ಹಾವೇರಿ: ‘ಬಸವಣ್ಣ ಹಾಗೂ ಕನಕದಾಸರದ್ದು ಜಾತ್ಯತೀತ ತತ್ವ. ಎಲ್ಲ ಸಮುದಾಯದವರು ಸಹಬಾಳ್ವೆ ಹಾಗೂ ಪರಸ್ಪರ ಪ್ರೀತಿಯಿಂದ ಬಾಳುವುದನ್ನು ಅವರು ತಿಳಿಸಿದ್ದಾರೆ. ಆದರೆ, ಎಲ್ಲ ದಾರ್ಶನಿಕರನ್ನು ಜಾತಿಯಿಂದ ಗುರುತಿಸಿ, ಸೀಮಿತಗೊಳಿಸುತ್ತಿರುವುದು ದುರಂತ’ ಎಂದು ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿರುವ ಕನಕ ಗುರುಪೀಠದಲ್ಲಿ ಜಿಲ್ಲಾಡಳಿತ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಭಕ್ತ ಶ್ರೇಷ್ಠ ಕನಕದಾಸರ 538ನೇ ಜಯಂತ್ಯುತ್ಸವ’ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

‘12ನೇ ಶತಮಾನದಲ್ಲಿ ಬಸವಣ್ಣನವರು, ‘ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ; ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ’ ಎಂದಿದ್ದಾರೆ. 15ನೇ ಶತಮಾನದಲ್ಲಿ ಕನಕದಾಸರು, ‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ. ಕುಲದ ನೆಲೆಯನೆನಾದರೂ ಬಲ್ಲಿರಾ?’ ಎಂದು ಹೇಳಿದ್ದಾರೆ. ಆದರೆ, ಈಗ ಯಾವುದೇ ಕಚೇರಿಗೆ ಹೋದರೂ ಮೊದಲಿಗೆ ಜಾತಿ ಕೇಳುತ್ತಾರೆ. ಜಾತಿ ಮೇಲೆಯೇ ಕೆಲಸ ಆಗುವುದನ್ನು ನಾವು ಕೇಳುತ್ತಿದ್ದೇವೆ’ ಎಂದರು.

‘ಬಿ.ಆರ್. ಅಂಬೇಡ್ಕರ್ ಅವರು ಪರಿಶಿಷ್ಟರಿಗೆ, ಬಸವಣ್ಣನವರು ಲಿಂಗಾಯತರಿಗೆ, ಸರ್ವಜ್ಞ ಕುಂಬಾರರಿಗೆ, ಕನಕದಾಸರು ಕುರುಬರಿಗೆ, ಮಹರ್ಷಿ ವಾಲ್ಮೀಕಿ ನಾಯಕರಿಗೆ, ಅಂಬಿಗರ ಚೌಡಯ್ಯ ಅವರನ್ನು ಗಂಗಾಮತ ಸಮಾಜದವರಿಗಷ್ಟೇ ಸೀಮಿತ ಮಾಡಿದ್ದೇವೆ. ಇವರೆಲ್ಲರೂ ಸಮ ಸಮಾಜ ನಿರ್ಮಾಣಕ್ಕಾಗಿ ಸಂದೇಶ ನೀಡಿದವರು. ಭಾರತ ದೇಶದ ಅನರ್ಘ್ಯ ರತ್ನಗಳು. ಇವರ ಜಯಂತಿಯನ್ನು ಎಲ್ಲ ಜಾತಿಯವರು ಒಟ್ಟಿಗೆ ಸೇರಿ ಆಚರಿಸಬೇಕು’ ಎಂದು ಹೇಳಿದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ‘ಬಸವಣ್ಣನವರ ವಚನ ಸಾಹಿತ್ಯ ಮತ್ತು ಕನಕದಾಸರ ದಾಸ ಸಾಹಿತ್ಯವೆರಡೂ ಮನುಕುಲವನ್ನು ತಿದ್ದುವ ಕೆಲಸ ಮಾಡಿವೆ. ಜಾತಿ ಹೆಸರಿನಲ್ಲಿ ಹೊಡೆದಾಡದಂತೆ ಇಬ್ಬರೂ ದಾರ್ಶನಿಕರು ಹೇಳಿದ್ದಾರೆ. ನಾವೆಲ್ಲರೂ ಕೂಡಿ ಬಾಳಿ, ದಾರ್ಶನಿಕರ ತತ್ವ ಪಾಲಿಸಬೇಕು’ ಎಂದರು.

ರೇವಣಸಿದ್ದೇಶ್ವರ ಪೀಠದ ಶಾಂತ ಮುತ್ತಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುರುಪೀಠದ ಆಡಳಿತಾಧಿಕಾರಿಯೂ ಆಗಿರುವ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ, ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಆನ್ವೇರಿ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಮಾಜಿ ಶಾಸಕ ಆರ್. ಶಂಕರ್, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಎಸ್.ಪಿ ಯಶೋಧಾ ವಂಟಗೋಡಿ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಶೀಲ್ದಾರ್ ಶರಣಮ್ಮ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲೇಶ ಕರಿಗಾರ, ವೈದ್ಯ ಪ್ರವೀಣ ಖನ್ನೂರು ಇದ್ದರು.

ಜಯಂತ್ಯುತ್ಸವದ ಅಂಗವಾಗಿ ಗುರುಪೀಠದಲ್ಲಿ ರಕ್ತದಾನ ಶಿಬಿರ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಜೆ ಭಕ್ತರ ಸಮ್ಮುಖದಲ್ಲಿ ಕನಕ ರಥೋತ್ಸವ ಅದ್ಧೂರಿಯಾಗಿ ಜರುಗಿತು.

‘ಕನಕರು ಜಾತ್ಯತೀತ ನಾಯಕ’

‘ದಾರ್ಶನಿಕರ ಜಯಂತಿ ಬಂದಾಗ ಆಯಾ ಜಾತಿಯ ಮುಖಂಡರನ್ನಷ್ಟೇ ಕರೆದು ಸಭೆ ಮಾಡುವುದನ್ನು ಜಿಲ್ಲಾಡಳಿತ ಕೈ ಬಿಡಬೇಕು. ಸರ್ವ ಸಮಾಜದವರನ್ನು ಕರೆದು ಸಭೆ ಮಾಡಿ ದಾರ್ಶನಿಕರ ಜಯಂತಿ ಮಾಡಿದರೆ ಅವರ ತತ್ವ ಪಾಲಿಸಿದಂತಾಗುತ್ತದೆ’ ಎಂದು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. ‘ಕನಕದಾಸರು ಜಾತಿ ವ್ಯವಸ್ಥೆಯಿಂದಾಗಿ ಸಾಕಷ್ಟು ಕಷ್ಟಪಟ್ಟರು. ಆದರೆ ಅವರು ಯಾವುದೇ ಜಾತಿಯನ್ನು ದ್ವೇಷಿಸಲಿಲ್ಲ. ತಮ್ಮ ಅಗಾಧ ಜ್ಞಾನದಿಂದ ಪ್ರೀತಿಯ ಮೂಲಕ ಮನುಷ್ಯ ಕುಲ ಒಂದೇ ಎಂಬ ಸಂದೇಶ ಸಾರಿದರು. ಅವರು ಕುರುಬ ಜಾತಿಗೆ ಸೀಮಿತವಾಗಿಲ್ಲ. ಅವರೊಬ್ಬ ಜಾತ್ಯತೀತ ನಾಯಕ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.