗ್ರಾಮದ ವ್ಯಕ್ತಿಗಳಿಗೆ ಹಾಗೂ ಹಾನಗಲ್, ಸೈಯದಗುಪ್ಪಿ, ಅಕ್ಕಿಆಲೂರು, ಉಪ್ಪಣಸಿ, ಹುಲ್ಲತ್ತಿ, ಇನಾಂದ್ಯಾಮನಕೊಪ್ಪದ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಹಾವೇರಿ ನಗರದ 19 ಮಂದಿಗೆ, ಕೋಳೂರಿನ ಇಬ್ಬರಿಗೆ, ಗೂಡುರು, ಅಗಡಿ, ಬುಡಗಟ್ಟಿ, ಹೊಸಕಿತ್ತೂರು, ಗುತ್ತಲ, ಬೆಳವಿಗಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ರಟ್ಟಿಹಳ್ಳಿಯ ಇಬ್ಬರಿಗೆ, ಹಂಸಭಾವಿ, ಮೇದೂರು ಹಾಗೂ ಶಿರಗುಂಬಿಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ರಾಣೆಬೆನ್ನೂರು ನಗರದ ನಾಲ್ಕು, ಚಳಗೇರಿ, ದೇವರಗುಡ್ಡ, ಕೂನಬೇವು, ವಿದ್ಯಾರಾಯಣಹಳ್ಳಿ, ಯಮಕನಮರಡಿ ತಲಾ ಒಬ್ಬರಿಗೆ ಕೋವಿಡ್‌ ದೃಢಪಟ್ಟಿದೆ.

ಸವಣೂರ ನಗರದ ನಾಲ್ವರಿಗೆ, ಕಾರಡಗಿಯ ಇಬ್ಬರಿಗೆ, ಹತ್ತಿಮತ್ತೂರಿನ ಐದು ಮಂದಿಗೆ ಸೋಂಕು ದೃಢಪಟ್ಟಿದೆ. ಶಿಗ್ಗಾವಿ ನಗರದ ಐದು ಜನರಿಗೆ, ಗಂಗೀಭಾವಿಯ ಇಬ್ಬರಿಗೆ, ಕಲ್ಯಾಣದ ಇಬ್ಬರಿಗೆ ಹಾಗೂ ಬಂಕಾಪುರದ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಇಬ್ಬರ ಸಾವು

ಹಾವೇರಿ ತಾಲ್ಲೂಕು ಹಾವನೂರ ಗ್ರಾಮದ 40 ವರ್ಷದ ಪುರುಷ (ಪಿ-141023) ಆಗಸ್ಟ್ 1ರಂದು ತೀವ್ರ ಉಸಿರಾಟ ಸಮಸ್ಯೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಅವರ ಮೂಗಿನ ದ್ರವವನ್ನು ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಮೂಲಕ ಪರೀಕ್ಷೆ ಮಾಡಲಾಗಿತ್ತು. ಕೋವಿಡ್ ದೃಢಪಟ್ಟು, ಆಗಸ್ಟ್ 3ರಂದು ಮೃತಪಟ್ಟಿರುತ್ತಾರೆ.

ರಟ್ಟೀಹಳ್ಳಿ ತಾಲ್ಲೂಕು ಟಿಪ್ಪುನಗರ 70 ವರ್ಷದ ವೃದ್ಧ (ಪಿ-156403) ಆಗಸ್ಟ್ 2ರಂದು ತೀವ್ರ ಉಸಿರಾಟ ಸಮಸ್ಯೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅಂದೇ ಅವರ ಮೂಗಿನ ದ್ರವವನ್ನು ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಮೂಲಕ ಪರೀಕ್ಷೆ ಮಾಡಲಾಗಿತ್ತು. ಕೋವಿಡ್ ಸೋಂಕು ದೃಢಪಟ್ಟಿತ್ತು. ಆ.4ರಂದು ಮೃತಪಟ್ಟಿದ್ದಾರೆ. 

ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ‘ಕಂಟೈನ್‍ಮೆಂಟ್ ಜೋನ್’ ಹಾಗೂ ‘ಬಫರ್ ಜೋನ್’ ಆಗಿ ಘೋಷಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.