ಹಾವೇರಿ: ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಭಾನುವಾರ ಹಮ್ಮಿಕೊಂಡಿದ್ದ ಅಕ್ಷರದ ಸಾಮಾನ್ಯ ಜ್ಞಾನದ ಪರೀಕ್ಷೆಗೆ 8,725 ಅನಕ್ಷರಸ್ಥರು ಹಾಜರಾದರು.

ಅನಕ್ಷರಸ್ಥರನ್ನು ಅಕ್ಷರಸ್ಥರರಾಗಿಸಲು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯು ‘ಸಾವಿರ ಗ್ರಾಮ ಪಂಚಾಯಿತಿ ಕಾರ್ಯಕ್ರಮ’ದ ಅಂಗವಾಗಿ ಸಂಜೆ ತರಗತಿಗಳನ್ನು ನಡೆಸಲಾಗುತ್ತಿದೆ. ಈ ತರಗತಿಗೆ ಹಾಜರಾಗಿದ್ದ ಅನಕ್ಷರಸ್ಥರು ಭಾನುವಾರ ಪರೀಕ್ಷೆ ಬರೆದರು.

ಜಿಲ್ಲೆಯ 21 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕಾರ್ಯಕ್ರಮದ ತರಗತಿಗಳು ನಡೆದಿದ್ದವು. ಅಲ್ಲಿಯ ಅನಕ್ಷರಸ್ಥರು, ಭಾನುವಾರ ಪರೀಕ್ಷೆ ಎದುರಿಸಿದರು.

ಬೆಳಿಗ್ಗೆ 8.30ರಿಂದ 10.30ರ ವರೆಗೆ ಮೊದಲನೇ ಪರೀಕ್ಷೆ ನಡೆಯಿತು. ಬೆಳಿಗ್ಗೆ 11.30ರಿಂದ 1.30ರ ವರೆಗೆ ಎರಡನೇ ಅವಧಿಯ ಪರೀಕ್ಷೆ ಹಾಗೂ ಮಧ್ಯಾಹ್ನ 2.30ರಿಂದ 4.30ರ ವರೆಗೆ ಮೂರನೇ ಅವಧಿಯ ಪರೀಕ್ಷೆ ಜರುಗಿತು. ಪರೀಕ್ಷಾರ್ಥಿಗಳು ತಮಗೆ ಬಿಡುವಿದ್ದಾಗ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ ಪರೀಕ್ಷೆ ಬರೆದರು.

‘ಜಿಲ್ಲೆಯ 101 ಪರೀಕ್ಷಾ ಕೇಂದ್ರಗಳಲ್ಲಿ 440 ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿತ್ತು’ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿ.ಎಂ. ಬೇವಿನಮರದ ಹೇಳಿದರು.

‘ಅಕ್ಷರ ಜ್ಞಾನ ಪಡೆದವರ ಕಲಿಕೆ ಖಾತರಿಗೆ ಈ ಪರೀಕ್ಷೆ ನಡೆಸಲಾಗಿದೆ. ಅನಕ್ಷರಸ್ಥರಿಗೆ ಪುಸ್ತಕ, ಪೆನ್ಸಿಲ್, ರಬ್ಬರ್, ನೋಟ್ಬುಕ್ ಸೇರಿ ಕಲಿಕಾ ಸಾಮಗ್ರಿಗಳನ್ನು ನೀಡಿ, 6 ತಿಂಗಳು ಕಲಿಕಾಭ್ಯಾಸ ಮಾಡಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.