ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿಯಲ್ಲಿ ಅನ್ಯಾಯ: ಆರೋಪ

Last Updated 8 ಜೂನ್ 2020, 16:21 IST
ಅಕ್ಷರ ಗಾತ್ರ

ಹಾವೇರಿ:ಪೌರಕಾರ್ಮಿಕರಿಗೆ ನೇರ ವೇತನವನ್ನು ವಾರದೊಳಗೆ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟ ಅವಧಿಯವರೆಗೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಎಸ್.ಸಿ, ಎಸ್.ಟಿ ಪೌರಕಾರ್ಮಿಕರ ಮತ್ತು ಜನರಲ್ ವರ್ಕರ್ಸ್ ಯೂನಿಯನ್ ರಾಜ್ಯ ಘಟಕದ ಅಧ್ಯಕ್ಷ ಡಾ.ವಿಜಯ ಗುಂಟ್ರಾಳ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಂಕಾಪುರ ಪುರಸಭೆಯಲ್ಲಿ ಹತ್ತು ವರ್ಷಗಳಿಂದ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ 24 ಜನ ಗುತ್ತಿಗೆ ಪೌರಕಾರ್ಮಿಕರಿಗೆ ಸರ್ಕಾರದ ಆದೇಶದನ್ವಯ ಸೇವಾ ಜ್ಯೇಷ್ಠತೆ ಪರಿಗಣಿಸಿ ನೇರ ನೇಮಕಾತಿ ಹಾಗೂ ನೇರ ವೇತನವನ್ನು ಪಾವತಿಸದೇ ನಾಲ್ಕು ವರ್ಷಗಳಿಂದ ಪರಿಶಿಷ್ಟ ಜಾತಿಯ ಅನಕ್ಷರಸ್ಥ ಪೌರಕಾರ್ಮಿಕರಿಗೆ ವಂಚನೆ ಮಾಡಲಾಗಿದೆ‌’ ಎಂದು ಆರೋಪಿಸಿದರು.

26 ತಿಂಗಳಿನಿಂದ ಪೌರಕಾರ್ಮಿಕರಿಗೆ ವೇತನವನ್ನು ಪಾವತಿಸಿಲ್ಲ. ಇ.ಎಸ್.ಐ., ಪಿ.ಎಫ್. ವಂತಿಗೆಯ ಹಣವನ್ನು ಆಯಾ ಇಲಾಖೆಗಳಲ್ಲಿ ಕಾರ್ಮಿಕರ ಖಾತೆಗೆ ಪಾವತಿಸಿರುವುದಿಲ್ಲ ಹಾಗೂ ಎಂಟು ತಿಂಗಳಿನಿಂದ ಬೆಳಗಿನ ಉಪಾಹಾರವನ್ನು ಪೂರೈಸದೇ ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ಪೌರಕಾರ್ಮಿಕರ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಗಂಭಿರವಾಗಿ ಪರಿಗಣಿಸಿ, ಅವರ ಸಮಸ್ಯೆಗಳ ಪರಿಹರಿಸಬೇಕು. ಇಲ್ಲದಿದ್ದರೆ ಮುಂದಿನ ವಾರದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಡಾ.ವಿಜಯ ಗುಂಟ್ರಾಳ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಗಾಳೆಪ್ಪ ದ್ವಾಸಲಕೇರಿ, ಬಸವರಾಜ ದೊಡ್ಡಮನಿ, ಬಸವರಾಜ ಸಣ್ಣಪ್ಪನವರ, ಉಡಚಪ್ಪ ಹೊಸಮನಿ, ರವಿ ಮಾದರ, ನಾಗಪ್ಪ ಮಾದರ, ಯಗ್ಗಪ್ಪ ಪೂಜಾರ, ದುಂಡಪ್ಪ ಮೇಗುಂಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT