ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೆರೆಮಲ್ಲಾಪುರ ಗ್ರಾಮದಲ್ಲಿ ಬಿಸಿ ಸಾಂಬಾರ ಪಾತ್ರೆಯಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದ ನಿರ್ಮಲಾ ಮಂಜುನಾಥ ಚಿಕ್ಕಣ್ಣನವರ (30) ಎಂಬುವವರು ಹುಬ್ಬಳ್ಳಿಯ ಕೆಎಂಸಿ–ಆರ್ಐ (ಕಿಮ್ಸ್) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

‘ಕೆರೆಮಲ್ಲಾಪುರದ ನಿರ್ಮಲಾ ಸಾವಿನ ಬಗ್ಗೆ ತಂದೆ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಹೇಳಿದರು.

‘ನಿರ್ಮಲಾ ಅವರ ಮನೆಯಲ್ಲಿ ಆಗಸ್ಟ್ 8ರಂದು ಶುಕ್ರವಾರದ ಪೂಜೆ ಇತ್ತು. ಅದಕ್ಕಾಗಿ ಅವರು ಅಡುಗೆ ಸಿದ್ಧಪಡಿಸುತ್ತಿದ್ದರು. ಅಡುಗೆ ಮನೆಯ ಒಲೆಯ ಮೇಲೆ ದೊಡ್ಡ ಪಾತ್ರೆ ಇಟ್ಟು ಸಾಂಬಾರ ಮಾಡುತ್ತಿದ್ದರು. ಸಾಂಬಾರ ಕುದಿಯುತ್ತಿತ್ತು. ಅಡುಗೆ ಮಾಡುತ್ತಿದ್ದ ನಿರ್ಮಲಾ ಅವರು ಏಕಾಏಕಿ ತಲೆಚಕ್ರ ಬಂದು ಸಾಂಬಾರ ಪಾತ್ರೆಯೊಳಗೆ ಬಿದ್ದಿದ್ದರು. ಇದರಿಂದಾಗಿ ಅವರ ಮುಖ, ಎದೆ, ಎರಡು ಕೈಗಳು ಸುಟ್ಟಿದ್ದವು. ದೇಹದ ಹಲವು ಕಡೆಗಳಲ್ಲಿ ಬೆಂಕಿ ಹೊತ್ತಿಕೊಂಡು, ತೀವ್ರ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆಎಂಸಿ–ಆರ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಸೆಪ್ಟೆಂಬರ್ 17ರಂದು ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.