ಹಾಸನ: ಗಣ್ಯರಿಗೆ ನಿಗದಿಪಡಿಸಿರುವ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30 ರ ಸಮಯ ಮೀರಿ ಗುರುವಾರ ಸಂಜೆ ದೇಗುಲಕ್ಕೆ ಬಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ₹1 ಸಾವಿರ ಟಿಕೆಟ್ ಪಡೆದು ಸಾಮಾನ್ಯ ಭಕ್ತರೊಂದಿಗೆ ಹಾಸನಾಂಬೆಯ ದರ್ಶನ ಪಡೆದರು.

ನಂತರ ಮಾತನಾಡಿ, ‘ಮಧ್ಯಾಹ್ನ 12.30ರೊಳಗೆ ಬರಬೇಕೆಂದುಕೊಂಡಿದ್ದೆ. ಆದರೆ ದೇವಿ ಈ ರೀತಿ ಕರೆಸಿಕೊಂಡಿದ್ದಾಳೆ. ಟಿಕೆಟ್ ಪಡೆದು ಜನರ ಜೊತೆಗೇ ದರ್ಶನ ಪಡೆದಿರುವುದು ಖುಷಿ ತಂದಿದೆ’ ಎಂದರು.

‘ಕೆಲ ದಿನಗಳಲ್ಲಿ ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಮಾಡಲಾಗುವುದು. ಸೆಪ್ಟೆಂಬರ್ ತಿಂಗಳ ಕಂತನ್ನೂ ಶೀಘ್ರದಲ್ಲಿಯೇ ನೀಡಲಾಗುವುದು. ಶಕ್ತಿ ಯೋಜನೆಯಿಂದ ಎಲ್ಲರಿಗೂ ಅನುಕೂಲವಾಗಿರುವುದು, ಸಾರ್ಥಕ ಭಾವನೆ ಮೂಡಿಸಿದೆ’ ಎಂದರು.

‘ರಾಜ್ಯಕ್ಕೆ, ಜನರಿಗೆ ಒಳಿತಾಗಲಿ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿ. ಯಾವುದೇ ಕರಿನೆರಳು ಆವರಿಸದಂತೆ ಕಾಪಾಡಲು ಕೋರಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.