‘ತಿಂಗಳಿಗೆ 30 ಸಾವಿರ ಕ್ವಿಂಟಲ್ ಜೋಳ’
‘ಹಾವೇರಿ ಜಿಲ್ಲೆಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಲು ತಿಂಗಳಿದೆ 30 ಸಾವಿರ ಕ್ವಿಂಟಲ್ ಜೋಳ ಹಾಗೂ 42 ಸಾವಿರ ಕ್ವಿಂಟಲ್ ಅಕ್ಕಿ ಬೇಕು. ಜನವರಿಗೆ ತಿಂಗಳಿಗೆ ಮಾತ್ರ ಅಗತ್ಯವಿರುವಷ್ಟು ಜೋಳವಿದೆ. ಫೆಬ್ರುವರಿಯಲ್ಲಿ ಜೋಳ ಇರುವುದಿಲ್ಲ. ಅದರ ಬದಲು ಅಕ್ಕಿ ವಿತರಣೆ ಮಾಡಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಮೇಶ ತಿಳಿಸಿದರು. ಜೋಳ ದಾಸ್ತಾನು ಖಾಲಿ ಆಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಜೋಳ ವಿತರಣೆ ಬಂದ್ ಮಾಡಲಾಗಿದೆ. ಫೆಬ್ರುವರಿಯಿಂದ ಹಾವೇರಿ ಜಿಲ್ಲೆಯಲ್ಲಿಯೂ ಜೋಳ ವಿತರಣೆ ಬಂದ್ ಮಾಡಲಾಗುವುದು’ ಎಂದರು. ‘ಜೋಳದ ದಾಸ್ತಾನು ಅಂತಿಮ ಹಂತದಲ್ಲಿತ್ತು. ಈ ಸಂದರ್ಭದಲ್ಲಿ ಜೋಳ ಹಾಳಾಗಿತ್ತು. ಇದರಿಂದ ಜಿಲ್ಲೆಯಲ್ಲಿ ಸ್ವಲ್ಪ ಸಮಸ್ಯೆಯಾಯಿತು. ಮುಂದಿನ ತಿಂಗಳಿನಿಂದ ಅಕ್ಕಿ ವಿತರಣೆ ಮಾಡಲು ಹೆಚ್ಚಿನ ದಾಸ್ತಾನು ಲಭ್ಯವಿದೆ’ ಎಂದೂ ಹೇಳಿದರು.