ಕಡ್ಡಾಯ ಹಾಜರಾತಿ: ಕುಲಪತಿ ನಡೆಗೆ ಆಕ್ರೋಶ
ಹಾವೇರಿಯಲ್ಲಿ ನಡೆಯುವ ಪತ್ರಿಕಾಗೋಷ್ಠಿಗೆ ಕಡ್ಡಾಯವಾಗಿ ಬರುವಂತೆ ಕುಲಪತಿ ಅವರು ತಿಳಿಸಿದ್ದರು. ಹೀಗಾಗಿ, ಇಷ್ಟವಿಲ್ಲದಿದ್ದರೂ ಪತ್ರಿಕಾಗೋಷ್ಠಿಗೆ ಬಂದಿದ್ದೇವೆ’ ಎಂದು ವಿವಿಯ ಸಿಬ್ಬಂದಿಯೊಬ್ಬರು ಆಕ್ರೋಶ ಹೊರಹಾಕಿದರು. ‘ವಿವಿಯಲ್ಲಿ ಎಲ್ಲವೂ ಸರಿಯಾಗಿಲ್ಲ. ತಪ್ಪು ಮಾಹಿತಿ ನೀಡುವವರೇ ಹೆಚ್ಚಿದ್ದಾರೆ. ಸುಳ್ಳುಗಳನ್ನು ಕೇಳಿ ಸಾಕಾಗಿದೆ. ಪತ್ರಿಕಾಗೋಷ್ಠಿಯ ವಿಷಯ ನಮಗೆ ಗೊತ್ತಿರಲಿಲ್ಲ. ‘ಕುಲಪತಿಯವರು ಹೇಳಿದ್ದಾರೆ. ಕಡ್ಡಾಯವಾಗಿ ಬರಬೇಕು’ ಎಂದು ಮೊಬೈಲ್ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿದ್ದರು. ಕೆಲಸಕ್ಕೆ ತೊಂದರೆಯಾಗಬಹುದೆಂದು ಬಂದಿದ್ದೇವೆ. ತಪ್ಪು ಯಾರೇ ಮಾಡಿದರೂ ಶಿಕ್ಷೆಯಾಗಬೇಕು. ಅಕ್ರಮ ನೇಮಕಾತಿ ಆರೋಪದ ಬಗ್ಗೆಯೂ ಉನ್ನತ ಮಟ್ಟದ ತನಿಖೆಯಾಗಲಿ’ ಎಂದು ಆಗ್ರಹಿಸಿದರು.