ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಣೆಬೆನ್ನೂರು | ಮಹಾಶಿವರಾತ್ರಿ: ವಿವಿಧ ಕಾರ್ಯಕ್ರಮ ನಾಳೆ

Published 6 ಮಾರ್ಚ್ 2024, 15:14 IST
Last Updated 6 ಮಾರ್ಚ್ 2024, 15:14 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಗರದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಪಿಕೆಕೆ ಇನಿಷಿಯೇಟಿವ್ಸ್ ಹಾಗೂ ಕಾಂಗ್ರೆಸ್‌ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ ಅಭಿಮಾನಿ ಬಳಗದಿಂದ ಮಕ್ಕಳಿಗೆ ಹಾಗೂ ತಾಯಿ ಮತ್ತು ಮಗುವಿಗೆ ಪ್ರತ್ಯೇಕವಾಗಿ ಪೌರಾಣಿಕ ವೇಷಭೂಷಣ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಇಲ್ಲಿನ ಅಶೋಕ ವೃತ್ತದ ಬಳಿ ಮಾ. 8 ರಂದು ಸಂಜೆ 6 ರಿಂದ ರಾತ್ರಿ 12 ಗಂಟೆಯವರೆಗೆ ಏರ್ಪಡಿಸಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಯಿ ಮತ್ತು ಮಗು ಹಾಗೂ 8 ರಿಂದ 14 ವರ್ಷದೊಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಬಹುದಾಗಿದೆ ಎಂದರು.

ತಾಯಿ ಮ್ತು ಮಗು ಸ್ಪರ್ಧೆಗೆ ಮೊದಲ ಬಹುಮಾನ ₹15 ಸಾವಿರ, ದ್ವಿತೀಯ ಬಹುಮಾನ ₹10 ಸಾವಿರ ಹಾಗೂ ತೃತೀಯ ಬಹುಮಾನ ₹7.5 ಸಾವಿರ ನೀಡಲಾಗುವುದು.

8 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಪ್ರಥಮ ಬಹುಮಾನ ₹10 ಸಾವಿರ, ದ್ವಿತೀಯ ಬಹುಮಾನ ₹7500 ಹಾಗೂ ತೃತೀಯ ಬಹುಮಾನ ₹5 ಸಾವಿರ ಬಹುಮಾನ ನೀಡಲಾಗುವುದು ಎಂದರು.

ಸರಿಗಮಪ ಖ್ಯಾತಿಯ ಹನುಮಂತ, ಖಾಸಿಂಸಾಬ್, ಮೊಬೀನಾ ಸೇರಿದಂತೆ ಹಾಸ್ಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಭಕ್ತಿಗೀತೆ, ಜಾನಪದ, ಶಿವ ತಾಂಡವ ನೃತ್ಯ, ಭರತನಾಟ್ಯ, ಹಾಸ್ಯ ಸಂವಾದ ಕಾರ್ಯಕ್ರಮಗಳು ನಡೆಯುತ್ತವೆ. ವಿಜೇತರಾದವರಿಗೆ ನಗದು ಬಹುಮಾನ ವಿತರಿಸಲಾಗುವುದು ಎಂದರು.

ಆಸಕ್ತರು ಮೊ.ನಂ; 7676185824 ಹಾಗೂ 9164803582ಗೆ ಸಂಪರ್ಕಿಸಬಹುದು. ಹೆಸರು ನೋಂದಾಯಿಸಲು ಮಾ.7 ಕೊನೆಯ ದಿನವಾಗಿದೆ ಎಂದು ತಿಳಿಸಿದರು.

ಮಂಜನಗೌಡ ಪಾಟೀಲ, ಯಲ್ಲಪ್ಪ ರಡ್ಡೇರ, ಇರ್ಫಾನ ದಿಡಗೂರ, ಗಂಗಾಧರ ಬಣಕಾರ, ಹನುಮಂತಪ್ಪ ಬ್ಯಾಲದಹಳ್ಳಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT