ಹಾವೇರಿ: ಮಹಿಳೆಯರು ವಾಹನ ಚಾಲನೆ ತರಬೇತಿ ಪಡೆದು ಘನತ್ಯಾಜ್ಯ ಕಸ ವಿಲೇವಾರಿ ವಾಹನಗಳ ಚಾಲಕರಾಗಿ ಕಾರ್ಯನಿರ್ವಹಿಸುವುದರ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿಸಿಇಒ ಮೊಹಮ್ಮದ್ ರೋಶನ್ ಕರೆ ನೀಡಿದರು.

ದೇವಗಿರಿಯಲ್ಲಿರುವ ಬರೊಡಾ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮಹಿಳೆಯರಿಗೆ ಘನತ್ಯಾಜ್ಯ ಕಸ ವಿಲೇವಾರಿ ವಾಹನ ಚಾಲನೆ ಮಾಡುವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ವಿನೂತನವಾದ ಪ್ರಯೋಗವನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಭಾಗದ ಘನತ್ಯಾಜ್ಯ ಕಸ ವಿಲೇವಾರಿ ವಾಹನಗಳ ಚಾಲನೆಗೆ ಮಹಿಳೆಯರಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ. ಈ ಕುರಿತಂತೆ ಪ್ರಥಮ ಬಾರಿಗೆ ಘನತ್ಯಾಜ್ಯ ಕಸ ವಿಲೇವಾರಿ ಕಾರ್ಯ ಕೈಗೊಳ್ಳಲು 30 ದಿನಗಳ ಲಘು ವಾಹನ ತರಬೇತಿಯನ್ನು ಬರೊಡಾ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಕೇಂದ್ರದಿಂದ ಆಯೋಜಿಸಲಾಗಿದೆ ಎಂದರು.

ಮಹಿಳೆಯರು ವಾಹನ ಚಾಲನಾ ತರಬೇತಿಯನ್ನು ಸಂಪೂರ್ಣವಾಗಿ ಪಡೆದುಕೊಳ್ಳಬೇಕು. ಮಹಿಳಾ ಚಾಲಕರಾಗಿ ವಾಹನ ಚಾಲನೆ ಜೊತೆಗೆ ಗ್ರಾಮೀಣ ಸ್ವಚ್ಛತೆಯ ಕಾರ್ಯಕ್ಕೆ ಕೈಜೋಡಿಸಬೇಕು. ಈ ಕೆಲಸದಿಂದ ತಾವು ಆರ್ಥಿಕವಾಗಿ ಸಬಲರಾಗಬಹುದು. ಸಮಾಜದಲ್ಲಿ ಗೌರವಯುತವಾದ ಜೀವನ ನಡೆಸಬಹುದು. ಮಹಿಳೆಯರು ಪ್ರತಿ ಹಂತದಲ್ಲೂ ಧೈರ್ಯದಿಂದ ಮುನ್ನಡೆದರೆ ನಿಶ್ಚಿತವಾಗಿಯೂ ಯಶಸ್ಸು ಹೊಂದಲು ಸಾಧ್ಯ ಎಂದು ಹೇಳಿದರು.

ವೆಬ್‍ಸಿಟಿ ತರಬೇತಿ ಸಂಸ್ಥೆಯ ನಿರ್ದೇಶಕ ಎಸ್.ಸಜೀತ್, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ವಸೀಂಬಾಬಾ ಮುದ್ದೇಬಿಹಾಳ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎಸ್.ಜೆ. ಕೊರವರ, ಪರಶುರಾಮ ಪೂಜಾರ, ಜಿಲ್ಲಾ ಯೋಜನಾ ನಿರ್ದೇಶಕ ನಾಗರಾಜ ಬಾರ್ಕಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.