ಹಾವೇರಿ: ಪೌರ ನೌಕರರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಶನಿವಾರ ಅಂತ್ಯಗೊಂಡಿದ್ದು, ಕೆಲಸಕ್ಕೆ ಪುನಃ ಹಾಜರಾಗುವುದಾಗಿ ನೌಕರರು ಘೋಷಿಸಿದ್ದಾರೆ. ಆದರೆ, ನಗರದಲ್ಲಿ ಮಾತ್ರ ಕಸದ ರಾಶಿ ವಿಲೇವಾರಿಯಾಗದಿರುವುದು ಕಂಡುಬಂತು.

‘ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಗುತ್ತಿಗೆ ಆಧಾರದಲ್ಲಿರುವ ನೌಕರರಿಗೆ ನೇರ ವೇತನ ಪಾವತಿ ಮಾಡಬೇಕು’ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರ ನೌಕರರು ಧರಣಿ ನಡೆಸುತ್ತಿದ್ದರು. ‘ನೌಕರರ ಬೇಡಿಕೆಗಳನ್ನು ಹಂತ ಹಂತವಾಗಿ ವಾರದೊಳಗೆ ಈಡೇರಿಸಲಾಗುವುದು’ ಎಂದು ಸರ್ಕಾರದ ಕಾರ್ಯದರ್ಶಿಯವರು ಲಿಖಿತ ಭರವಸೆ ನೀಡಿದ್ದಾರೆ. ಹೀಗಾಗಿ, ನೌಕರರು ಮುಷ್ಕರ ಹಿಂಪಡೆದಿದ್ದಾರೆ.

ಮುಷ್ಕರ ಮುಕ್ತಾಯವಾದ ನಂತರ ನೌಕರರು ಕೆಲಸಕ್ಕೆ ಹಾಜರಾದರು. ಆದರೆ, ಮೂರು ದಿನಗಳಿಂದ ಕಸದ ರಾಶಿ ಇದ್ದ ಸ್ಥಳದಲ್ಲಿಯೇ ಇತ್ತು. ನೌಕರರು ಹಾಗೂ ವಾಹನಗಳ ಸಂಖ್ಯೆ ಕಡಿಮೆ ಇರುವುದರಿಂದ, ಶನಿವಾರ ಪೂರ್ಣ ಪ್ರಮಾಣದಲ್ಲಿ ಕಸ ಸಾಗಣೆ ಮಾಡಲು ಅಡ್ಡಿ ಉಂಟಾಯಿತು.

ನಗರದ ಲಾಲ್ ಬಹದ್ದೂರು ಶಾಸ್ತ್ರಿ ಮಾರುಕಟ್ಟೆ, ಗುತ್ತಲ ರಸ್ತೆ, ಕಾಗಿನೆಲೆ ವೃತ್ತ, ಎಂ.ಜಿ.ರಸ್ತೆಯ ಹಲವು ಕಡೆಗಳಲ್ಲಿ ಶನಿವಾರ ಸಂಜೆಯೂ ಕಸದ ರಾಶಿ ಕಂಡುಬಂತು.

ಕಸ ಸಂಗ್ರಹ ವಾಹನದ ಚಾಲಕರು, ಲೋಡರ್ಸ್ ಕ್ಲೀನರ್ಸ್, ಗಾರ್ಡನರ್, ಸ್ಯಾನಿಟರಿ, ಸೂಪರ್ವೈಸರ್, ಯುಜಿಡಿ ಸಹಾಯಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಮುಷ್ಕರ ಮುಗಿದಿದ್ದರಿಂದ ಕೆಲಸಕ್ಕೆ ಹಾಜರಾದ ಇವರಿಂದ, ಕಸ ಸಾಗಿಸಲು ಸಾಧ್ಯವಾಗಿಲ್ಲವೆಂದು ಸಾರ್ವಜನಿಕರು ದೂರಿದರು.

‘ಪೌರ ನೌಕರರು ಮುಷ್ಕರ ನಡೆಸಿದ್ದರಿಂದ, ಮಾರುಕಟ್ಟೆಯ ಕಸ ಇದ್ದ ಜಾಗದಲ್ಲೇ ಇದೆ. ಶನಿವಾರ ಮುಷ್ಕರ ಹಿಂಪಡೆದ ಬಳಿಕವೂ ಸಿಬ್ಬಂದಿ ಮಾರುಕಟ್ಟೆಗೆ ಬಂದಿಲ್ಲ. ಕಸದ ರಾಶಿ ಕೊಳೆತು, ದುರ್ನಾತ ಬರುತ್ತಿದೆ. ತ್ವರಿತವಾಗಿ ಕಸ ವಿಲೇವಾರಿ ಮಾಡದಿದ್ದರೆ, ವ್ಯಾಪಾರಿಗಳು ಪ್ರತಿಭಟನೆ ಮಾಡುವ ಪರಿಸ್ಥಿತಿ ಬರುತ್ತದೆ’ ಎಂದು ಲಾಲ್ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯ ವ್ಯಾಪಾರಿ ರಫೀಕ್ ತಿಳಿಸಿದರು.

‘ಹಾವೇರಿ ಮೊದಲೇ ಸ್ವಚ್ಛವಿಲ್ಲ. ಎಲ್ಲೆಂದರಲ್ಲಿ ಗಲೀಜು ಹೆಚ್ಚಾಗಿದೆ. ನೌಕರರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಮ್ಮದೇನು ಅಭ್ಯಂತರವಿಲ್ಲ. ಕಸವನ್ನು ಸಂಗ್ರಹಿಸಿ ಬೇಕಾದರೆ, ಜನಪ್ರತಿನಿಧಿಗಳ ಮನೆ ಮುಂದೆ ಸುರಿದು ಪ್ರತಿಭಟನೆ ಮಾಡಲಿ. ಆದರೆ, ಸಾಮಾನ್ಯ ಜನರಿಗೆ ತೊಂದರೆ ಆಗಬಾರದು. ತಕ್ಷಣ ಹಾವೇರಿಯಲ್ಲಿರುವ ಕಸವನ್ನು ವಿಲೇವಾರಿ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಒಂದು ವಾರದ ಗಡುವು:

‘ಜ್ಯೋತಿ ಸಂಜೀವಿನಿ ಯೋಜನೆಗೆ ಸೇರಿಸಲಾಗುವುದು. ಕಸ ಸಂಗ್ರಹ ವಾಹನದ ಚಾಲಕರು, ಲೋಡರ್ಸ್ ಕ್ಲೀನರ್ಸ್, ಗಾರ್ಡನರ್, ಸ್ಯಾನಿಟರಿ, ಸೂಪರ್ವೈಸರ್, ಯುಜಿಡಿ ಸಹಾಯಕರಿಗೆ ನೇರ ವೇತನ ಪಾವತಿ ಮಾಡುವುದಾಗಿ ಕಾರ್ಯದರ್ಶಿಯವರು ಲಿಖಿತ ಭರವಸೆ ನೀಡಿದ್ದಾರೆ. ಅವರಿಗೆ ಒಂದು ವಾರದ ಗಡುವು ನೀಡಿ ಮುಷ್ಕರ ಕೈಬಿಡಲಾಗಿದೆ’ ಎಂದು ರಾಜ್ಯ ಪೌರ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಮಹಾಂತೇಶ ತಿಗಣ್ಣನವರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.