ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭ್ರಷ್ಠಾಚಾರ ಮುಕ್ತ ನಾಡಿಗಾಗಿ ಶ್ರಮಿಸೋಣ: ಮಹಿಮಾ ಪಟೇಲ್‌

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಭೆಯಲ್ಲಿ ಮಹಿಮಾ ಪಟೇಲ್‌ ಅಭಿಮತ
Published : 31 ಆಗಸ್ಟ್ 2024, 16:13 IST
Last Updated : 31 ಆಗಸ್ಟ್ 2024, 16:13 IST
ಫಾಲೋ ಮಾಡಿ
Comments

ಶಿಗ್ಗಾವಿ: ಭ್ರಷ್ಠಾಚಾರ ಮುಕ್ತ ನಾಡಿಗಾಗಿ ಒಗ್ಗಟ್ಟಿನಿಂದ ಶ್ರಮಿಸೋಣ. ಅದಕ್ಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಉದಯವಾಗಿದ್ದು, ಅದಕ್ಕೆ ಬೆಂಬಲಿಸುವ ಮೂಲಕ ಸದೃಢ ನಾಡು ನಿರ್ಮಾಣ ಮಾಡಬೇಕು ಎಂದು ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮಾ ಪಟೇಲ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ಕೆಆರ್‌ಎಸ್‌ ವತಿಯಿಂದ ನಡೆದ ನಡೆದ ಲಂಚಮುಕ್ತ ಶಿಗ್ಗಾವಿಗಾಗಿ ಬೃಹತ್ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಲಂಚ, ಭ್ರಷ್ಟಾಚಾರ ಮುಕ್ತಗೊಳಿಸಿದಾಗ ಮಾತ್ರ ದೇಶಗಟ್ಟಿಗೊಳ್ಳಲು ಸಾಧ್ಯವಿದೆ. ಅದಕ್ಕಾಗಿ ನಾಡಪ್ರೇಮಿಗಳು ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಬೇಕಾಗಿದೆ ಎಂದರು.

ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಮಾತನಾಡಿ, ಲಂಚ, ಭ್ರಷ್ಠಾಚಾರ ಎಂಬ ವಿಷದ ಕಸವನ್ನು ಕಿತ್ತುಹಾಕಬೇಕು. ಪ್ರತಿಯೊಬ್ಬರಲ್ಲಿ ನಮ್ಮ ದೇಶ ನಮ್ಮೂರು ಎಂಬ ಮನೋಭಾವನೆಗಳು ಮೂಡಬೇಕು. ದೇಶಕ್ಕಾಗಿ ನಮ್ಮ ಕೊಡುಗೆ ಏನು ಎಂಬ ಚಿಂತನೆ ಬೆಳೆಯಬೇಕು. ದೇಶಕ್ಕಾಗಿ ಜೀವನ ತ್ಯಾಗ ಮಾಡಿರುವ ಮಹಾತ್ಮರ ಸ್ಮರಿಸುವ ಜತೆಗೆ ಅವರ ಆದರ್ಶದಲ್ಲಿ ನಡೆಯಬೇಕು ಎಂದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿ ಕಷ್ಣಾರೆಡ್ಡಿ ಮಾತನಾಡಿ, ಕ್ಷೇತ್ರ ಸುಭಿಕ್ಷೆಯತ್ತ, ಅಭಿವೃದ್ಧಿಪರ ಕನಸು ಕಾಣುವುದು ಮುಖ್ಯವಾಗಿದೆ. ಭ್ರಷ್ಟ ರಾಜಕಾರಣಿಗಳು ಜೈಲು ಸೇರಿಸುವ ಕನಸು ಕಾಣಬೇಕು. ಸಮ ಸಮಾಜದ ಕನಸು ನಮ್ಮದಾಗಬೇಕು. ದೇಶದ ಅಭಿವೃದ್ಧಿಯಲ್ಲಿ ನಮ್ಮೆಲ್ಲರ ಪಾತ್ರ ಮುಖ್ಯವಾಗಿದೆ. ಹೀಗಾಗಿ ಕೆಆರ್‌ಎಸ್ ಪಕ್ಷ ಬೆಂಬಲಿಸಬೇಕು ಎಂದರು.

 ಪಕ್ಷದ ಸಂಘಟನಾ ಕಾರ್ಯದರ್ಶಿ ಎಲ್.ಜೀವನ್, ರಾಜ್ಯ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ, ರಾಜ್ಯ ಕಾರ್ಯದರ್ಶಿಗಳಾದ ಸಿ.ಎನ್.ದೀಪಕ್, ಜ್ಞಾನ ಸಿಂಧು ಸ್ವಾಮಿ, ಸೋಮಸುಂದರ, ಜಿಲ್ಲಾ ಉಸ್ತುವಾರಿ ಚಂದ್ರಶೇಖರ ಮಠದ, ಮುಖಂಡರಾದ ಧರ್ಮರಾಜು ಬಿಂದಲಿ, ರಘು ಜಾಣಗೆರೆ, ನರಸಿಂಹ ಮೂರ್ತಿ, ಮಲ್ಲಿಕಾರ್ಜುನ ಬಟ್ಟರಹಳ್ಳಿ, ರಮೇಶ ಗೌಡ, ಯಲ್ಲಪ್ಪ ಕಾಡಶೆಟ್ಟಿಹಳ್ಳಿ ಸೇರಿದಂತೆ ಪಕ್ಷದ ಅನೇಕ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT