ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲಿ ಸೈಕ್ಲೋತ್ಸವ ಜ.3ರಂದು

Last Updated 25 ಡಿಸೆಂಬರ್ 2020, 13:16 IST
ಅಕ್ಷರ ಗಾತ್ರ

ಹಾವೇರಿ: ‘ಹಾವೇರಿ ಸೈಕ್ಲಿಂಗ್‌ ಕ್ಲಬ್’‌ ವತಿಯಿಂದ ನಗರದಲ್ಲಿ ಪ್ರಪ್ರಥಮ ಬಾರಿಗೆ ಜ.3ರಂದು ಬೆಳಿಗ್ಗೆ 7 ಗಂಟೆಗೆ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ‘ಸೈಕ್ಲೋತ್ಸವ–2021’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಂದು ಕ್ಲಬ್‌ ಅಧ್ಯಕ್ಷ ಎಂ.ಆರ್‌.ಎಂ. ರಾವ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಿಯೊಬ್ಬ ಪ್ರಜೆ ಆರೋಗ್ಯವಾಗಿದ್ದರೆ, ದೇಶ ಆರೋಗ್ಯಪೂರ್ಣವಾಗಿರುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ‘ಆರೋಗ್ಯವೇ ಭಾಗ್ಯ’ ಎಂಬುದು ಎಲ್ಲರಿಗೂ ಅರಿವಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯ ನೀಡುವ ‘ಸೈಕಲ್‌ ಸಂಸ್ಕೃತಿ’ಯನ್ನು ಪ್ರಚುರಪಡಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.

‘10 ಕಿ.ಮೀ. ‘ಸೈಕ್ಲಿಂಗ್’‌ ಮತ್ತು 3 ಕಿ.ಮೀ. ದೂರದ ‘ಹಾಫ್‌ ಮ್ಯಾರಥಾನ್’‌ ಏರ್ಪಡಿಸಲಾಗಿದೆ. ಈ ಸೈಕ್ಲೋತ್ಸವದಲ್ಲಿ ಯಾವುದೇ ಸ್ಪರ್ಧೆಗಳು ಇರುವುದಿಲ್ಲ. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ನೀಡಲಾಗುವುದು. 10ರಿಂದ 60 ವರ್ಷದೊಳಗಿನ ಆಸಕ್ತರು ಭಾಗವಹಿಸಬಹುದು. ಯಾವುದೇ ಶುಲ್ಕವಿರದೆ, ಸಂಪೂರ್ಣ ಉಚಿತವಾಗಿರುತ್ತದೆ. ಈಗಾಗಲೇ 400 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ 250 ಮಂದಿಗೆ ಕ್ಲಬ್‌ ವತಿಯಿಂದ ಉಚಿತವಾಗಿ ಟೀ ಶರ್ಟ್‌ ಅನ್ನು ನೀಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಿಂದ ಹೊರಟು ದಾನಮ್ಮ ದೇವಿ ದೇವಾಲಯ, ಮೇಲಿನಪೇಟೆ, ಎಂ.ಜಿ.ರಸ್ತೆ, ಗುತ್ತಲ ರಸ್ತೆ, ಹಳೇ ಪಿ.ಬಿ.ರಸ್ತೆ, ಜಿ.ಎಚ್‌. ಕಾಲೇಜು, ಇಜಾರಿಲಕಮಾಪುರ ಮಾರ್ಗವಾಗಿ ಮತ್ತೆ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನವನ್ನು ತಲುಪುವ 10 ಕಿ.ಮೀ. ದೂರದ ಸೈಕ್ಲಿಂಗ್‌ ನಡೆಯಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ ದೂ: 97433 16585/ 80957 59682 ಸಂಪರ್ಕಿಸಲು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಶ್ರವಣ ಪಂಡಿತ್‌, ಡಾ.ಗಿರೀಶ ಮಲ್ಲಾಡದ, ಧರಣೇಶ್‌ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT