ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯದಲ್ಲಿ ಸೋಮವಾರ ಜರುಗಿದ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರು ಹಾಗೂ ಸಹಾಯಕ ಕುಲಸಚಿವರ ನಡುವೆ ಜಟಾಪಟಿ ನಡೆಯಿತು.

‘ಸಭೆಯ ವಿಷಯಗಳ ಚರ್ಚೆ ಸಂದರ್ಭದಲ್ಲಿ ದುರ್ವರ್ತನೆ ತೋರಿದ್ದಾರೆ’ ಎಂಬ ಆರೋಪದಡಿ ಸಹಾಯಕ ಕುಲಸಚಿವ ಶಹಜಾನ ಮುದಕವಿ ವಿರುದ್ಧ ನೋಟಿಸ್ ಜಾರಿ ಮಾಡುವಂತೆ ಸದಸ್ಯರು ನಡಾವಳಿಗೆ ಅನುಮೋದನೆ ನೀಡಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಸೋಮವಾರ ಸಿಂಡಿಕೇಟ್ ಸಭೆ ಕರೆಯಲಾಗಿತ್ತು. ವಿಶ್ವವಿದ್ಯಾಲಯದ ಆಡಳಿತ ಹಾಗೂ ಅಭಿವೃದ್ಧಿ ವಿಚಾರದ ಬಗ್ಗೆ ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳ ನಿವಾಸಿಗಳಾಗಿರುವ ಆರು ಸಿಂಡಿಕೇಟ್ ಸದಸ್ಯರು ಬಂದಿದ್ದರು.

ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಭೆಗೆ ಮಧ್ಯಾಹ್ನ 1 ಗಂಟೆಯಾದರೂ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಇತರರು ಬರಲಿಲ್ಲ. ಅವರಿಗಾಗಿ ಸಿಂಡಿಕೇಟ್ ಸದಸ್ಯರು ಕಾದು ಕುಳಿತಿದ್ದರು.

‘ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ಹಾಗೂ ₹ 42 ಲಕ್ಷ ಮುಂಗಡ ಹಣದ ವಿಚಾರ ಸಭೆಯಲ್ಲಿ ಬರುತ್ತದೆ’ ಎಂದು ತಿಳಿದಿದ್ದ ವಿ.ವಿ. ಆಡಳಿತ ಮಂಡಳಿಯರು, ಸರಿಯಾದ ಸಮಯಕ್ಕೆ ಸಭೆ ಆರಂಭಿಸಲಿಲ್ಲವೆಂದು ಸಿಂಡಿಕೇಟ್ ಸದಸ್ಯರು ದೂರಿದರು. ಕೆಲ ಸದಸ್ಯರು, ‘ಸಭೆ ನಡೆಸುವ ಮನಸ್ಸು ಇದೆಯಾ ಇಲ್ಲವೋ’ ಎಂದು ಪ್ರಶ್ನಿಸಿದಾಗಲೇ, ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಭೆ ಆರಂಭಿಸಲಾಯಿತು.

ಏಕ ವಚನದಲ್ಲಿ ನಿಂದನೆ ಆರೋಪ: ಸಭೆ ಆರಂಭವಾಗುತ್ತಿದ್ದಂತೆ ಕೆಲ ಸಿಂಡಿಕೇಟ್ ಸದಸ್ಯರು, ‘ಸಹಾಯಕ ಕುಲಸಚಿವ ಶಹಜಾನ ಮುದಕವಿ ಅವರು ಅಕ್ರಮವಾಗಿ ನೇಮಕಾತಿ ಆಗಿರುವುದಾಗಿ ಹಾಗೂ ಖೊಟ್ಟಿ ಪ್ರಮಾಣ ಪತ್ರ ನೀಡಿರುವುದಾಗಿ ಸಾರ್ವಜನಿಕರು ದೂರುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ಸಭೆಗೆ ವರದಿ ಸಲ್ಲಿಸಬೇಕು’ ಎಂದು ಆಗ್ರಹಿಸಿದರು.

