ಬ್ಯಾಡಗಿ: ಪಟ್ಟಣದ ಕಾಕೋಳ ರಸ್ತೆಯಲ್ಲಿ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ಗೆ ಹಗಲಿನಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರಾತ್ರಿ ಊಟದ ಬೇಡಿಕೆ ತಗ್ಗಿದೆ.

ಇದೇ 15ರಂದು ಕ್ಯಾಂಟೀನ್ ಆರಂಭಕ್ಕೆ ಚಾಲನೆ ನೀಡಲಾಗಿದ್ದು, ಅಂದಿನಿಂದ ಕ್ಯಾಂಟೀನ್ನಲ್ಲಿ ಉಪಾಹಾರ ಹಾಗೂ ಊಟ ಲಭ್ಯವಾಗುತ್ತಿದೆ. ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಚಾಲಕರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಜನರಿಗೂ ಕ್ಯಾಂಟೀನ್ ಅನುಕೂಲವಾಗಿದೆ.

ಅಡುಗೆ ಪರಿಕರಗಳು ಸೇರಿ ₹ 1.38 ಕೋಟಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದ್ದು, ಬಡವರಿಗೆ ವರದಾನವಾಗಿದೆ. ದೊಡ್ಡ ಹೋಟೆಲ್ಗಳಲ್ಲಿ ಉಪಾಹಾರ ಹಾಗೂ ಊಟದ ಬೆಲೆ ದುಬಾರಿಯಾಗಿದೆ. ಆದರೆ, ಇಂದಿರಾ ಕ್ಯಾಂಟೀನ್ನಲ್ಲಿ ಉಪಾಹಾರಕ್ಕೆ ₹10 ಹಾಗೂ ಊಟಕ್ಕೆ ₹20 ದರವಿದೆ.

ದಿನಗೂಲಿ ನಂಬಿ ಜೀವನ ನಡೆಸುವ ಜನರು, ಬೆಳಿಗ್ಗೆಯೇ ಮನೆಯಿಂದ ಹೊರಟು ಬರುತ್ತಾರೆ. ಕೆಲವರು ಮಾತ್ರ ಮನೆಯಿಂದ ಊಟ ಕಟ್ಟಿಕೊಂಡು ಬರುತ್ತಾರೆ. ಬಹುತೇಕರು, ಹೊರಗಡೆ ತಿನ್ನುತ್ತಾರೆ. ಸದ್ಯದ ಮಾರುಕಟ್ಟೆಯಲ್ಲಿ ಎಲ್ಲದರ ದರವೂ ದುಬಾರಿಯಾಗಿದೆ. ಇಂದಿರಾ ಕ್ಯಾಂಟೀನ್ನಲ್ಲಿ ಕಡಿಮೆ ದರವಿರುವುದರಿಂದ, ಇದೊಂದು ಕಾರ್ಮಿಕರ ನೆಚ್ಚಿನ ಆಹಾರ ತಾಣವಾಗಿಯೂ ಮಾರ್ಪಟ್ಟಿದೆ.

ಬ್ಯಾಡಗಿ ಮಾತ್ರವಲ್ಲದೇ ಅಕ್ಕ–ಪಕ್ಕದ ಹಳ್ಳಿಯಿಂದ ಬರುವ ಜನರು ಸಹ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಮಾಡುತ್ತಿದ್ದಾರೆ. ಸದ್ಯ ಕ್ಯಾಂಟೀನ್ನಲ್ಲಿ ಉತ್ತಮ ಆಹಾರ ನೀಡಲಾಗುತ್ತಿದ್ದು, ಇದರಿಂದಾಗಿ ಕ್ಯಾಂಟೀನ್ಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಅಕ್ಕ–ಪಕ್ಕದ ಹಳ್ಳಿಗಳ ಜನರು ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಡಗಿಗೆ ಬಂದು ಹೋಗುತ್ತಾರೆ. ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಊಟದ ಸಂದರ್ಭದಲ್ಲಿ ಕ್ಯಾಂಟೀನ್ನಲ್ಲಿ ಹೆಚ್ಚು ಜನರು ತಿಂಡಿ–ಊಟ ಮಾಡುತ್ತಿದ್ದಾರೆ. ಆದರೆ, ರಾತ್ರಿ ಸಂದರ್ಭದಲ್ಲಿ ಮಾತ್ರ ಊಟಕ್ಕೆ ಬೇಡಿಕೆ ತಗ್ಗಿದೆ.

‘ಕಡಿಮೆ ದರವೆಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್ಗೆ ಬರುತ್ತಿದ್ದೇನೆ. ಸಾಂಬಾರ ಹಾಗೂ ಪಲ್ಯ ಕೆಲ ಬಾರಿ ರುಚಿಕರವಿರುವುದಿಲ್ಲ. ಬಡವರಿಗೆ ಆದಷ್ಟು ಅನುಕೂಲವಾಗುವ ರೀತಿಯಲ್ಲಿ ರುಚಿಕರ ಉಪಾಹಾರ ಹಾಗೂ ಊಟ ನೀಡಬೇಕು’ ಎಂದು ಗ್ರಾಹಕ ಚನ್ನಪ್ಪ ಹೇಳಿದರು.

ರಾತ್ರಿ ಉಳಿಯುವ ಊಟ: ‘ಸರ್ಕಾರದ ಮೆನು ಪ್ರಕಾರ ಪ್ರತಿದಿನವೂ ಒಂದೊಂದು ತರಹದ ಉಪಾಹಾರ ಮತ್ತು ಊಟ ತಯಾರಿಸಲಾಗುತ್ತಿದೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ಉತ್ತಮ ವ್ಯಾಪಾರವಾಗುತ್ತಿದೆ. ಆದರೆ, ರಾತ್ರಿ ಕೇವಲ 20ರಿಂದ 30 ಊಟಗಳು ಮಾತ್ರ ಹೋಗುತ್ತಿವೆ. ಹಗಲಿನ ಗ್ರಾಹಕರ ಲೆಕ್ಕದಲ್ಲಿ ರಾತ್ರಿ ಅಡುಗೆ ಮಾಡಿದರೆ, ಸಾಕಷ್ಟು ಉಳಿಯುತ್ತಿದೆ’ ಎಂದು ಕ್ಯಾಂಟೀನ್ ಸಿಬ್ಬಂದಿ ಹೇಳಿದರು.

‘ಬಡವರಿಗೆ ಇಂದಿರಾ ಕ್ಯಾಂಟೀನ್ ಉತ್ತಮವಾಗಿದೆ. ಹೊಟೆಲ್ಗಳ ರೀತಿಯಲ್ಲಿ ಆಹಾರ ಬೇಕೆಂದು ಜನರು ಬಯಸುತ್ತಿದ್ದಾರೆ. ಆದರೆ, ಇಲ್ಲಿ ಸರಳವಾಗಿ ಗುಣಮಟ್ಟದ ಅಡುಗೆ ತಯಾರಿಸಲಾಗುತ್ತದೆ. ಸ್ವಲ್ಪ ಗಟ್ಟಿಯಾದ ಸಾಂಬಾರ ತಯಾರಿಸಲಾಗುತ್ತಿದೆ. ಜನರಿಗೆ ರುಚಿಯಲ್ಲಿ ವ್ಯತ್ಯಾಸವಾದರೆ, ಅಭಿಪ್ರಾಯ ತಿಳಿಸಲು ಸಲಹಾ ಪೆಟ್ಟಿಗೆ ಇರಿಸಲಾಗಿದೆ. ಗ್ರಾಹಕರು ತಮ್ಮ ಅಭಿಪ್ರಾಯ ತಿಳಿಸಬಹುದು’ ಎಂದು ತಿಳಿಸಿದರು.

‘ನಿಲ್ದಾಣದ ಬಳಿ ಬೇಡಿಕೆ’

‘ಬ್ಯಾಡಗಿಯ ಬಸ್ ನಿಲ್ದಾಣ ಮೂಲಕ ಕಾರ್ಮಿಕರು ವಿದ್ಯಾರ್ಥಿಗಳು ಹಾಗೂ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಇಂಥ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿದರೆ ಮತ್ತಷ್ಟು ಜನರಿಗೆ ಅನುಕೂಲವಾಗುತ್ತಿತ್ತು’ ಎಂದು ಸ್ಥಳೀಯ ನಿವಾಸಿ ಅರುಣ ಹೇಳಿದರು. ‘ಬಸ್ ನಿಲ್ದಾಣ ಬಳಿ ಜಾಗ ಸಿಗಲಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಇಂದಿರಾ ಕ್ಯಾಂಟೀನ್ ಇರುವುದು ಬಡವರಿಗಾಗಿ. ಖಾಸಗಿ ಜಾಗವನ್ನಾದರೂ ಖರೀದಿಸಿ ಕ್ಯಾಂಟೀನ್ ಮಾಡಬಹುದಿತ್ತು. ಆದರೆ ದುಬಾರಿ ಎನ್ನುವ ಕಾರಣಕ್ಕೆ ಜಾಗ ಸಿಗಲಿಲ್ಲವೆಂದು ಹೇಳುವುದು ಸರಿಯಲ್ಲ’ ಎಂದರು. ‘ಮುಂಬರುವ ದಿನಗಳಲ್ಲಾದರೂ ಬಸ್ ನಿಲ್ದಾಣ ಬಳಿ ಇಂದಿರಾ ಕ್ಯಾಂಟೀನ್ ತೆರೆಯಲು ಅಧಿಕಾರಿಗಳು ಗಮನ ಹರಿಸಬೇಕು’ ಎಂದು ತಿಳಿಸಿದರು.

‘ತಿಂಗಳ ನಂತರ ನಿಖರ ಲೆಕ್ಕ’

‘ಇಂದಿರಾ ಕ್ಯಾಂಟೀನ್ಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಒಂದು ತಿಂಗಳವರೆಗೆ ನಿಗದಿಯಂತೆ ಉಪಾಹಾರ ಹಾಗೂ ಊಟ ತಯಾರಿಸಲಾಗುತ್ತದೆ. ಒಂದು ತಿಂಗಳ ನಂತರ ನಿಖರ ಲೆಕ್ಕ ದೊರೆಯಲಿದ್ದು ಊಟ ಉಳಿಯದಂತೆ ಮಾರ್ಪಾಡು ಮಾಡಲಾಗುವುದು’ ಎಂದು ಬ್ಯಾಡಗಿ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ತಿಳಿಸಿದರು. ‘ಸದ್ಯ ನಿರಂತರ ಮಳೆಯಾಗುತ್ತಿರುವುದರಿಂದ ಸಂಜೆ ಹೊತ್ತು ಊಟಕ್ಕೆ ಕಡಿಮೆ ಜನರು ಬರುತ್ತಿದ್ದಾರೆ. ರಾತ್ರಿ ಆಹಾರ ಕೆಡದಂತೆ ನೋಡಿಕೊಳ್ಳಲು ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.