ಬುಧವಾರ, ಜನವರಿ 19, 2022
17 °C
ಪಕ್ಷೇತರ ಅಭ್ಯರ್ಥಿ ಮಂಜುನಾಥ ಅಡ್ಮನಿ ಹೇಳಿಕೆ

ಶೋಷಿತರ ಪರವಾಗಿ ಸ್ಪರ್ಧಿಸಿರುವೆ: ಪಕ್ಷೇತರ ಅಭ್ಯರ್ಥಿ ಮಂಜುನಾಥ ಅಡ್ಮನಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಪ್ರತಿಯೊಂದು ರಾಜಕೀಯ ಪಕ್ಷವು ಚುನಾವಣೆಯ ಸಂದರ್ಭದಲ್ಲಿ ಮಾತ್ರ ದಲಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ. ಚುನಾವಣೆ ಮುಗಿದ ನಂತರ ನಿರ್ಲಕ್ಷಿಸುತ್ತವೆ. ದಲಿತರಿಗೆ ಸಮಾನ ಹಕ್ಕು ಮತ್ತು ಪ್ರಾಧಾನ್ಯತೆ ಕಲ್ಪಿಸುವ ಉದ್ದೇಶದಿಂದ  ಸ್ಪರ್ಧಿಸಿದ್ದೇನೆ ಎಂದು ವಿಧಾನ ಪರಿಷತ್‌ ಚುನಾವಣೆಯ ಧಾರವಾಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಂಜುನಾಥ ಅಡ್ಮನಿ ತಿಳಿಸಿದರು. 

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜಕೀಯ ಪ್ರಾತಿನಿಧ್ಯ ಪಡೆಯುವ ಮೂಲಕವೇ ದಲಿತರ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು ಎಂದು ತೀರ್ಮಾನಿಸಿದ್ದೇವೆ. ದಲಿತ ನಾಯಕರ ಸರ್ವ ಸಮ್ಮತ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ. ಶೇ 40ರಷ್ಟಿರುವ ದಲಿತರ ಮತಗಳನ್ನು ಪಡೆಯುವ ವಿಶ್ವಾಸ ನನಗಿದೆ ಎಂದರು. 

ಚುನಾವಣಾ ರಾಜಕೀಯವು ಉಳ್ಳವರ ಮತ್ತು ಪ್ರಭಾವಿಗಳ ಸ್ವತ್ತಾಗಿ ಹೋಗಿದೆ. ವೃತ್ತಿಪರರಿಗೆ ಅಲ್ಲಿ ಅವಕಾಶವೇ ಇಲ್ಲದಂತಾಗಿದೆ. ಚುನಾವಣೆಗಳಲ್ಲಿ ಇತರ ಕ್ಷೇತ್ರಗಳ ಸಾಧಕರಿಗೆ ಮತ್ತು ಉತ್ಸಾಹಿಗಳಿಗೆ ಅವಕಾಶ ಸಿಗುವಂತಾಗಲಿ ಎಂಬುದು ನನ್ನ ಕಳಕಳಿ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು