ಬ್ಯಾಡಗಿ: ‘ಖಾಸಗಿ, ಅನುದಾನಿತ ಕಾಲೇಜುಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗದ ಸರ್ಕಾರದ ವಿಳಂಬ ನೀತಿಯಿಂದಾಗಿ ಆಡಳಿತ ಮಂಡಳಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ’ ಎಂದು ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಹೇಳಿದರು.

ಪಟ್ಟಣದ ಬಿಇಎಸ್ಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ 36 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಚಾರ್ಯ ಎಸ್.ಜಿ. ವೈದ್ಯ ಹಾಗೂ ಶಿಕ್ಷಕಿ ಸುನಂದಾ ಮೂಲಿಮನಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಮಾಣ ಹೆಚ್ಚಾಗುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಆದರೆ, ಅರೆಕಾಲಿಕ ಉಪನ್ಯಾಸಕರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಂದಲೇ ವೇತನ ನೀಡಬೇಕಿದ್ದು, ಆರ್ಥಿಕ ಹೊರೆ ಆಗುತ್ತಿದೆ’ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ‘ಎಸ್.ಜಿ. ವೈದ್ಯ ಅವರು ಪ್ರಾಚಾರ್ಯ ವೃತ್ತಿ ಜೊತೆಗೆ ಪ್ರವೃತ್ತಿಯಾಗಿ ಹಲವಾರು ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ’ ಎಂದು ಹೇಳಿದರು.

ಸಂಸ್ಥೆಯ ಸದಸ್ಯರಾದ ಎಸ್.ಎನ್. ನಿಡಗುಂದಿ, ವಿ.ಎಸ್. ಮೊರಿಗೇರಿ, ಎಲ್.ಎಂ. ಪಾಟೀಲ, ಸಂಗಪ್ಪ ಮಾಳಗಿ, ಗಿರೀಶ ಪಾಟೀಲ, ಸಿದ್ದು ಪಾಟೀಲ, ನಾಗರಾಜ ದೇಸೂರ, ಅಂಬಾಲಾಲ ಜೈನ್, ಆನಂದ ಜೈನ್, ಪಿ.ಟಿ. ಲಕ್ಕಣ್ಣನವರ, ಕೆ.ಜಿ. ಖಂಡೇಬಾಗೂರ, ಕೆ.ಎಂ. ಕಟಗಿಹಳ್ಳಿ, ಚನ್ನಮ್ಮ ಕೋರಿಶೆಟ್ಟರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.