ಹಾವೇರಿ: ದೀಪಾವಳಿ ಹಬ್ಬದಂದು ಪ್ರಯಾಣಿಕರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗದಿಂದ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ.

ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ 18 ವಿಶೇಷ ರೈಲುಗಳು ಹಾಗೂ 10 ಹಾಲಿ ರೈಲುಗಳ ಸೇವೆಗಳನ್ನು ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಎಸ್ಎಸ್ಎಸ್ ಹುಬ್ಬಳ್ಳಿ–ಕೊಲ್ಲಂ ವಿಶೇಷ ಎಕ್ಸ್ಪ್ರೆಸ್ ರೈಲು (07314) ಅಕ್ಟೋಬರ್ 5, 12, 19, 26, ನ. 2, 9, 16, 23, 30 ಹಾಗೂ ಡಿಸೆಂಬರ್ 7, 14, 21, 28ರಂದು ಹಾವೇರಿ–ದಾವಣಗೆರೆ–ಬೀರೂರು–ತುಮಕೂರು–ಪಾಳಕ್ಕಾಡ್ ಮಾರ್ಗವಾಗಿ ಸಂಚರಿಸಲಿದೆ. ಅದೇ ರೈಲು, 13 ಬಾರಿ ಸೋಮವಾರದಂದು ಸಹ ಸಂಚರಿಸಲಿದೆ.

ಮುಜಾರ್ಫಪುರ್–ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ರೈಲು (05543) 6 ಬಾರಿ ಶುಕ್ರವಾರದಂದು ತುಮಕೂರು–ಅರಸೀಕೆರೆ–ದಾವಣಗೆರೆ–ರಾಣೆಬೆನ್ನೂರು–ಹಾವೇರಿ–ಕರ್ಜಗಿ ಮಾರ್ಗವಾಗಿ ಸಂಚರಿಸಲಿದೆ. ಅದೇ ರೈಲು ವಾಪಸು 6 ಬಾರಿ ಮಂಗಳವಾರದಂದು ಸಂಚರಿಸಲಿದೆ.

ಎಸ್ಎಸ್ಎಸ್ ಹುಬ್ಬಳ್ಳಿ–ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ರೈಲು (07345) ಹಾವೇರಿ–ಹರಿಹರ–ದಾವಣಗೆರೆ–ತುಮಕೂರು ಮಾರ್ಗವಾಗಿ ಅ. 17ರಂದು ಸಂಚರಿಸಲಿದೆ.

ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಬೆಳಗಾವಿ ವಿಶೇಷ ರೈಲು (06503) ತುಮಕೂರು–ಬೀರೂರು–ದಾವಣಗೆರೆ–ಹರಿಹರ–ಹಾವೇರಿ ಮಾರ್ಗವಾಗಿ ಅ. 17ರಂದು ಸಂಚರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.