ಸವಣೂರು: ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ವಿಮಾ ಮಾಡಿಸಿ ಕುಟುಂಬವನ್ನು ಸುರಕ್ಷಿತವಾಗಿರಿಸಿ ಎಂದು ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ಮುರುಗೇಶ ಕೆಂಚಣ್ಣವರ ಹೇಳಿದರು.

ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಹುರಳಿಕುಪ್ಪಿ, ಕರ್ಣಾಟಕ ಬ್ಯಾಂಕ್ ಸವಣೂರು, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಸವಣೂರ, ಗ್ರಾಮ ಪಂಚಾಯಿತಿ ತೊಂಡೂರು, ಸಿ.ಎಪ್.ಎಲ್ ಸವಣೂರು ಹಾಗೂ ಎನ್.ಆರ್.ಎಲ್.ಎಂ ಆಶ್ರಯದಲ್ಲಿ ಜರುಗಿದ ‘ಜನ ಸುರಕ್ಷಾ ಅಭಿಯಾನ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಕಾರ್ಯಕ್ರಮ‘ ಉದ್ಘಾಟಿಸಿ ಉದ್ಘಾಟಿಸಿ ಮಾತನಾಡಿದರು.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೇವಲ ವ್ಯವಹಾರ ಮಾಡಿಕೊಳ್ಳಲು ಸೀಮಿತಗೊಳಿಸದೆ ಕೇಂದ್ರ ಸರ್ಕಾರ ರೈತರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಬ್ಯಾಂಕಿನ ಪ್ರತಿಯೋಬ್ಬ ಗ್ರಾಹಕರ ಕುಟುಂಬಗಳಿಗೆ ಅನುಕೂಲವಾಗುವ ಉದ್ದೇಶದಿಂದ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.

ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಹರೀಶ್ ಹಿರಳ್ಳಿ ಮಾತನಾಡಿ, ಪ್ರಧಾನ ಮಂತ್ರಿ ಯೊಜನೆಗಳಾದ ಜನಧನ್, ಜೀವನ್ ಜ್ಯೋತಿ, ಸುರಕ್ಷಾ ವಿಮಾ, ಕೆವೈಸಿ ಹಾಗೂ ಅಕೌಂಟ್ ನಾಮಿನೇಷನ, ಬಜೆಟ್, ಡಿಜಿಟಲ್ ಬ್ಯಾಂಕಿಂಗ್ ಸೇರಿದಂತೆ 1930 ಸಹಾಯವಾಣಿ ಬಗ್ಗೆ ವಿವರವಾಗಿ ಮಾತನಾಡಿದರು.

ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸುಮಂತ್ ವಿ.ಮಾತನಾಡಿ, ಕಾರ್ಯಕ್ರಮ ಗುರಿ ಉದ್ದೇಶಗಳನ್ನು ತಿಳಿಸಿದರು.

ಯಲ್ಲವ್ವ ಹನಕನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾದೇವಿ ಕಾಳಪ್ಪನವರ, ಹನುಮಂತ ಕಲಾದಗಿ, ಮಾಲತೇಶ ಎ.ಜಿ., ಗ್ರಾಮಸ್ಥರು ಭಾಗವಹಿಸಿದ್ದರು.
ಸಿ.ಎಫ್.ಎಲ್. ಕೊಟ್ರೇಶ್ ಕಡ್ಲಿಮಠ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.