ಶನಿವಾರ, ಮಾರ್ಚ್ 25, 2023
22 °C
ವೃದ್ಧಾಶ್ರಮದ ಹಿರಿಯರೊಂದಿಗೆ ದೀಪಾವಳಿ ಆಚರಿಸಿದ ಡಿ.ಸಿ

ಅನಾಥ ಮಕ್ಕಳಿಗೆ ಬಟ್ಟೆ, ಸಿಹಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಅನಾಥ ಮಕ್ಕಳೊಂದಿಗೆ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಕ್ಕಳಿಗೆ ಹೊಸ ಬಟ್ಟೆ ಹಾಗೂ ಸಿಹಿ ವಿತರಿಸಿ ಶುಭ ಹಾರೈಸಿದರು.

ಗುರುವಾರ ಮಧ್ಯಾಹ್ನ ಅನಾಥಾಶ್ರಮದ ಮಕ್ಕಳು ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯರನ್ನು ಮನೆಗೆ ಆಹ್ವಾನಿಸಿ ದೀಪಾವಳಿಯನ್ನು ಆಚರಿಸಿದರು.

ಜಿಲ್ಲಾಧಿಕಾರಿ ಅವರಿಗೆ ಜೊತೆಯಾದ ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್‌ ರೋಶನ್‌ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರು ವೃದ್ಧರು ಮತ್ತು ಮಕ್ಕಳೊಂದಿಗಿನ ದೀಪಾವಳಿ ಸಂಭ್ರಮದಲ್ಲಿ ಭಾಗವಹಿಸಿ, ಬೂಂದಿ, ಲಾಡು, ಚಾಕಲೇಟ್ ಹಾಗೂ ಬಾಳೆಹಣ್ಣು ವಿತರಿಸಿದರು. ಆಶ್ರಮದಲ್ಲಿ ಹೋಳಿಗೆ ಊಟ ಸಿದ್ಧಪಡಿಸಲಾಗಿತ್ತು.

ಶಕ್ತಿ ವೃದ್ಧಾಶ್ರಮದಿಂದ 22 ಜನ ವಯೋವೃದ್ಧ ಪುರುಷರಿಗೆ ಶರ್ಟ್, ಪಂಚೆ, ಟವೆಲ್ ಹಾಗೂ ಮಹಿಳೆಯರಿಗೆ ಸೀರೆ, ರವಿಕೆ, ಟವೆಲ್ ಹಾಗೂ ಸರ್ಕಾರಿ ತೆರೆದ ತಂಗುದಾಣದಲ್ಲಿ ಆಶ್ರಯ ಪಡೆದಿರುವ 12 ಮಕ್ಕಳು ಭಾಗವಹಿಸಿದ್ದು, ಬಾಲಕಿಯರಿಗೆ ಸ್ಕರ್ಟ್ ಹಾಗೂ ಬಾಲಕರಿಗೆ ಪ್ಯಾಂಟ್– ಶರ್ಟ್ ವಿತರಿಸಲಾಯಿತು.

ನಂತರ ಮಾತನಾಡಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ‘ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಸಂಪಾದಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ, ನಿಮಗೆ ಒಳ್ಳೆಯ ಭವಿಷ್ಯ ಸಿಗಲಿ’ ಎಂದು ಹಾರೈಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಐಆರ್‌ಎಸ್‌ ಅಧಿಕಾರಿ ಅಂಕಿತಾ ವರ್ಮಾ ರೋಷನ್ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು