ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಮಳೆಗೆ ನಲುಗಿದ ಹತ್ತಿ ಬೆಳೆ

Last Updated 16 ಅಕ್ಟೋಬರ್ 2020, 16:58 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯಲ್ಲಿನಿರಂತರವಾಗಿ ನಾಲ್ಕು ದಿನಗಳಿಂದ ಸುರಿದ ತುಂತುರು ಮಳೆಗೆ ಬೆಳೆಗಳು ನಾಶವಾಗಿವೆ. ತಾಲ್ಲೂಕಿನ ದೇವಿಹೊಸೂರು ಗ್ರಾಮದಲ್ಲಿ ಹತ್ತಿ, ಶೇಂಗಾ, ಮೆಕ್ಕೆಜೋಳ ಬೆಳೆಗಳು ನಾಶವಾಗಿವೆ.

‘ಸುಮಾರು 250 ಹೆಕ್ಟೇರ್‌ನಷ್ಟು ಶೇಂಗಾ, 1000 ಹೆಕ್ಟೇರ್‌ನಷ್ಟು ಮೆಕ್ಕೆಜೋಳ, 500 ಹೆಕ್ಟೇರ್‌ನಷ್ಟು ಹತ್ತಿ ಬೆಳೆಗಳು ನೀರುಪಾಲಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಸಿಗಲಿಲ್ಲ’ ಎಂಬಂತಾಗಿದೆ ನಮ್ಮ ಪರಿಸ್ಥಿತಿ. ಹತ್ತಿ ಬೆಳೆ ಕೊಯ್ಲಿಗೆ ಬಂದಿತ್ತು. ಈಗ ಮಳೆ ನೀರಿನಿಂದ ಹತ್ತಿ ಕಾಯಿಗಳು ಕೊಳೆತಿವೆ. ಅರಳಿ ನಿಂತಿದ್ದ ಹತ್ತಿ ನೀರುಪಾಲಾಗಿವೆ. ಗಿಡಗಳಲ್ಲಿರುವ ಹತ್ತಿಯನ್ನು ಬಿಡಿಸಲು ಬಾರದಾಗಿದೆ. ಉತ್ತಮ ದರವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ರೈತ ಗೋಣೆಪ್ಪ ಬಿ.ಕರಿಗಾರ್‌ ಸಮಸ್ಯೆ ತೋಡಿಕೊಂಡರು.

‘ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಧಾವಿಸಬೇಕು. ನಮ್ಮ ಜಿಲ್ಲೆಯವರೇ ಆದ ಕೃಷಿ ಸಚಿವರು ರೈತರ ನೋವಿಗೆ ಸ್ಪಂದಿಸಬೇಕು. ಮೂರು ವರ್ಷಗಳಿಂದ ಸಂಕಷ್ಟದಲ್ಲಿರುವ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು’ ಎಂದು ರೈತರಾದ ಅಶೋಕ ರೆಡ್ಡಿ ಮತ್ತು ಗೋಣೆಪ್ಪ ಕರಿಗಾರ್‌ ಒತ್ತಾಯಿಸಿದರು.

17 ಸಾವಿರ ಹೆಕ್ಟೇರ್‌ ಬೆಳೆ ನಾಶ:

ಪ್ರಸಕ್ತ ವರ್ಷ ಮಳೆಯಿಂದ ಇದುವರೆಗೆ 14,653 ಹೆಕ್ಟೇರ್‌ ಕೃಷಿ ಬೆಳೆ, 2,520 ಹೆಕ್ಟೇರ್‌ ತೋಟಗಾರಿಕಾ ಬೆಳೆ ಸೇರಿದಂತೆ ಒಟ್ಟು 17,173 ಹೆಕ್ಟೇರ್‌ ಬೆಳೆ ನಾಶವಾಗಿದೆ. 2667 ಮನೆಗಳು ಭಾಗಶಃ ಮತ್ತು 25 ಮನೆಗಳು ಸಂಪೂರ್ಣ ಹಾನಿಯಾಗಿವೆ. ಜತೆಗೆ ಐವರು ವ್ಯಕ್ತಿಗಳು ಹಾಗೂ ನಾಲ್ಕು ಜಾನುವಾರು ಮೃತಪಟ್ಟಿವೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT