ಹಾವೇರಿ: ‘ಈದ್ ಮಿಲಾದ್ ಹಾಗೂ ಗಣೇಶೋತ್ಸವ ಸಂದರ್ಭದಲ್ಲಿ ಡಿ.ಜೆ. (ಡಿಸ್ಕ್ ಜಾಕಿ) ಬಳಕೆ ನಿರ್ಬಂಧಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಉಲ್ಲಂಘಿಸಿ ಡಿ.ಜೆ. ಬಳಕೆ ಮಾಡಿದ್ದ ಮೂರು ಮಂಡಳಿಗಳ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿದೆ.

ಹಾವೇರಿ ಹಾಗೂ ಹಾನಗಲ್ ಶಹರದಲ್ಲಿ ಸೆ. 16ರಂದು ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆದಿತ್ತು. ಇದೇ ಸಂದರ್ಭದಲ್ಲಿ ಮಂಡಳಿ ಪದಾಧಿಕಾರಿಗಳು, ಹೊರ ರಾಜ್ಯಗಳಿಂದ ಡಿ.ಜೆ. ತರಿಸಿ ಬಳಸಿದ್ದರು. ವಿಡಿಯೊ ಪುರಾವೆ ಆಧರಿಸಿ ಮಂಡಳಿಗಳ ಪದಾಧಿಕಾರಿ ಹೆಸರು ಸಂಗ್ರಹಿಸಿ, ಅವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಹೆಚ್ಚು ಶಬ್ದ ಮಾಡುವ ಡಿ.ಜೆ.ಯಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು, ವೃದ್ಧರಿಗೆ ಡಿ.ಜೆ. ಶಬ್ದ ಹೆಚ್ಚು ಅಪಾಯಕಾರಿ. ಸುಪ್ರೀಂಕೋರ್ಟ್, ಹೈಕೋರ್ಟ್ ಸಹ ಹಲವು ಆದೇಶದಲ್ಲಿ ಡಿ.ಜೆ. ಬಗ್ಗೆ ಉಲ್ಲೇಖಿಸಿದೆ. ಅದನ್ನು ನಿರ್ಬಂಧ ಮಾಡುವಂತೆಯೂ ನಿರ್ದೇಶನ ನೀಡಿದೆ. ಅದೇ ನಿರ್ದೇಶನದಂತೆ ರಾಜ್ಯ ಸರ್ಕಾರದ ನಿಯಮಾವಳಿಯಂತೆ ಡಿ.ಜೆ. ಬಳಕೆಯನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಡಿ.ಜೆ. ಬಳಕೆ ನಿರ್ಬಂಧದ ಆದೇಶವಿದ್ದರೂ ಮಂಡಳಿಯವರು, ಹೊರ ರಾಜ್ಯಗಳಿಂದ ಡಿ.ಜೆ. ತರಿಸಿ ಬಳಸಿದ್ದಾರೆ. ಮೆರವಣಿಗೆ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರೂ ಡಿ.ಜೆ. ಬಳಕೆ ಕೈ ಬಿಟ್ಟಿರಲಿಲ್ಲ. ಹೀಗಾಗಿ, ವಿಡಿಯೊ ಸಮೇತ ಎಲ್ಲ ಪುರಾವೆ ಸಂಗ್ರಹಿಸಿ ಸೆ. 16ರಂದು ಒಂದೇ ದಿನ ಮೂರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಹಾವೇರಿಯಲ್ಲಿ ಎರಡು ಪ್ರಕರಣ: ಹಾವೇರಿಯ ಸುಭಾಷ್ ವೃತ್ತದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ್ದ ಗಜಾನನ ಉತ್ಸವ ಸಮಿತಿ ಹಾಗೂ ಗದ್ದಿಕೇರಿ ಓಣಿಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿದ್ದ ಗಜಾನನ ಸೇವಾ ಸಮಿತಿ ಪದಾಧಿಕಾರಿಗಳ ವಿರುದ್ಧ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಡಳಿ ಪದಾಧಿಕಾರಿಗಳ ಜೊತೆಯಲ್ಲಿ ಡಿ.ಜೆ. ಮಾಲೀಕರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ.

‘ಗಜಾನನ ಉತ್ಸವ ಸಮಿತಿಯ ‘ಹಾವೇರಿ ಕಾ ರಾಜಾ’ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಸೆ. 16ರಂದು ಮಧ್ಯಾಹ್ನದಿಂದ ರಾತ್ರಿಯವರೆಗೂ ನಡೆಯಿತು. ಸರ್ಕಾರದ ಆದೇಶ ಉಲ್ಲಂಘಿಸಿ ಡಿ.ಜೆ. ಬಳಸಿ ಸಾರ್ವಜನಿಕರ ಶಾಂತತೆಗೆ ತೊಂದರೆ ಉಂಟು ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಹಾವೇರಿಯ ಗದ್ದಿಗೇರ ಓಣಿಯ ಗಜಾನನ ಸೇವಾ ಸಮಿತಿಯವರು ಸಹ ಸೆ. 16ರಂದು ಮಧ್ಯಾಹ್ನದಿಂದ ರಾತ್ರಿಯವರೆಗೂ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಸಿದರು. ಅವರು ಸಹ ಡಿ.ಜೆ. ಬಳಸಿ, ಸಾರ್ವಜನಿಕರ ಶಾಂತತೆಗೆ ಧಕ್ಕೆ ಉಂಟು ಮಾಡಿದ್ದಾರೆ’ ಎಂದು ತಿಳಿಸಿದರು.

