ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿಆಲೂರ: ಶುಂಠಿ ಬೆಲೆ ಗಗನಮುಖಿ, ರೈತರ ಮೊಗದಲ್ಲಿ ಮಂದಹಾಸ

Last Updated 26 ಜೂನ್ 2022, 4:29 IST
ಅಕ್ಷರ ಗಾತ್ರ

ಅಕ್ಕಿಆಲೂರ: ಮಾರುಕಟ್ಟೆಯಲ್ಲಿ ಕಡಿಮೆಯಾಗಿದ್ದ ಶುಂಠಿ ಬೆಲೆ ಇದೀಗ ಒಮ್ಮೆಲೆ ಗಗನಮುಖಿಯಾಗಿದ್ದು, ಬೆಳೆಗಾರರು ಹಿರಿಹಿರಿ ಹಿಗ್ಗಿದ್ದಾರೆ. ಕಳೆದ ವಾರ ಕಟಾವು ಮಾಡಿ ಕಡಿಮೆ ಬೆಲೆಗೆ ಶುಂಠಿ ಮಾರಿರುವ ಬೆಳೆಗಾರರು ಕೈ ಹಿಸುಕಿಕೊಳ್ಳುತ್ತಿದ್ದು, ಕಟಾವು ಮಾಡದವರ ಮೊಗದಲ್ಲಿ ಮಂದಹಾಸ ಮೂಡಿದೆ.

ಪ್ರತಿ ಕ್ವಿಂಟಾಲ್‍ಗೆ ₹ 2,200ನಷ್ಟಿದ್ದ ಶುಂಠಿ ಬೆಲೆ ಇದೀಗ ₹ 3,500 ಜಿಗಿದಿದೆ. ₹ 1,600-2200ರವರೆಗೆ ಈಗಾಗಲೇ ಶೇ 50 ಕ್ಕಿಂತ ಹೆಚ್ಚು ಬೆಳೆಗಾರರು ಶುಂಠಿ ಮಾರಾಟ ಮಾಡಿದ್ದು, ಬೆಲೆ ಹೆಚ್ಚುವ ಆಶಾಭಾವದಲ್ಲಿದ್ದ ಬೆಳೆಗಾರರ ಅದೃಷ್ಟ ಖುಲಾಯಿಸಿದೆ.

ಉತ್ತರ ಭಾರತದಿಂದ ಶುಂಠಿಗೆ ಬೇಡಿಕೆ ಹೆಚ್ಚಿದೆ. ಬಿತ್ತನೆ ಸಮಯವಾಗಿರುವುದರಿಂದ ಬೀಜಕ್ಕೂ ಶುಂಠಿ ಕೇಳುವರ ಸಂಖ್ಯೆ ಹೇರಳವಾಗಿದೆ. ಇನ್ನೊಂದೆಡೆ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಶುಂಠಿಗೆ ಬೇಡಿಕೆ ಇದೆ. ಮುಂದಿನ ತಿಂಗಳು ಬಕ್ರೀದ್ ಹಬ್ಬ ಇರುವುದು ಮಾರುಕಟ್ಟೆಯಲ್ಲಿ ಶುಂಠಿಯ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

ಮಾರುಕಟ್ಟೆಯಲ್ಲಿ ಶುಂಠಿ ಬೆಲೆ ಸ್ಥಿರವಾಗಿಲ್ಲ. ಕಳೆದ ವಾರ ₹ 2,200ನಷ್ಟಿದ್ದ ಬೆಲೆ ಕಳೆದ ಬುಧವಾರದ ಹೊತ್ತಿಗೆ ಒಮ್ಮೆಲೆ ₹ 3,600 ಕ್ಕೆ ಜಿಗಿದಿತ್ತು. ಶುಕ್ರವಾರ ಇನ್ನಷ್ಟು ಏರುಮುಖವಾಗಿ ₹ 4,200 ತಲುಪಿತ್ತು. ಇದೀಗ ಶನಿವಾರ ಮತ್ತೆ 3,500 ಕ್ಕೆ ಇಳಿದಿದೆ. ಏರಿಳಿತದಿಂದಾಗಿ ಬೆಳೆಗಾರರು-ವ್ಯಾಪಾರಸ್ಥರು ಗೊಂದಲಕ್ಕೀಡಾಗಿದ್ದಾರೆ.

ಶುಂಠಿ ಬೆಳೆಯಲು ಪ್ರತಿ ಎಕರೆಗೆ ₹ 3 ರಿಂದ 4 ಲಕ್ಷ ಗಳವರೆಗೆ ಖರ್ಚಾಗಲಿದ್ದು, 200 ರಿಂದ 300 ಕ್ವಿಂಟಲ್‍ವರೆಗೆ ಫಸಲು ಕೈ ಸೇರಲಿದೆ. ರೋಗ ತಗುಲಿ, ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಫಸಲು ಕೂಡ ಪಾತಾಳಮುಖಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT