ಹಾವೇರಿ: ‘ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ನಿರ್ಮಾಣಕ್ಕೆ ₹ 500 ಕೋಟಿ ವೆಚ್ಚ ಮಾಡಲಾಗಿದೆ. ಈಗ ಇದೇ ಸಂಸ್ಥೆ, ಸುಸಜ್ಜಿತ ಸೌಲಭ್ಯದೊಂದಿಗೆ ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ. 7ರಂದು ಹಿಮ್ಸ್ ಉದ್ಘಾಟನೆ ಮಾಡಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ದೇವಗಿರಿ ರಸ್ತೆಯಲ್ಲಿರುವ ಹಿಮ್ಸ್ ಸಭಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಮ್ಸ್ನಲ್ಲಿ 2022ರಿಂದಲೇ ಎಂಬಿಬಿಎಸ್ ತರಗತಿಗಳು ಶುರುವಾಗಿವೆ. ಈಗ 3ನೇ ವರ್ಷದ ವಿದ್ಯಾರ್ಥಿಗಳಿದ್ದಾರೆ. ಗಣ್ಯರ ಸಮಯ ಸಿಗದಿದ್ದರಿಂದ, ಉದ್ಘಾಟನೆಯನ್ನು ಪದೇ ಪದೇ ಮುಂದೂಡಲಾಗಿತ್ತು. ಈಗ ಎಲ್ಲರ ಒಪ್ಪಿಗೆ ಪಡೆದು, ದಿನಾಂಕ ನಿಗದಿಪಡಿಸಲಾಗಿದೆ’ ಎಂದರು.

‘ಕೇಂದ್ರ ಆರೋಗ್ಯ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರು ಹಾಗೂ ಇತರರು ಕಾರ್ಯಕ್ರಮಕ್ಕೆ ಬರಲಿದ್ದಾರೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಹಾವೇರಿ ಸೇರಿದಂತೆ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಹಾಗೂ ಯಾದಗಿರಿಯಲ್ಲಿ ಹೊಸದಾಗಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳು ಆರಂಭವಾಗಿವೆ. ಈ ಸಂಸ್ಥೆಗಳ ಪೈಕಿ ಹಾವೇರಿ ಹಿಮ್ಸ್, ಪ್ರಗತಿಯಲ್ಲಿ ಮೊದಲ ಸ್ಥಾನದಲ್ಲಿದೆ. ಶೈಕ್ಷಣಿಕ ಪ್ರಗತಿ ಹಾಗೂ ವೈದ್ಯಕೀಯ ಅಧ್ಯಯನದಲ್ಲಿ ಹೆಸರು ಮಾಡುತ್ತಿದೆ’ ಎಂದರು.

ಕೇಂದ್ರದಿಂದ ₹ 195 ಕೋಟಿ ಅನುದಾನ: ಹಿಮ್ಸ್ ನಿರ್ದೇಶಕ ಡಾ. ಪ್ರದೀಪಕುಮಾರ ಎಂ.ವಿ ಮಾತನಾಡಿ, ‘ಕೇಂದ್ರ ಪುರಸ್ಕೃತ ಯೋಜನೆಯಡಿ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸಂಸ್ಥೆ ನಿರ್ಮಾಣವಾಗಿದೆ. ಕೇಂದ್ರ ಸರ್ಕಾರದಿಂದ ₹ 195 ಕೋಟಿ ಅನುದಾನ ಬಂದಿದ್ದು, ಉಳಿದ ಹಣವನ್ನು ರಾಜ್ಯ ಸರ್ಕಾರ ನೀಡಿದೆ’ ಎಂದು ಹೇಳಿದರು.

‘ಮೂರನೇ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ ಶೇ 100ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 17 ವಿದ್ಯಾರ್ಥಿಗಳು ಸ್ನಾತಕೋತ್ತರ ಕೋರ್ಸ್ಗಾಗಿ ಪ್ರವೇಶ ಪಡೆಯಲು ಅವಕಾಶ ಸಿಕ್ಕಿದೆ. ಹೊಸದಾಗಿ ತುರ್ತು ವೈದ್ಯಕೀಯ, ಡಯಾಲಿಸೀಸ್ ವಿಷಯದಲ್ಲಿ ಬಿ.ಎಸ್ಸಿ ಕೋರ್ಸ್ ಆರಂಭಿಸಲಾಗುತ್ತಿದೆ. 100 ವಿದ್ಯಾರ್ಥಿಗಳಿಗೆ ಪ್ಯಾರಾಮೆಡಿಕಲ್ ಕೋರ್ಸ್ ಸಹ ಆರಂಭವಾಗುತ್ತಿದೆ. ಇದರ ಪ್ರವೇಶ ಪ್ರಕ್ರಿಯೆ ಶುರುವಾಗಿದೆ’ ಎಂದರು.

‘ಎಂಬಿಬಿಎಸ್ನಲ್ಲಿ ಪ್ರತಿ ವರ್ಷ ಸದ್ಯ 150 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಸೌಲಭ್ಯಕ್ಕೆ ಅನುಗುಣವಾಗಿ ಈ ಪ್ರಮಾಣವನ್ನು 200ಕ್ಕೆ ಏರಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಬಿ.ಎಸ್ಸಿ ನರ್ಸೀಂಗ್ ಕೋರ್ಸ್ನಲ್ಲಿ 40 ವಿದ್ಯಾರ್ಥಿಗಳಿದ್ದು, 60ಕ್ಕೆ ಏರಿಸಲು ತಯಾರಿ ನಡೆದಿದೆ’ ಎಂದು ಹೇಳಿದರು.

ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಎಸ್ಪಿ ಯಶೋಧಾ ವಂಟಗೋಡಿ ಇದ್ದರು.

‘ಎಂಆರ್ಐ ಘಟಕ ಸ್ಥಾಪನೆ ಶೀಘ್ರ’

‘ಹಾವೇರಿಯಲ್ಲಿ ಎಂಆರ್ಐ ಘಟಕ ಸ್ಥಾಪನೆ ಮಾಡಲು ಪ್ರಕ್ರಿಯೆ ಶುರುವಾಗಿದೆ. ಯಂತ್ರ ಪೂರೈಸಲು ಕಂಪನಿಯೊಂದು ಮುಂದೆ ಬಂದಿದ್ದು ಜಾಗದ ಪರಿಶೀಲನೆ ಮುಗಿದಿದೆ. ಎರಡು ತಿಂಗಳ ಒಳಗಾಗಿ ಘಟಕ ಬಳಕೆಗೆ ಸಿಗಲಿದೆ’ ಎಂದು ಶಿವಾನಂದ ಪಾಟೀಲ ಹೇಳಿದರು. ‘ಘಟಕವನ್ನು ಜಿಲ್ಲಾಸ್ಪತ್ರೆಯಲ್ಲಿ ಮಾಡಬೇಕಾ? ಅಥವಾ ಹಿಮ್ಸ್ನಲ್ಲಿ ಮಾಡಬೇಕಾ? ಎಂಬುದರ ಬಗ್ಗೆ ಚರ್ಚೆ ನಡೆದಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಗೆ ರೋಗಿಗಳು ಬರುತ್ತಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ಹಿಮ್ಸ್ನಲ್ಲಿ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ದೊರೆಯಲಿದೆ. ಹೀಗಾಗಿ ಹಿಮ್ಸ್ನಲ್ಲಿ ಘಟಕ ಮಾಡಿದರೆ ಅನುಕೂಲವೆಂದು ಹೇಳಲಾಗುತ್ತಿದೆ. ಈ ಗೊಂದಲದ ಬಗ್ಗೆ ವರದಿ ಪಡೆದು ಸೂಕ್ತ ಜಾಗ ಆಯ್ಕೆ ಮಾಡಲಾಗುವುದು. ಘಟಕ ಸ್ಥಾಪನೆಯಾದರೆ ಹಾವೇರಿಯ ಜನರು ದಾವಣಗೆರೆ ಹಾಗೂ ಹುಬ್ಬಳ್ಳಿಗೆ ಹೋಗುವುದು ತಪ್ಪಲಿದೆ’ ಎಂದರು. ‘ಇಕೊ ಹಾಗೂ ಟಿಎಂಟಿ ವ್ಯವಸ್ಥೆಯು ಹಿಮ್ಸ್ನಲ್ಲಿ ಶುರುವಾಗಲಿದೆ. ಇದಕ್ಕಾಗಿ ಕೆಲವರಿಗೆ ಹುಬ್ಬಳ್ಳಿಯಲ್ಲಿ ಈಗಾಗಲೇ ತರಬೇತಿ ಕೊಡಿಸಲಾಗಿದೆ. ಹೃದಯ ಸಂಬಂಧಿತ ಕಾಯಿಲೆಗಳಿಗೆ ಸ್ಥಳೀಯವಾಗಿ ಚಿಕಿತ್ಸೆ ನೀಡಲು ಈ ವ್ಯವಸ್ಥೆ ಅನುಕೂಲವಾಗಲಿದೆ’ ಎಂದು ಹೇಳಿದರು.

‘ಜಿಲ್ಲಾಸ್ಪತ್ರೆ: ರೋಗಿಗಳ ಸಂಖ್ಯೆ ಹೆಚ್ಚಳ’

‘ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. 330 ಬೆಡ್ ಆಸ್ಪತ್ರೆಯನ್ನು 500 ಬೆಡ್ಗೆ ಏರಿಸಲಾಗಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಪಿ.ಆರ್. ಹಾವನೂರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘2023ರಲ್ಲಿ 3.04 ಲಕ್ಷ 2024ರಲ್ಲಿ 3.44 ಲಕ್ಷ ಹಾಗೂ 2025ರಲ್ಲಿ 3.84 ಲಕ್ಷ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ’ ಎಂದರು.

‘ಕಬ್ಬು: ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ’

‘ರಾಜ್ಯದ ಕಾರ್ಖಾನೆಗಳಲ್ಲಿ ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಮಿತಿ ಹೇರಿದೆ. ಇದೇ ಕಾರಣಕ್ಕೆ ಕಬ್ಬು ಖರೀದಿ ವಿಚಾರದಲ್ಲಿ ಕಾರ್ಖಾನೆಯವರು ಹಿಂದೇಟು ಹಾಕುತ್ತಿದ್ದಾರೆ. ಎಥೆನಾಲ್ ಮಿತಿಯನ್ನು ಹೆಚ್ಚಿಸಿದರೆ ಮಾತ್ರ ರೈತರಿಗೆ ನ್ಯಾಯ ಸಿಗುತ್ತದೆ. ಈ ಬಗ್ಗೆ ಜನರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕು’ ಎಂದು ಶಿವಾನಂದ ಪಾಟೀಲ ಹೇಳಿದರು. ‘ರಫ್ತು ಎಥೆನಾಲ್ ಉತ್ಪಾದನೆ ಬೆಲೆ ನಿಗದಿ... ಎಲ್ಲವೂ ಕೇಂದ್ರ ಸರ್ಕಾರದ ಕೈಯಲ್ಲಿದೆ. ದೇಶದಲ್ಲಿ 5 ಕೋಟಿ ಕಬ್ಬು ಬೆಳೆಗಾರರಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.