‘ಹಾನಗಲ್ ಪಟ್ಟಣದ ವಿರಾಟ ಹಿಂದೂ ಗಣಪತಿ ಮಂಡಳಿಯವರು ಸೆ. 16ರಂದು ಮಧ್ಯಾಹ್ನರಿಂದ ರಾತ್ರಿಯವರೆಗೂ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಸಿದ್ದಾರೆ. ಸಾರ್ವಜನಿಕರ ಶಾಂತಿಗೆ ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ₹ 1.20 ಲಕ್ಷ ಮೌಲ್ಯದ ಡಿ.ಜೆ. ಸೌಂಡ್ ಬಾಕ್ಸ್ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

‘ಡಿ.ಜೆ. ಪ್ರಕರಣ ವಾಪಸ್ ಪಡೆಯಲಿ’

‘ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮಂಡಳಿಗಳ ವಿರುದ್ಧ ದಾಖಲಿಸುವ ಪ್ರಕರಣಗಳನ್ನು ಹಿಂಪಡೆಯಬೇಕು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಬೆಳಗಾವಿ ವಿಭಾಗ ಹಾಗೂ ಧಾರವಾಡದಲ್ಲಿ ಡಿ.ಜೆ ಬಳಸಲು ಅವಕಾಶ ಕಲ್ಪಿಸಿದ್ದಾರೆ. ಆದರೆ, ಹಾವೇರಿ ಜಿಲ್ಲೆಗೆ ಅವಕಾಶ ನೀಡಿಲ್ಲ’ ಎಂದರು.

‘ಶಬ್ದದ ಡೆಸಿಬಲ್ ಕಡಿಮೆ ಮಾಡುವ ಬಗ್ಗೆ ನ್ಯಾಯಾಲಯದ ನಿಯಮವಿದೆ. ಅದನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ಆದರೆ, ಇಲ್ಲಿ ಗಣೇಶ ಹಬ್ಬದ ಸಂಭ್ರಮವನ್ನು ಹಾಳು ಮಾಡಿದ್ದಾರೆ. ಡಿ.ಜೆ. ವಿಚಾರದಲ್ಲಿ ಸರ್ಕಾರ ನಮ್ಮ ಕಾರ್ಯಕರ್ತರ ಮೇಲೆ ಹಾಕಿರುವ ಎಫ್ಐಆರ್ಗಳನ್ನು ಕೂಡಲೇ ವಾಪಸು ಪಡೆಯಬೇಕು’ ಎಂದು ಒತ್ತಾಯಿಸಿದರು.

‘ಪ್ರಕರಣ ದಾಖಲು; ಪೊಲೀಸರ ತಾರತಮ್ಯ’

‘ಡಿ.ಜೆ. ಬಳಕೆಗೆ ಸಂಬಂಧಪಟ್ಟಂತೆ ಮೂರು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಾಯ್ದೆ ಪಾಲನೆ ಹಾಗೂ ಡಿ.ಜೆ. ಜಪ್ತಿ ವಿಚಾರದಲ್ಲಿ ತಾರತಮ್ಯ ಮಾಡಿದ್ದಾರೆ’ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

‘ಎರಡು ಮಂಡಳಿಗಳ ವಿರುದ್ಧ ಕರ್ನಾಟಕ ಪೊಲೀಸ್ (ಕೆ.ಪಿ) ಕಾಯ್ದೆಯಡಿ ಮಾತ್ರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾನಗಲ್ ಮಂಡಳಿ ವಿರುದ್ಧ ಮಾತ್ರ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಮೂರು ಕಡೆಯೂ ಡಿ.ಜೆ. ಬಳಕೆಯಾಗಿದ್ದು, ಪ್ರಕರಣ ದಾಖಲಾತಿಯಲ್ಲಿ ಏಕೆ ತಾರತಮ್ಯ’ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

‘ಹಾವೇರಿ ಸುಭಾಷ್ ವೃತ್ತದ ಗಜಾನನ ಉತ್ಸವ ಸಮಿತಿ ಹಾಗೂ ಗದ್ದಿಕೇರಿ ಓಣಿಯ ಗಜಾನನ ಸೇವಾ ಸಮಿತಿ ಪದಾಧಿಕಾರಿಗಳ ವಿರುದ್ಧ ಕೆಪಿ ಕಾಯ್ದೆ 36/109 ಅಡಿ ಪ್ರಕರಣ ದಾಖಲಾಗಿದೆ. ಹಾನಗಲ್ನ ವಿರಾಟ ಹಿಂದೂ ಗಣಪತಿ ಮಂಡಳಿಯ ವಿರುದ್ಧ ಬಿಎನ್ಎಸ್ 189(2), 292/190 ಅಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಪೊಲೀಸರ ನಡೆ ಮೇಲೆಯೇ ಅನುಮಾನ ವ್ಯಕ್ತವಾಗುತ್ತಿದೆ’ ಎಂದು ದೂರಿದರು.

ಜನರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು, ‘ಪ್ರಕರಣ ತನಿಖೆ ಹಂತದಲ್ಲಿದ್ದು, ನಂತರದ ದಿನಗಳಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.