ಅಷ್ಟಕ್ಕೆ ಕೆಂಡಾಮಂಡಲರಾದ ಮುದಕವಿ, ‘ಯಾರದ್ದೋ ಮಾತು ಕೇಳಿ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ’ ಎಂದು ಸದಸ್ಯರ ವಿರುದ್ಧ ಹರಿಹಾಯ್ದರು. ಸದಸ್ಯರೊಬ್ಬರನ್ನು ವೈಯಕ್ತಿಕವಾಗಿ ನಿಂದಿಸಿದ ಮುದಕವಿ, ‘ನೀನು ಯಾರು? ಎಲ್ಲಿಂದ ಬಂದಿದಿಯಾ? ಎಲ್ಲವೂ ನನಗೆ ಗೊತ್ತಿದೆ. ಈಗ ನನ್ನ ಬಗ್ಗೆ ಮಾತನಾಡುತ್ತಿದಿಯಾ?’ ಎಂದು ಜೋರು ಧ್ವನಿಯಲ್ಲಿಯೇ ಮಾತನಾಡಿದರು. ಮಧ್ಯಪ್ರವೇಶಿಸಿದ ಇತರೆ ಸದಸ್ಯರು, ಮುದಕವಿ ವರ್ತನೆಯನ್ನು ಖಂಡಿಸಿದರು ಎಂದು ಮೂಲಗಳು ತಿಳಿಸಿವೆ.

‘ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮ ನೇಮಕಾತಿಯನ್ನು ಪ್ರಶ್ನಿಸಿ ತನಿಖೆ ನಡೆಸುವಂತೆ ಸೂಚಿಸುವ ಅಧಿಕಾರ ಸಿಂಡಿಕೇಟ್ಗೆ ಇದೆ. ವಿಷಯ ಪ್ರಸ್ತಾಪಿಸುತ್ತಿದ್ದಂತೆ ಸಹಾಯಕ ಕುಲಸಚಿವರು ಸದಸ್ಯರ ವಿರುದ್ಧವೇ ದುರ್ನಡತೆ ತೋರುವುದು ಸರಿಯಲ್ಲ. ದುರ್ನಡತೆ ತೋರಿ ಸಭೆಗೆ ಅಪಮಾನ ಮಾಡಿರುವ ಮುದಕವಿ ಅವರಿಗೆ ನೋಟಿಸ್ ನೀಡಬೇಕು. ಅವರ ನೇಮಕಾತಿ ಪ್ರಕ್ರಿಯೆ, ವಿದ್ಯಾರ್ಹತೆ ಹಾಗೂ ಸಕಲ ಮಾಹಿತಿಯನ್ನು ಪರಿಶೀಲಿಸಿ ಸಿಂಡಿಕೇಟ್ ಸಭೆಗೆ ವರದಿ ನೀಡಬೇಕು. ಇದನ್ನು ನಡಾವಳಿಯಲ್ಲಿ ಸೇರಿಸಿ ಅನುಮೋದನೆಗೊಂಡ ವಿಷಯವೆಂದು ಉಲ್ಲೇಖಿಸಬೇಕು’ ಎಂದು ಸರ್ವ ಸದಸ್ಯರು, ವಿಶ್ವವಿದ್ಯಾಲಯದ ಕುಲಸಚಿವ ಶಿವಶಂಕರ ಅವರಿಗೆ ಸೂಚಿಸಿದರು ಎಂದು ಮೂಲಗಳು ಮಾಹಿತಿ ನೀಡಿವೆ.

ನೋಟಿಸ್ ನೀಡುವ ನಡಾವಳಿಗೆ ಸಂಬಂಧಪಟ್ಟಂತೆ ಮಧ್ಯಪ್ರವೇಶಿಸಿದ್ದ ಕುಲಪತಿ ಪ್ರೊ. ಟಿ.ಎಂ.ಭಾಸ್ಕರ್, ‘ನೋಟಿಸ್ ನೀಡುವುದು ಬೇಡ’ ಎಂದರು. ಕುಲಪತಿ ವಿರುದ್ಧವೂ ಅಸಮಾಧಾನಗೊಂಡ ಸದಸ್ಯರು, ‘ದುರ್ನಡತೆ ತೋರಿರುವ ಸಹಾಯಕ ಕುಲಸಚಿವರನ್ನು ನೀವು ಕೂಡಲೇ ಅಮಾನತು ಮಾಡಬೇಕು. ಅದು ನಿಮ್ಮ ಕರ್ತವ್ಯ. ಅದನ್ನು ಬಿಟ್ಟು ರಕ್ಷಣೆ ಮಾಡುವುದು ಸರಿಯಲ್ಲ. ನಿಮಗೆ ಸ್ವತಂತ್ರವಾಗಿ ಅಧಿಕಾರ ನಡೆಸಲು ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು. ಈ ವಿಚಾರವಾಗಿಯೂ ಜಟಾಪಟಿ ನಡೆಯಿತು.

₹ 42 ಲಕ್ಷ ವಸೂಲಿ ಮಾಡಿ: ವಿಶ್ವವಿದ್ಯಾಲಯದ ₹ 42 ಲಕ್ಷ ಹಣವನ್ನು ಮುಂಗಡವಾಗಿ ಪಡೆದುಕೊಂಡು ಲೆಕ್ಕ ನೀಡದೇ ಅವ್ಯವಹಾರ ಎಸಗಿರುವ ಆರೋಪ ವ್ಯಕ್ತವಾಗಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಿದ ಸಿಂಡಿಕೇಟ್ ಸದಸ್ಯರು, ‘ತಿಂಗಳ ಒಳಗಾಗಿ ಎಲ್ಲ ಹಣವನ್ನು ವಸೂಲಿ ಮಾಡಬೇಕು’ ಎಂದು ಹಣಕಾಸು ಅಧಿಕಾರಿಗಳಿಗೆ ತಾಕೀತು ಮಾಡಿದರು.

‘ವಿವಿಯ ಹಿಂದಿನ ಕುಲಸಚಿವ ಸಿ.ಟಿ. ಗುರುಪ್ರಸಾದ್ ಅವರು ₹ 12.50 ಲಕ್ಷ, ಸಹಾಯಕ ಕುಲಸಚಿವ ಶಹಜಾನ್ ಮುದಕವಿ ₹ 10.50 ಲಕ್ಷ ಮುಂಗಡ ಪಡೆದಿದ್ದಾರೆ. ಇತರರು ಸಹ ಹಣ ಪಡೆದು ಲೆಕ್ಕ ಕೊಟ್ಟಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ’ ಎಂದು ಸದಸ್ಯರು ಗಮನಕ್ಕೆ ತಂದರು.

ಸಿಂಡಿಕೇಟ್ ಸದಸ್ಯರಾದ ಬಿ.ಎಂ. ಪುಟ್ಟಯ್ಯ, ಚಂದ್ರಶೇಖರ ಗೊರವಾಲೆ, ಮೋಹನಕುಮಾರ್, ರಾಮಪ್ಪ ಲಮಾಣಿ, ಶಹಾನಾ ಪಿಂಜಾರ್, ಜ್ಯೋತಿ ಲಕ್ಷ್ಮಿ, ಹಣಕಾಸು ಅಧಿಕಾರಿ ವಸಂತಕುಮಾರ್ ಇದ್ದರು.

ಸಹಾಯಕ ಕುಲಸಚಿವ ಶಹಜಾನ್ ಮುದಕವಿ ಅವರು ಸದಸ್ಯರಿಗೆ ಅಪಮಾನ ಮಾಡಿ ದುರ್ನಡತೆ ತೋರಿದ್ದಾರೆ. ಅವರಿಗೆ ನೋಟಿಸ್ ನೀಡುವಂತೆ ಕುಲಸಚಿವರಿಗೆ ಹೇಳಿದ್ದೇವೆ
ರಾಮಪ್ಪ ಲಮಾಣಿ ಸಿಂಡಿಕೇಟ್ ಸದಸ್ಯ

ಸಿಂಡಿಕೇಟ್ ಸಭೆಯ ಎರಡು ಗಂಟೆಯ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಾರೆ. ಸಹಾಯಕ ಕುಲಸಚಿವ ಸದಸ್ಯರನ್ನೇ ಏಕವಚನದಲ್ಲಿ ನಿಂದಿಸಿದ್ದಾರೆ. ಅವರ ವಿರುದ್ಧ ನಡಾವಳಿಗೆ ಅನುಮೋದನೆ ನೀಡಿದ್ದೇವೆ
ಬಿ.ಎಂ. ಪುಟ್ಟಯ್ಯ ಸಿಂಡಿಕೇಟ್ ಸದಸ್ಯ

₹ 500 ಕೋಟಿ ಕ್ರಿಯಾಯೋಜನೆಗೆ ಚಿಂತನೆ

ಜಾನಪದ ವಿಶ್ವವಿದ್ಯಾಲಯವನ್ನು ಸರ್ವ ರೀತಿಯಲ್ಲೂ ಅಭಿವೃದ್ಧಿಪಡಿಸುವ ಉದ್ದೇಶದಿಂದ ₹500 ಕೋಟಿ ಮೊತ್ತದ ಕ್ರಿಯಾಯೋಜನೆ ಸಿದ್ಧಪಡಿಸುವ ಬಗ್ಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಲಾಯಿತು. ‘ದೇಶದ ಮೊದಲ ಜಾನಪದ ವಿಶ್ವವಿದ್ಯಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು. ಮೂಲ ಸೌಕರ್ಯ ಹಾಗೂ ವಿದ್ಯಾರ್ಥಿಗಳ ಜಾನಪದದ ಅಧ್ಯಯನಕ್ಕೆ ನೆರವಾಗುವ ಸೌಲಭ್ಯ ಕಲ್ಪಿಸಬೇಕು. ಹೀಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ’ ಎಂದು ಸಿಂಡಿಕೇಟ್ ಸಭೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.